
ಉದ್ಘಾಟನಾ ಸಮಾರಂಭ:
ಯುವ ಸಂಗಮ ಕಾಂತಾವರ (ರಿ) ಹಾಗೂ ಯುವ ಉತ್ಸಾಹಿ ಬಳಗ (ರಿ) ಕೇಮಾರು ಇವರ ಜಂಟಿ ಆಶ್ರಯದಲ್ಲಿ 3ನೇ ವರ್ಷದ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮವು ಜು.6 ನೇ ಆದಿತ್ಯವಾರ ಕಾಂತಾವರ ಕುಂದಿಲ, ಕಡತ್ರಬೈಲು ನೆರೋಲ್ದ ಬಾಕಿಮಾರು ಗದ್ದೆಯ ದಿ.ಬಾಡು ಪೂಜಾರಿ ವೇದಿಕೆಯಲ್ಲಿ ಶ್ರೀ ಕ್ಷೇತ್ರ ಕಾಂತಾವರದ ಪ್ರಧಾನ ಅರ್ಚಕ ಶ್ರೀ ಕೃಷ್ಣಮೂರ್ತಿ ಭಟ್ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ಯುವಸಂಗಮ ಕಾಂತಾವರದ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿಗಾರ್ ಅಧ್ಯಕ್ಷತೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮುಲ್ಕಿ ಮೂಡುಬಿದಿರೆ ಶಾಸಕ ಉಮನಾಥ ಕೋಟ್ಯಾನ್, ಉದ್ಯಮಿ ಅರುಣ್ ಕುಮಾರ್ ನಿಟ್ಟೆ, ಶ್ರೀಕ್ಷೇತ್ರ ನೆಲ್ಲಿಯ ಆಡಳಿತ ಮೊಕ್ತೇಸರ ಸುನೀಲ್ ಕೆ.ಆರ್, ಸಮಾಜಸೇವಕ ಸುಲೇಮಾನ್ ಶೇಖ್ ಬೆಳುವಾಯಿ, ಪೋಲಿಸ್ ಇಲಾಖೆಯಲ್ಲಿ ಕರ್ತವ್ಯನಿರತ ಸುರೇಶ್ ಕೇಮಾರು, ಕಾಂತಾವರ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ರಂಜಿತ್ ಶೆಟ್ಟಿ ಪುಂಚಾಡಿ, ಕಾಂತಾವರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರಭಾಕರ ಕುಲಾಲ್ ಬೇಲಾಡಿ, ಕಾಂತಾವರ ಸಮುದಾಯ ಆರೋಗ್ಯ ಕೇಂದ್ರ ಅಧಿಕಾರಿ ಕು. ಮೇಘ, ಸ್ಥಳೀಯ ಪ್ರಮುಖರಾದ ವಸಂತ ಕೋಟ್ಯಾನ್ ಕಡತ್ರಬೈಲು, ಅರುಣ್ ಭಂಡಾರಿ, ರತ್ನವರ್ಮ ಜೈನ್, ಕೃಷ್ಣ ಆಚಾರ್ಯ, ಸುಂದರ ಪೂಜಾರಿ ಮತ್ತಿರರು ವೇದಿಕೆಯಲ್ಲಿದ್ದರು.

ಪುರುಷರಿಗೆ ವಾಲಿಬಾಲ್ , ಹಗ್ಗಜಗ್ಗಾಟ , ವೈಯಕ್ತಿಕ ಆಟಗಳು, ಮಹಿಳೆಯರಿಗೆ ತ್ರೋಬಾಲ್, ಹಗ್ಗಜಗ್ಗಾಟ, ವೈಯಕ್ತಿಕ ಆಟಗಳು, ಮಕ್ಕಳಿಗೆ ವೈಯಕ್ತಿಕ ಆಟಗಳು, ಸಾರ್ವಜನಿಕರಿಗೆ ನಿಧಿ ಶೋಧ , ವಿಶೇಷ ಆಕರ್ಷಣೆಯಾಗಿ ಚೆನ್ನೆಮಣೆ ಆಟ ಹಾಗೂ ವಿಡಿಯೋ ರೀಲ್ಸ್ ಸ್ಪರ್ಧೆ ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳು ಜರಗಿತು.

