spot_img

ಕಾಪು: ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಕೂಟಿ ಸವಾರ ಮೃತ್ಯು

Date:

spot_img
spot_img

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮೂಳೂರು ಮಂಗಳಪೇಟೆಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಾರ್ಚ್.11ರ ಮಂಗಳವಾರ ಮಧ್ಯರಾತ್ರಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಕೂಟಿ ಸವಾರ ಮೃತಪಟ್ಟ ಘಟನೆ ನಡೆದಿದೆ. ಈ ಅಪಘಾತದಲ್ಲಿ ಮತ್ತೊಬ್ಬ ಸವಾರ ತೀವ್ರ ಗಾಯಗೊಂಡಿದ್ದಾರೆ.

ಮೃತ ಯುವಕನನ್ನು ಕಾಪು ನಿವಾಸಿ ಪ್ರತೀಶ್ ಪ್ರಸಾದ್ (21) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ನಿಹಾಲ್ ವಿಲ್ಸನ್ ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ, ಮಂಗಳವಾರ ರಾತ್ರಿ ಪ್ರತೀಶ್ ಪ್ರಸಾದ್ ಮತ್ತು ನಿಹಾಲ್ ವಿಲ್ಸನ್ ಸ್ಕೂಟಿಯಲ್ಲಿ ಕಾಪುವಿನಿಂದ ಪಡುಬಿದ್ರಿ ಕಡೆಗೆ ತೆರಳುತ್ತಿದ್ದರು. ಈ ವೇಳೆ ಅಪರಿಚಿತ ವಾಹನವು ಅವರ ಸ್ಕೂಟಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು.

ಅಪಘಾತದ ನಂತರ ಸ್ಥಳೀಯರು ತಕ್ಷಣವೇ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರು. ಆದರೆ, ತೀವ್ರ ಗಾಯಗೊಂಡಿದ್ದ ಪ್ರತೀಶ್ ಪ್ರಸಾದ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಮೃತ ಯುವಕ ಪ್ರತೀಶ್ ಪ್ರಸಾದ್, ಕಾಪುವಿನ ಹಿರಿಯ ಛಾಯಾಗ್ರಾಹಕ ಭಕ್ತಪ್ರಸಾದ್ ಮತ್ತು ಉಷಾ ಭಕ್ತಪ್ರಸಾದ್ ದಂಪತಿಯ ಪುತ್ರನಾಗಿದ್ದು, ಈ ದುರ್ಘಟನೆ ಅವರ ಕುಟುಂಬದವರಿಗೆ ಆಘಾತವನ್ನುಂಟುಮಾಡಿದೆ.

ಈ ಪ್ರಕರಣ ಸಂಬಂಧಿಸಿದಂತೆ ಕಾಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲ್ಪಟ್ಟಿದ್ದು, ಪೊಲೀಸರು ಅಪರಿಚಿತ ವಾಹನ ಮತ್ತು ಚಾಲಕನ ಪತ್ತೆಗೆ ಮುಂದಾಗಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

‘ಪ್ರಿಯಾಂಕ್ ಖರ್ಗೆ ಜೋಕರ್ ತರ ಆಗಿದ್ದಾರೆ’: ಆರ್‌ಎಸ್‌ಎಸ್ ಬಗ್ಗೆ ಪತ್ರ ಬರೆದ ಸಚಿವರಿಗೆ ಜನಾರ್ದನ ರೆಡ್ಡಿ ಟೀಕೆ

ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಈಗ "ಜೋಕರ್ ತರ ಆಗಿದ್ದಾರೆ" ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ತೀವ್ರ ವಾಗ್ದಾಳಿ ನಡೆಸಿದರು.

ಕಾಡಾನೆಗಳ ಸಂಖ್ಯೆಯಲ್ಲಿ ಕರ್ನಾಟಕ ನಂ.1; ಆದರೂ ಭಾರತದಲ್ಲಿ ಒಟ್ಟು ಸಂಖ್ಯೆ ಶೇ. 18ಕ್ಕೆ ಇಳಿಕೆ

ದೇಶದಲ್ಲಿ ಅತಿಹೆಚ್ಚು ಕಾಡಾನೆಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಕರ್ನಾಟಕವು ಪ್ರಥಮ ಸ್ಥಾನದಲ್ಲಿದೆ.

ಆರ್ ಎಸ್ ಎಸ್ ನ ಸೇವಾ ಕಾರ್ಯದಿಂದ ರಾಷ್ಟ್ರ ಇನ್ನಷ್ಟು ಬೆಳಗಲಿ :ಪುತ್ತಿಗೆ ಸುಗುಣೇಂದ್ರ ಶ್ರೀ ಆಶೀರ್ವಚನ ; ದತ್ತಾತ್ರೇಯ ಹೊಸಬಾಳೆಗೆ ಅನುಗ್ರಹ ಮಂತ್ರಾಕ್ಷತೆ

ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಬುಧವಾರ ಭೇಟಿ ನೀಡಿದ್ದ ಆರ್ ಎಸ್ ಎಸ್ ನ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರಿಗೆ ಶ್ರೀಕೃಷ್ಣ-ಮುಖ್ಯಪ್ರಾಣ ದೇವರ ಪ್ರಸಾದ ಹಾಗೂ ಮಂತ್ರಾಕ್ಷತೆ ನೀಡಿ ಶ್ರೀಗಳು ಆಶೀರ್ವಚನ ನೀಡಿದರು.

ಕಟೀಲು ಯಕ್ಷಗಾನ ಮೇಳಗಳ ಪ್ರಾರಂಭೋತ್ಸವ: ನ. 15ಕ್ಕೆ ಭವ್ಯ ಮೆರವಣಿಗೆ, 16ಕ್ಕೆ ಏಳನೇ ಮೇಳ ಪಾದಾರ್ಪಣೆ

ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಏಳೂ ಮೇಳಗಳ ಪ್ರಾರಂಭೋತ್ಸವದ ದಿನಾಂಕವನ್ನು ಪ್ರಕಟಿಸಲಾಗಿದೆ.