
ಕಾರ್ಕಳ : ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳಿಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯವರು ನಡೆಸುವ ಜೆಇಇ ಮೈನ್ಸ್ (ಸೆಷನ್-1) 2026ನೇ ಸಾಲಿನ ಅರ್ಹತಾ ಪರೀಕ್ಷೆಯಲ್ಲಿ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ 3 ವಿದ್ಯಾರ್ಥಿಗಳು 99ಕ್ಕಿಂತ ಅಧಿಕ, 102 ವಿದ್ಯಾರ್ಥಿಗಳು 90 ಪರ್ಸೆಂಟೈಲ್‌ಗಿಂತ ಅಧಿಕ ಅಂಕ ಪಡೆದು ಮುಂದಿನ ಹಂತದ ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ.
ವಿದ್ಯಾರ್ಥಿಗಳಾದ ನಮಿತ್ ಕೃಷ್ಣಮೂರ್ತಿ ಹೆಗಡೆ – 99.4981217 ಪರ್ಸೆಂಟೈಲ್, ನಾಗದೇವ್ ಎಂ.ಜಿ. – 99.3310617 ಪರ್ಸೆಂಟೈಲ್, ಪ್ರಥಮ್ ತಮ್ಮಣ್ಣ ಗೌಡರ್ – 99.1416986 ಪರ್ಸೆಂಟೈಲ್ ಪಡೆದುಕೊಂಡಿದ್ದಾರೆ.
ತೇಜಸ್ ಆರ್. ಬಿ. – 98.9615457, ನಿನಾದ ರಾಜೇಶ್ ನಾಯ್ಕ್- 98.9463580, ಧನುಷ್ ಹೆಚ್. ಎ.- 98.5706065, ಸಂವಿತ್ ಅಮಿತ್ ಗೋಕರ್ಣ- 98.5706065, ದೃಶ್ಯ- 98.4130581, ಸುಕ್ಷಿತ್ ಗಿರೀಶ್ ಗೌಡ- 98.3503880, ತೇಜಸ್ ಎನ್. ಇ. – 98.3227894, ತೇಜಸ್ ಹೆಗಡೆ ಎಚ್. ಡಿ. -98.1925416, ಅಕ್ಷತಾ ಮೋಹನ್ ಹೆಗಡೆ – 98.1682710, ಪ್ರಜ್ವಲ್ ಭಟ್- 98.0498968, ವಿಶ್ವೇಶ್ ಎನ್. ಎಚ್.- 98.0348799 ಪರ್ಸೆಂಟೈಲ್‌ಗಳನ್ನು ಪಡೆದುಕೊಂಡಿದ್ದಾರೆ.
99 ಪರ್ಸೆಂಟೈಲ್‌ಗಿಂತ ಅಧಿಕ 3 ವಿದ್ಯಾರ್ಥಿಗಳು, 98 ಪರ್ಸೆಂಟೈಲ್‌ಗಿಂತ ಅಧಿಕ 14 ವಿದ್ಯಾರ್ಥಿಗಳು, 95 ಪರ್ಸೆಂಟೈಲ್‌ಗಿಂತ ಅಧಿಕ 45 ವಿದ್ಯಾರ್ಥಿಗಳು, 90 ಪರ್ಸೆಂಟೈಲ್‌ಗಿಂತ ಅಧಿಕ ಅಂಕವನ್ನು 102 ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.
ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಪ್ರಾಂಶುಪಾಲರು, ಆಡಳಿತ ಮಂಡಳಿ, ಉಪನ್ಯಾಸಕ ವರ್ಗ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ಸಂಸ್ಥೆಯ ಜೆಇಇ ಪರೀಕ್ಷೆಯ ಸಂಯೋಜಕ ನಂದೀಶ್ ಅಭಿನಂದಿಸಿದ್ದಾರೆ.



































