
ಕಾರ್ಕಳ: ಪಳ್ಳಿ ನಿವಾಸಿ ಹಾಗೂ ಖ್ಯಾತ ಉದ್ಯಮಿ ಸಂತೋಷ್ ಶೆಟ್ಟಿ (47) ಅವರು ಮಾರ್ಚ್. 4ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ಕಾರ್ಕಳದ ಬೈಲೂರು ಪಳ್ಳಿ ಕ್ರಾಸ್ ಬಳಿ ಇರುವ ಸಾಯಿ ಸಮೃದ್ಧಿ ಅಪಾರ್ಟ್‌ಮೆಂಟ್ ನ ಮಾಲಕರಾಗಿದ್ದು, ಮುಂಬೈ ಹಾಗೂ ಬೆಂಗಳೂರಿನಲ್ಲಿ ತಮ್ಮ ವ್ಯಾಪಾರವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದರು.
ಅವರ ಅಕಾಲಿಕ ನಿಧನಕ್ಕೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಉದ್ಯಮ ವಲಯದವರು ಶೋಕವ್ಯಕ್ತ ಪಡಿಸಿದ್ದಾರೆ. ಮೃತರು ಪತ್ನಿ ದಿವ್ಯಾ ಮತ್ತು ಮಗಳನ್ನು ಅಗಲಿದ್ದಾರೆ.