spot_img

ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಂಘಟನಾ ಸಭೆ

Date:

spot_img

ಕಾರ್ಕಳ : ಬ್ಲಾಕ್ ಕಾಂಗ್ರೆಸ್ ಕಾರ್ಕಳ ಇದರ ಆಶ್ರಯದಲ್ಲಿ ಪಕ್ಷ ಸಂಘಟನೆಯ ಪ್ರಯುಕ್ತ ವಿವಿಧ ಘಟಕಗಳ ಅಧ್ಯಕ್ಷರು, ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಹಾಗೂ ವಲಯ ಉಸ್ತುವಾರಿಗಳ ಸಭೆಯು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದರಾವ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾಂಗ್ರೆಸ್ ಮುಖಂಡ ಉದಯ್ ಶೆಟ್ಟಿ ಮಾತನಾಡಿ ಗ್ರಾಮೀಣ ಮತ್ತು ಬೂತ್ ಮಟ್ಟದಲ್ಲಿ ಸಮಿತಿಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸಿದರೆ ಚುನಾವಣೆಯಲ್ಲಿ ಉತ್ತಮ‌ ಫಲಿತಾಂಶ ಪಡೆಯಲು ಸಾದ್ಯ ಆದ್ದರಿಂದ ಸ್ಥಳೀಯ ನಾಯಕರು ತಮ್ಮನ್ನು ಸಂಪೂರ್ಣವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಪೂರ್ಣ ಪ್ರಮಾಣದ ಸಮಿತಿಯನ್ನು ರಚಿಸುವಲ್ಲಿ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದರು.

ಗ್ಯಾರಂಟಿ ಅನುಷ್ಠಾನ ಸಮಿತಿಯ ಅದ್ಯಕ್ಷ ಅಜಿತ್ ಹೆಗ್ಡೆ ಮಾತನಾಡಿ ಅರ್ಜಿ ಸಲ್ಲಿಸಿದ ಶೇಖಡಾ 95 ಜನರಿಗೆ ಗ್ಯಾರಂಟಿ ಯೋಜನೆಯು ಸರಿಯಾಗಿ ತಲುಪುತ್ತಿದೆ. ಇತರರಿಗೆ ಅವರ ವೈಯಕ್ತಿಕ ಸಮಸ್ಯೆಗಳಿಂದ ಸಾದ್ಯವಾಗುತ್ತಿಲ್ಲ. ಗ್ಯಾರಂಟಿ ಅಧಾಲತ್ ಮೂಲಕ ಅವರಿಗೂ ಯೋಜನೆಗಳನ್ನು ತಲುಪಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಗ್ರಾಮೀಣ ಮತ್ತು ಬೂತ್ ಸಮಿತಿಗಳ ಪುನಾರಚನೆ, ಗ್ರಾಮ ಮಟ್ಟದಲ್ಲಿ ಗ್ಯಾರಂಟಿ ಸಮಾವೇಶ, ಮತ್ತು ವಲಯವಾರು ವಿವಿಧ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು.

ವಿವಿಧ ಘಟಕದ ಅದ್ಯಕ್ಷರುಗಳಾದ ರೆಹಮ್ಮತುಲ್ಲಾ, ಸಂತೋಷ್ ದೇವಾಡಿಗ, ಅನಿಲ್ ಪೂಜಾರಿ, ಸುದರ್ಶನ್ ಬಂಗೇರ, ಅಣ್ಣಪ್ಪ ನಕ್ರೆ, ಕುಶ ಮೂಲ್ಯ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ವಲಯವಾರು ಉಸ್ತುವಾರಿಗಳಾಗಿ ಸುಧಾಕರ್ ಶೆಟ್ಟಿ, ಸುಬಿತ್ N.R ,ವಿವೇಕ್ ಶೆಣೈ, ಕುಶ ಮೂಲ್ಯ, ಅನಿಲ್ ಪೂಜಾರಿ, ನಾಗೇಶ್ ಭಂಡಾರಿ, ಉದಯ್ ಶೆಟ್ಟಿ, ತಾರಾನಾಥ್ ಕೋಟ್ಯಾನ್, ಕೆದಿಂಜೆ ಸುಪ್ರೀತ್ ಇವರುಗಳಿಗೆ ಜವಾಬ್ದಾರಿಗಳನ್ನು ವಹಿಸಿಕೊಡಲಾಯಿತು.