ಸನ್ಮಾನ ಕಾರ್ಯಕ್ರಮ
ಮಧ್ಯಾಹ್ನ 12.30ಕ್ಕೆ ಸರಿಯಾಗಿ ಶ್ರೀ ಕ್ಷೇತ್ರ ಕಾಂತಾವರ ಧರ್ಮದರ್ಶಿಗಳು ಬಾರಾಡಿಬೀಡು ಡಾ.ಕೆ ಜೀವಂಧರ್ ಬಲ್ಲಾಳ್ ಇವರ ಅಧ್ಯಕ್ಷತೆಯಲ್ಲಿ ಜರಗಿದ ಸನ್ಮಾನ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಕೇಮಾರು ಶ್ರೀ ಶ್ರೀ ಈಶ ವಿಠಲ ದಾಸ ಸ್ವಾಮೀಜಿಯವರು ಅರ್ಶೀವಚನಗೈದರು.

ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ದೈವಾರಾಧನೆ ಕ್ಷೇತ್ರದಿಂದ ಬೇಲಾಡಿ ಶ್ರೀ ವಸಂತ ಪೂಜಾರಿ ಪೈಬೆಟ್ಟು ಹಾಗೂ ಕೇಮಾರು ಶ್ರೀ ಆನಂದ ಪೂಜಾರಿಯವರನ್ನು ಸನ್ಮಾನಿಸಲಾಯಿತು. ಇದೇ ಸಂಧರ್ಭದಲ್ಲಿ ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ಸ್ಥಾಪಕ ಅವಿನಾಶ್ ಜಿ ಶೆಟ್ಟಿಯವರು ತಮ್ಮ ಸಂಸ್ಥೆಯ ಮೂಲಕ ಕಾಂತಾವರ ಗ್ರಾಮದ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ 5,೦೦೦ ವಿಧ್ಯಾರ್ಥಿವೇತನವನ್ನು ಶ್ರೀಗಳ ದಿವ್ಯಹಸ್ತದಿಂದ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಜಯೇಶ್ ಬಲ್ಲಾಳ್ ಬಾರಾಡಿಬೀಡು, ಕೆ.ಎಂ.ಎಫ್ ಉಪಾಧ್ಯಕ್ಷ ಉದಯ ಎಸ್.ಕೋಟ್ಯಾನ್ ಇರ್ವತ್ತೂರು,ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟಿನ ಅವಿನಾಶ್ ಜಿ.ಶೆಟ್ಟಿ, ಮಿಯ್ಯಾರು ಗ್ರಾ.ಪಂ ಮಾಜಿ ಅಧ್ಯಕ್ಷ ಗಿರೀಶ್ ಅಮೀನ್, ಮೂಡುಬಿದಿರೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಪ್ರಧಾನಕಾರ್ಯದರ್ಶಿ ಸುದರ್ಶನ ಎಂ, ಉಡುಪಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಜಯರಾಮ್ ಸಾಲ್ಯಾನ್ ಬೋಳ, ಉದ್ಯಮಿಗಳಾದ ಪೂರ್ಣಚಂದ್ರ ಜೈನ್, ರಂಜಿತ್ ಪೂಜಾರಿ ತೋಡಾರು, ಮಹೇಂದ್ರ ಕುಮಾರ್ ಜೈನ್, ಮೂಡುಬಿದಿರೆ ರೋಟರಿ ಟೆಂಪಲ್‌ಟೌನ್ ಅಧ್ಯಕ್ಷ ಹರೀಶ್ ಎಂ.ಕೆ, ಪ್ರಧಾನಕಾರ್ಯದರ್ಶಿ ಭರತ್ ಶೆಟ್ಟಿ ಬೆಳುವಾಯಿ, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಜತ್ ರಾಮ್ಮೋಹನ್, ಮೂಡುಬಿದರೆ ಪುರಸಭೆ ಉಪಾಧ್ಯಕ್ಷ ನಾಗರಾಜ್ ಪೂಜಾರಿ ಒಂಟಿಕಟ್ಟೆ, ಸುಭಾಸ್‌ನಗರ ಜನನಿ ಸೇವಾ ಟ್ರಸ್ಟಿನ ಗೋಪಾಲ್ ಶೆಟ್ಟಿಗಾರ್, ಗ್ರಾಮದ ಪ್ರಮುಖರಾದ ಧರ್ಮರಾಜ್ ಕಂಬಳಿ, ಎಂ ಸಂಜೀವ ಕೋಟ್ಯಾನ್ ಮಿತ್ತಲಚ್ಚಿಲು, ಲಿಂಗಪ್ಪ ದೇವಾಡಿಗ, ಮಂಜುನಾಥ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭ
ಯುವ ಉತ್ಸಾಹಿ ಬಳಗದ ಅಧ್ಯಕ್ಷ ಶ್ರೀ ಚಂದ್ರಹಾಸ ಜೈನ್ ಹಕ್ಕೇರಿಯವರ ಅಧ್ಯಕ್ಷತೆಯಲ್ಲಿ ಸಮರೋಪ ಸಮಾರಂಭವು ಜರಗಿತು.
