
ಕಾರ್ಕಳದ ಬಂಡಿ ಮಠದಲ್ಲಿ ಮಾರ್ಚ್ 17 ಸೋಮವಾರ ಛತ್ರಪತಿ ಶಿವಾಜಿ ಎಂಬ ನಾಟಕ ಪ್ರದರ್ಶನ ಗೊಳ್ಳಲಿದೆ.
ಕಾರ್ಕಳದಲ್ಲಿ ಕಳೆದ ಒಂದೂವರೆ ವರ್ಷಗಳಿಂದ ವೈವಿಧ್ಯಮಯ ಕಾರ್ಯಕ್ರಮ ಮಾಡುವ ಮೂಲಕ ಮನೆ ಮಾತಾದ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗದ ಕಾರ್ಕಳ ಟೈಗರ್ಸ್ ಈ ಕಾರ್ಯಕ್ರಮವನ್ನು ಹಮ್ಮಿ ಕೊಂಡಿದೆ.
ನಾಟಕ ರಂಗದ ದಿಗ್ಗಜ ವಿಜಯ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದಲ್ಲಿ ಈ ನಾಟಕ ಪ್ರದರ್ಶನಗೊಳ್ಳಲಿದೆ.
ವಿಜಯ ಕುಮಾರ್ ಕೊಡಿಯಾಲ್ ಬೈಲ್ ರವರು ಈ ನಾಟಕವನ್ನು ಹೊಸತಾಗಿ ರಚನೆ ಮಾಡಿದ್ದು ಕಾರ್ಕಳದಲ್ಲಿ ಪ್ರಥಮ ಪ್ರದರ್ಶನ ಇದಾಗಿದೆ.
ಇವತ್ತು ಸಾಯಂಕಾಲ 6 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದ್ದು, ಕಾರ್ಕಳ ಹಾಗು ಹೆಬ್ರಿಯ ಜನತೆ ಈ ದೇಶ ಭಕ್ತಿಯ ನಾಟಕ ವೀಕ್ಷಣೆ ಮಾಡುವಂತೆ ಸಂಘಟಕರು ವಿನಂತಿ ಮಾಡಿದ್ದಾರೆ.