ಈ ಸಂದರ್ಭದಲ್ಲಿ ಗುಜರಾತಿನ ಅಹಮದಾಬಾದ್ ವಿಮಾನ ದುರಂತದಲ್ಲಿ ಮಡಿದವರಿಗೆ ಮೌನ ಪ್ರಾರ್ಥನೆ ಮತ್ತು ಕ್ಯಾಂಡಲ್ ಬೆಳಗಿ ಶೃದ್ದಾಂಜಲಿ ಸಲ್ಲಿಸಲಾಯಿತು.

ವೇದಿಕೆಯಲ್ಲಿ ರಾಜ್ಯ ರೈತ ಸಂಘದ ಕಾರ್ಯದರ್ಶಿ ಉದಯ್ ಶೆಟ್ಟಿ ಕುಕ್ಕುಂದೂರು, ಹಿರ್ಗಾನ ಸೊಸೈಟಿ ಅಧ್ಯಕ್ಷ ಸಿರಿಯಣ್ಣ ಶೆಟ್ಟಿ, ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಕೃಷ್ಣ ಶೆಟ್ಟಿ, ಉಪಸ್ಥಿತರಿದ್ದರು.

ಬ್ಲಾಕ್ ವಕ್ತಾರ ಪ್ರದೀಪ್ ಬೇಲಾಡಿ ನಿರೂಪಿಸಿ, ಮಲ್ಲಿಕ್ ಅತ್ತೂರು ಸ್ವಾಗತಿಸಿದರು, ಕೃಷ್ಣ ಶೆಟ್ಟಿ ವಂದಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ಸ್ನೇಹಿತರ ದಿನಾಚರಣೆ

ಈ ವಿಶೇಷ ದಿನವನ್ನು ಆಗಸ್ಟ್ 3ರಂದು (3/8) ಆಚರಿಸುವುದು ಸ್ನೇಹದ ಮಹತ್ವವನ್ನು ಗುರುತಿಸುವುದಕ್ಕಾಗಿ. ಇದು ನಮ್ಮ ಜೀವನದಲ್ಲಿ ಮಿತ್ರರೊಂದಿಗೆ ಹಂಚಿಕೊಳ್ಳುವ ಪ್ರೀತಿ, ನಂಬಿಕೆ ಮತ್ತು ಸಹಾನುಭೂತಿಯನ್ನು ಸ್ಮರಿಸುತ್ತದೆ.

ಕೊಲಂಬಿಯಾ ವಿಶ್ವವಿದ್ಯಾಲಯದ ಕೃತಕ ಮರಗಳ ತಂತ್ರಜ್ಞಾನ: ಹವಾಮಾನ ಬದಲಾವಣೆ ವಿರುದ್ಧದ ಹೊಸ ಅಸ್ತ್ರ?

ಜಾಗತಿಕ ತಾಪಮಾನ ಏರಿಕೆ ವಿರುದ್ಧ ಹೋರಾಡಲು, ಕೊಲಂಬಿಯಾ ವಿಶ್ವವಿದ್ಯಾಲಯದ ವಿಜ್ಞಾನಿ ಕ್ಲಾಸ್ ಲ್ಯಾಕ್ನರ್ ಅವರು "ಕೃತಕ ಮರ" ಎಂಬ ಕಲ್ಪನೆಯನ್ನು ರೂಪಿಸಿದರು.

ಕೂದಲಿನ ಆರೋಗ್ಯಕ್ಕೆ ಕರಿಬೇವು ಮತ್ತು ಕೊಬ್ಬರಿ ಎಣ್ಣೆಯ ಮ್ಯಾಜಿಕ್: ಪರಿಣಾಮಕಾರಿ ಮನೆಮದ್ದು ಇಲ್ಲಿದೆ

ಕೊಬ್ಬರಿ ಎಣ್ಣೆಗೆ ಕರಿಬೇವನ್ನು ಬೆರೆಸಿ ಬಳಸುವುದರಿಂದ ಕೂದಲು ಉದುರುವಿಕೆ ನಿಲ್ಲುತ್ತದೆ ಮತ್ತು ಕೂದಲು ದಟ್ಟವಾಗಿ, ಕಪ್ಪಾಗಿ, ವೇಗವಾಗಿ ಬೆಳೆಯುತ್ತದೆ.

ನಟಿ ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಮೂವರು ಆರೋಪಿಗಳ ಬಂಧನ

ಸ್ಯಾಂಡಲ್‌ವುಡ್ ನಟಿ ರಮ್ಯಾ (ದಿವ್ಯ ಸ್ಪಂದನಾ) ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ಮೂವರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.