spot_img

ಭೂಕಂಪದಿಂದ ಕರಾಚಿ ಜೈಲಿನ ಗೋಡೆ ಕುಸಿತ ! 216 ಕೈದಿಗಳು ಪರಾರಿ , ಗುಂಡಿನ ಚಕಮಕಿಯಲ್ಲಿ ಓರ್ವ ಸಾವು!

Date:

spot_img

ಪಾಕಿಸ್ತಾನದ ಕರಾಚಿಯಲ್ಲಿ ಜೂನ್ 2ರಂದು ಸಂಭವಿಸಿದ ಸರಣಿ ಭೂಕಂಪದ ನಂತರ, ಮಾಲಿರ್ ಜಿಲ್ಲೆಯ ಕೇಂದ್ರ ಜೈಲಿನಿಂದ 216 ಕೈದಿಗಳು ಪರಾರಿಯಾದ ಘಟನೆ ದೇಶವ್ಯಾಪಿ ಆತಂಕಕ್ಕೆ ಕಾರಣವಾಗಿದೆ.

ರಿಕ್ಟರ್ ಮಾಪಕದಲ್ಲಿ 3.2 ಮತ್ತು 3.6ರ ಮಧ್ಯದ ತೀವ್ರತೆಯ ಮೂರು ಪ್ರತ್ಯೇಕ ಭೂಕಂಪಗಳು ಸಂಭವಿಸಿದ ವೇಳೆ, ಕಂಪನದ ಕೇಂದ್ರಬಿಂದು ಕರಾಚಿಯ ಲಂಧಿ ಫಾಲ್ಟ್ ಪ್ರದೇಶವಾಗಿತ್ತು ಎಂದು ಭೂಕಂಪ ತಜ್ಞರು ತಿಳಿಸಿದ್ದಾರೆ. ಭೂಕಂಪದ ಹೊತ್ತಿನಲ್ಲಿ ಜೈಲಿನ ಕೆಲವು ಗೋಡೆಗಳು ಭಾಗಶಃ ಕುಸಿದು ಬಿದ್ದಿದ್ದು, ಇದೇ ವೇಳೆ ಹಲವಾರು ಕೈದಿಗಳು ಹೊರಬಂದು ಪರಾರಿಯಾದ ಘಟನೆ ನಡೆದಿದೆ.

ಮೂಲಗಳ ಮಾಹಿತಿಯ ಪ್ರಕಾರ, ಭೂಕಂಪದ ನಂತರ ಆತಂಕದ ಮಧ್ಯೆ ಕೈದಿಗಳನ್ನು ಇನ್ನೊಂದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿತ್ತು. ಈ ಸಂದರ್ಭದ ಗೊಂದಲವನ್ನು ದುರುಪಯೋಗ ಪಡಿಸಿಕೊಂಡು, ಕೆಲ ಕೈದಿಗಳು ಜೈಲಿನ ಬಾಗಿಲುಗಳತ್ತ ದೌಡಾಯಿಸಿದ್ದಾರೆ. ಈ ಗಲಾಟೆಯಲ್ಲಿ ಕೆಲವರು ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡು ಪರಾರಿಯಾದಾಗ, ಜೈಲಿನ ಒಳಗೆ ಹಾಗೂ ಹೊರಗೆ ಭಾರಿ ಗುಂಡಿನ ಚಕಮಕಿ ನಡೆದಿದೆ.

ಈ ಘಟನೆಯಲ್ಲಿ ಒಬ್ಬ ಕೈದಿ ಮೃತಪಟ್ಟಿದ್ದು, ಮೂವರು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ. ಸುತ್ತಮುತ್ತಲಿನ ವಸತಿ ಪ್ರದೇಶಗಳಲ್ಲೂ ಭಯಭೀತ ವಾತಾವರಣ ನಿರ್ಮಾಣವಾಗಿದ್ದು, ನಾಗರಿಕರಲ್ಲಿ ಆತಂಕ ಮನೆಮಾಡಿದೆ.

