
ಕಳೆದ ವರ್ಷ ಅದೆಷ್ಟೋ ಕಂಬಳ ಅಭಿಮಾನಿಗಳು ನೆರವು ನೀಡುವಂತೆ ಸರ್ಕಾರದ ಮೊರೆ ಹೋಗಿದ್ದರು, ಆದರೆ ಸರ್ಕಾರದಿಂದ ಯಾವುದೇ ರೀತಿಯ ಸ್ಪಂದನೆ ಸಿಕ್ಕಿರಲಿಲ್ಲ . ಅದೇ ರೀತಿ ಮೊನ್ನೆ ನಡೆದ ಬೆಳಗಾವಿ ಅಧಿವೇಶನದಲ್ಲೂ ಕೂಡ ಕರಾವಳಿ ಶಾಸಕರಾದಂತಹ ಯುಟಿ ಖಾದರ್ ಇದರ ಬಗ್ಗೆ ಪ್ರಸ್ತಾವನೆ ಮಾಡಿದ್ದರು.
ಸರ್ಕಾರದಿಂದ ಹಣ ಬರಲಿಲ್ಲವಾದಲ್ಲಿ ನಾವು ತುಳುವರು ಹಣ ಒಟ್ಟು ಮಾಡಿ ನಮಗೆ ಕಂಬಳ ಮಾಡುವುದು ಗೊತ್ತು ಎಂದು ಹೇಳಿದ್ದರು.
ಯುಟಿ ಖಾದರ್ ಅವರು ಮಾತನಾಡಿದ ತಕ್ಷಣವೇ ಕರ್ನಾಟಕ ಸರ್ಕಾರ ಕಂಬಳಕ್ಕೆ ಸುಮಾರು 5 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳ ಶಿಫಾರಸಿನ ಮೇರೆಗೆ ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ್ ಆದೇಶ ಹೊರಡಿಸಿದ್ದಾರೆ. 2024 25 ರ 24 ಜೋಡುಕರೆ ಕಂಬಳಗಳಿಗೆ ತಲ ಐದು ಲಕ್ಷ ರೂಪಾಯಿ ಅನುದಾನ ಘೋಷಣೆ ಮಾಡಿದೆ.