ಈ ಸಂದರ್ಭದಲ್ಲಿ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಸಹಿತ ಬಹುಮಾನಗಳನ್ನು ವಿತರಿಸಲಾಯಿತು. 10 ನೇ ತರಗತಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.
ಕೆ.ಎಂ.ಎಫ್ ನಿರ್ದೇಶಕ ಕೆ.ಪಿ ಸುಚರಿತ ಶೆಟ್ಟಿ, ಕಾಂತಾವರ ಗ್ರಾ.ಪಂ ಅಧ್ಯಕ್ಷ ರಾಜೇಶ್ ಕೋಟ್ಯಾನ್ ಬಾರಾಡಿ, ಯಕ್ಷದೇಗುಲ ಕಾಂತಾವರದ ಮಹಾವೀರ ಪಾಂಡಿ, ಕಡೆಕಾರು ಮುಗೇರ್ಕಳದ ಗುರಿಕಾರ ಶೇಖರ್, ಯೋಗೀಶ್ ಪೂಜಾರಿ ಮೂಡುಮರಕಡ, ಉದ್ಯಮಿಗಳಾದ ಶ್ರೀಕಾಂತ್ ಶೆಟ್ಟಿ ಕೇಮಾರು, ಜಯಂತ್ ಕುಂದರ್ ವರ್ಣಬೆಟ್ಟು, ಖ್ಯಾತ ಗಾಯಕರಾದ ಸಚಿತ್ ಪೂಜಾರಿ ನಂದಳಿಕೆ, ಪ್ರದೀಪ್ ಆಚಾರ್ಯ ಕೆಮ್ಮಣ್ಣು, ಕೆಸರುಡೊಂಜಿ ದಿನ 2025 ಕಾರ್ಯಕ್ರಮದ ಸಂಚಾಲಕರಾದ ಲೋಕೇಶ್ ಕೋಟ್ಯಾನ್ ಕಡತ್ರಬೈಲು, ವಿಶ್ವನಾಥ ಆಚಾರ್ಯ ಬೋವಾಡಿ ಉಪಸ್ಥಿತರಿದ್ದರು.
ಪಂದ್ಯಾಟದ ತೀರ್ಪುಗಾರರಾಗಿ ಪುರುಷೋತ್ತಮ್ ಅಂಚನ್ ಬಾಂದೋಟ್ಟು , ಚಂದ್ರಕಾಂತ್ ಜೈನ್ , ನವೀನ್ ದೇವಾಡಿಗ ಕಾಂತಾವರ, ವಿಡಿಯೋ ರೀಲ್ಸ್ ಸ್ಪರ್ಧೆಯ ತೀರ್ಪುಗಾರರಾಗಿ ಅಪುಲ್ ಆಳ್ವ ಇರಾ, ರಾಘವೇಂದ್ರ ಶೆಟ್ಟಿ ಮೂಡುಬಿದಿರೆ ಸಹಕರಿಸಿದ್ದರು. ಸುಕೇಶ್ ಕೋಟ್ಯಾನ್ ಕಾಂತಾವರ, ಪ್ರಭಾಕರ್ ಕುಲಾಲ್ ಬೇಲಾಡಿ, ಮನೀಶ್ ಕುಲಾಲ್ ಕಾರ್ಕಳ ನಿರೂಪಿಸಿದರು. ಸುದರ್ಶನ ಆಚಾರ್ಯ ಸ್ವಾಗತಿಸಿದರು, ಜೀವಂಧರ್ ಶೆಟ್ಟಿಗಾರ್ ಹಾಗೂ ಸನತ್ ಆಚಾರ್ಯ ವರದಿ ವಾಚಿಸಿದರು, ಗೌತಮ್ ಪೂಜಾರಿ ವಂದಿಸಿದರು.