ಪರಾರಿಯಾದ ಕೈದಿಗಳ ಪತ್ತೆಗಾಗಿ ಪಾಕಿಸ್ತಾನ ಭದ್ರತಾ ಪಡೆಗಳು ತೀವ್ರ ತಪಾಸಣೆ ಮತ್ತು ಕಾರ್ಯಾಚರಣೆ ಆರಂಭಿಸಿವೆ. ರಾಷ್ಟ್ರೀಯ ಹೆದ್ದಾರಿಗಳ ಸಹಿತ ಪ್ರಮುಖ ಸ್ಥಳಗಳನ್ನು ಬಂದ್ ಮಾಡಿ ಪರಿಶೀಲನೆ ನಡೆಸುತ್ತಿದೆ ಎಂದು ಕರಾಚಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆ ಜೈಲು ವ್ಯವಸ್ಥೆಯ ಭದ್ರತೆಯ ಮೇಲೊಂದು ದೊಡ್ಡ ಪ್ರಶ್ನೆಯನ್ನು ಎತ್ತಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

AI ಕ್ರಾಂತಿ: ಆಗಸ್ಟ್‌ನಲ್ಲಿ ಓಪನ್‌ಎಐನ ಬಹುನಿರೀಕ್ಷಿತ GPT-5 ಬಿಡುಗಡೆಗೆ ಸಿದ್ಧತೆ

ಓಪನ್‌ಎಐ ತನ್ನ ನೂತನ ಮತ್ತು ಹೆಚ್ಚು ಶಕ್ತಿಶಾಲಿ GPT-5 ಮಾದರಿಯನ್ನು ಆಗಸ್ಟ್‌ನ ಆರಂಭದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ

ದಿನ ವಿಶೇಷ – ನಿಸರ್ಗ ಸಂರಕ್ಷಣಾ ದಿನ

ಈ ದಿನವು ನಮ್ಮ ಭೂಮಿಯ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಮತ್ತು ಸುಸ್ಥಿರವಾಗಿ ಬಳಸುವ ಮಹತ್ವವನ್ನು ನೆನಪಿಸುತ್ತದೆ.

ಆರೋಗ್ಯಕ್ಕೆ ಮಾರಕವಾಗಬಲ್ಲ ದಿನನಿತ್ಯದ ಸೊಪ್ಪು: ಕಿಡ್ನಿ ಕಲ್ಲುಗಳ ಸೃಷ್ಟಿಗೆ ಪ್ರಮುಖ ಕಾರಣ!

ನಮ್ಮ ದೇಹದ ಅತ್ಯಂತ ಪ್ರಮುಖ ಅಂಗಗಳಲ್ಲಿ ಒಂದಾದ ಮೂತ್ರಪಿಂಡಗಳು, ರಕ್ತವನ್ನು ಶುದ್ಧೀಕರಿಸಿ ವಿಷಕಾರಿ ಅಂಶಗಳನ್ನು ಹೊರಹಾಕುವ ಕಾರ್ಯವನ್ನು ನಿರಂತರವಾಗಿ ಮಾಡುತ್ತವೆ.

“ಸು ಫ್ರಮ್‌ ಸೋ” ಅಬ್ಬರ: ಸಣ್ಣ ಬಜೆಟ್, ದೊಡ್ಡ ಕಲೆಕ್ಷನ್ – ಇದು ಕಂಟೆಂಟ್ ತಾಕತ್ತು!

ಇತ್ತೀಚೆಗೆ ತೆರೆ ಬಿದ್ದಿದ್ದು, ಜೆ.ಪಿ. ತುಮಿನಾಡ್ ನಿರ್ದೇಶನದ "ಸು ಫ್ರಮ್‌ ಸೋ" ಚಿತ್ರವು ಅದ್ಭುತ ಗೆಲುವು ಸಾಧಿಸಿದೆ. ರಾಜ್ ಬಿ ಶೆಟ್ಟಿ ಅವರ ಲೈಟರ್ ಬುದ್ಧ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಲನಚಿತ್ರವು, ಕಥಾವಸ್ತು ಮತ್ತು ನಿರೂಪಣೆಯ ಶಕ್ತಿಗೆ ಪ್ರೇಕ್ಷಕರು ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.