spot_img

ಕಮಲ್ ಹಾಸನ್ ವಿವಾದ: “ಸತ್ಯಕ್ಕೆ ಕ್ಷಮೆಯ ಅಗತ್ಯವಿಲ್ಲ” ಎಂದ ಎಂಎನ್‌ಎಂ ಪಕ್ಷ

Date:

spot_img

ಚೆನ್ನೈ: ಕನ್ನಡ ಭಾಷೆಯ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ನಟ ಕಮಲ್ ಹಾಸನ್ ಅವರಿಗೆ ಮಕ್ಕಳ್ ನೀಧಿ ಮೈಯಂ (ಎಂಎನ್‌ಎಂ)ಪಕ್ಷ ಸಂಪೂರ್ಣ ಬೆಂಬಲ ನೀಡಿದೆ. ನಟನ ಹೇಳಿಕೆಯನ್ನು ಸಮರ್ಥಿಸಿ, ಚೆನ್ನೈನಾದ್ಯಂತ “ಸತ್ಯಕ್ಕೆ ಕ್ಷಮೆಯ ಅಗತ್ಯವಿಲ್ಲ” ಎಂಬ ಘೋಷಣೆಯ ಪೋಸ್ಟರ್‌ಗಳನ್ನು ಮಂಗಳವಾರ ಇಡಲಾಗಿದೆ.

ಈ ಪೋಸ್ಟರ್‌ಗಳಲ್ಲಿ, “ಪ್ರೀತಿಗೆ ಕ್ಷಮೆ ಬೇಡ. ಸತ್ಯ ತಲೆ ಬಾಗುವುದಿಲ್ಲ” ಎಂಬ ಸಂದೇಶವಿರುವುದು ಗಮನಸೆಳೆಯುತ್ತಿದೆ. ಕಮಲ್ ಹಾಸನ್ ತಮ್ಮ ಹೇಳಿಕೆಯಲ್ಲಿ “ದ್ವಿಭಾಷೆಗಳ ನಡುವೆ ಇರುವ ಸಂಬಂಧವನ್ನು” ಹಿಗ್ಗಿಸಿ ಹೇಳಿದರು ಎಂಬ ಮಾತನ್ನು ಪಕ್ಷ ಬೆಂಬಲಿಸುತ್ತಿದ್ದು, ಅದು ಜಗತ್ತಿಗೆ ತಿಳಿದ ಸತ್ಯವಾಗಿದೆ ಎಂದು ಹೇಳಿದೆ.

ಇನ್ನು, “ಕನ್ನಡವು ತಮಿಳಿನಿಂದ ಹುಟ್ಟಿದ ಭಾಷೆ” ಎಂಬ ಹೇಳಿಕೆಗೆ ಕನ್ನಡಪರ ಸಂಘಟನೆಗಳು ಕಿಡಿಕಾರಿದ್ದವು. ತೀವ್ರ ಆಕ್ರೋಶ ವ್ಯಕ್ತಪಡಿಸಿ, ” ಕ್ಷಮೆ ಕೋರಬೇಕು ಇಲ್ಲದಿದ್ದರೆ ಕಮಲಹಾಸನ್‌ ನಟನೆಯ ಥಗ್‌ ಲೈಫ್‌ ಸಿನಿಮಾ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿ ಎಚ್ಚರಿಕೆ ನೀಡಿದ್ದರು.

ಈ ಬೆಳವಣಿಗೆಗಳ ಮಧ್ಯೆ, ಕಮಲ್ ಹಾಸನ್ ಪಕ್ಷದ ಕಾರ್ಯಕರ್ತರು “ನಾವು ಸತ್ಯವನ್ನು ಬಿಟ್ಟುಕೊಡುವುದಿಲ್ಲ, ಕ್ಷಮೆ ಕೇಳುವುದಿಲ್ಲ” ಎಂಬ ಕಠಿಣ ನಿಲುವು ತೋರಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

AI ಕ್ರಾಂತಿ: ಆಗಸ್ಟ್‌ನಲ್ಲಿ ಓಪನ್‌ಎಐನ ಬಹುನಿರೀಕ್ಷಿತ GPT-5 ಬಿಡುಗಡೆಗೆ ಸಿದ್ಧತೆ

ಓಪನ್‌ಎಐ ತನ್ನ ನೂತನ ಮತ್ತು ಹೆಚ್ಚು ಶಕ್ತಿಶಾಲಿ GPT-5 ಮಾದರಿಯನ್ನು ಆಗಸ್ಟ್‌ನ ಆರಂಭದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ

ದಿನ ವಿಶೇಷ – ನಿಸರ್ಗ ಸಂರಕ್ಷಣಾ ದಿನ

ಈ ದಿನವು ನಮ್ಮ ಭೂಮಿಯ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಮತ್ತು ಸುಸ್ಥಿರವಾಗಿ ಬಳಸುವ ಮಹತ್ವವನ್ನು ನೆನಪಿಸುತ್ತದೆ.

ಆರೋಗ್ಯಕ್ಕೆ ಮಾರಕವಾಗಬಲ್ಲ ದಿನನಿತ್ಯದ ಸೊಪ್ಪು: ಕಿಡ್ನಿ ಕಲ್ಲುಗಳ ಸೃಷ್ಟಿಗೆ ಪ್ರಮುಖ ಕಾರಣ!

ನಮ್ಮ ದೇಹದ ಅತ್ಯಂತ ಪ್ರಮುಖ ಅಂಗಗಳಲ್ಲಿ ಒಂದಾದ ಮೂತ್ರಪಿಂಡಗಳು, ರಕ್ತವನ್ನು ಶುದ್ಧೀಕರಿಸಿ ವಿಷಕಾರಿ ಅಂಶಗಳನ್ನು ಹೊರಹಾಕುವ ಕಾರ್ಯವನ್ನು ನಿರಂತರವಾಗಿ ಮಾಡುತ್ತವೆ.

“ಸು ಫ್ರಮ್‌ ಸೋ” ಅಬ್ಬರ: ಸಣ್ಣ ಬಜೆಟ್, ದೊಡ್ಡ ಕಲೆಕ್ಷನ್ – ಇದು ಕಂಟೆಂಟ್ ತಾಕತ್ತು!

ಇತ್ತೀಚೆಗೆ ತೆರೆ ಬಿದ್ದಿದ್ದು, ಜೆ.ಪಿ. ತುಮಿನಾಡ್ ನಿರ್ದೇಶನದ "ಸು ಫ್ರಮ್‌ ಸೋ" ಚಿತ್ರವು ಅದ್ಭುತ ಗೆಲುವು ಸಾಧಿಸಿದೆ. ರಾಜ್ ಬಿ ಶೆಟ್ಟಿ ಅವರ ಲೈಟರ್ ಬುದ್ಧ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಲನಚಿತ್ರವು, ಕಥಾವಸ್ತು ಮತ್ತು ನಿರೂಪಣೆಯ ಶಕ್ತಿಗೆ ಪ್ರೇಕ್ಷಕರು ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.