
ಕಾರ್ಕಳ ಬೈಲೂರು ಕಂಪನಿನ ನಿವಾಸಿಯಾಗಿರುವ ಕೂಲಿ ಕಾರ್ಮಿಕರಾದ ಶರೀಫ್ ರವರ ಏಳು ವರ್ಷದ ಮಗು ಸಿಮಾಕ್ ಮಾರಕ ತಲಸ್ಸೇಮಿಯ ಮಾರಕ ಕಾಯಿಲೆಯಿಂದ ಬಳಲುತ್ತಿದ್ದು ಆ ಮಗುವಿನ ಜೀವ ಉಳಿಸಲು ಬೊನ್ ಮ್ಯಾರೊ ಟ್ರಾನ್ಸ್ಪ್ಲಾಲೆಂಟ್ ಚಿಕಿತ್ಸೆಗೆ 28 ಲಕ್ಷ ಅಗತ್ಯವಿದೆ ಎಂದು ವೈದ್ಯರು ತಿಳಿಸಿರುತ್ತಾರೆ ,
ಈ ಕುಟುಂಬ ಕಡು ಬಡತನದಲ್ಲಿ ಇರುವ ಈ ಕುಟುಂಬ ಸಹಾಯಕ್ಕಾಗಿ ನಮ್ಮ ಸಂಸ್ಥೆಯಲ್ಲಿ ವಿನಂತಿ ಮಾಡಿರುತ್ತಾರೆ
ನಮ್ಮ ಸಂಸ್ಥೆಯ ಕೋಶಾಧಿಕಾರಿಯಾಗಿರುವ ಶ್ರೀಮತಿ ಭಾನುಮತಿ ಕೌಡೂರು ಇವರಿಗೆ ಶರೀಫ್ ರವರು ಮನವಿಯನ್ನು ನೀಡಿರುತ್ತಾರೆ , ಈ ಮಗುವಿನ ಕೂಡಲೇ ಚಿಕಿತ್ಸೆ ಅಗತ್ಯವಿರುವುದರಿಂದ ಈ ಮನವಿಗೆ ಕೂಡಲೇ ಸ್ಪಂದಿಸಿ ನಮ್ಮ ಸಂಸ್ಥೆಯ ವತಿಯಿಂದ ₹10,000/ ಸಹಾಯಧನವನ್ನು ಇಂದು ನಮ್ಮ ಸಂಸ್ಥೆಯ ಪ್ರದಾನ ಕಾರ್ಯದರ್ಶಿಯವರಾದ ಪ್ರಕಾಶ್ ನಾಯ್ಕ್ ದೇವಗಿರಿ ಕೋಶಾಧಿಕಾರಿ ಶ್ರೀಮತಿ ಭಾನುಮತಿ ಕೌಡೂರು ಉಪಾಧ್ಯಕ್ಷರಾದ ಶ್ರೀಮತಿ ಸೌಮ್ಯ ಶೆಟ್ಟಿ ಬೈಲೂರು, ಶ್ರೀಮತಿ ಅಜಿತಾ ಕೌಡೂರು,ಜೊತೆ ಕಾರ್ಯದರ್ಶಿ ಸಚಿನ್ ಪೂಜಾರಿ ಕಣಂಜಾರು ಹಾಗು ಶ್ರೀಮತಿ ರಾಜೇಶ್ವರಿ ನವೀನ್ ಇವರ ಮುಖಾಂತರ ಸಹಾಯಧನವನ್ನು ನೀಡಲಾಯಿತು.