spot_img

ಕಲ್ಯಾಣಪುರ ತ್ರಿಶಾ ಕಾಲೇಜಿಗೆ,ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ 100% ಫಲಿತಾಂಶ.

Date:

ಉಡುಪಿ ಕಲ್ಯಾಣಪುರದಲ್ಲಿ ಕ್ರಿಯೇಟಿವ್ ಶೈಕ್ಷಣಿಕ ಸಹಭಾಗಿತ್ವದಲ್ಲಿ ಕಾರ್ಯಚರಿಸುತ್ತಿರುವ ತ್ರಿಶಾ ಪ. ಪೂ. ಕಾಲೇಜ್ ದ್ವಿತೀಯ ವರ್ಷದಲ್ಲೂ ಶೇಕಡ 100 ಫಲಿತಾಂಶದ ದಾಖಲಿಸಿದೆ. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಅಮೃತ ಬಸವರಾಜ್ ಬಣಕರ್ 592 ಅಂಕಗಳೊಂದಿಗೆ ರಾಜ್ಯಕ್ಕೆ 8ನೇ ಸ್ಥಾನ ಪಡೆದು ಸಂಸ್ಥೆಗೆ ಮತ್ತು ಹೆತ್ತವರಿಗೆ ಕೀರ್ತಿ ತಂದಿದ್ದಾರೆ. ಶ್ರೀರಕ್ಷಾ 589 ಅಂಕ, ಸುಶ್ಮಿತಾ 588 ಅಂಕ, ಆಕಾಶ್ ಶೇಥಿಯಾ 586 ಅಂಕ, ಶಶಾಂಕ್ ಎಸ್ ಭಟ್ 585 ಅಂಕಗಳನ್ನು ಗಳಿಸಿ ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಪರೀಕ್ಷೆಗೆ ಹಾಜರಾದ 162 ವಿದ್ಯಾರ್ಥಿಗಳಲ್ಲಿ 108 ಅತ್ಯುನ್ನತ ದರ್ಜೆ ಹಾಗೂ 54 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಪಡೆದಿದ್ದಾರೆ.

ತ್ರಿಷಾ ವಿದ್ಯಾ ಸಂಸ್ಥೆಯು ತನ್ನ ಪ್ರಾರಂಭದ ವರ್ಷದಿಂದಲೂ ಶೇ 100ರ ಫಲಿತಾಂಶದ ದಾಖಲಿಸಿದ್ದು, ಅತ್ಯುತ್ತಮ ಬೋಧಕ ಮತ್ತು ಬೋಧಕೇತರ ವೃಂದದವರೊಂದಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸಂಸ್ಥೆಯಾಗಿ ಬೆಳೆಯುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಉನ್ನತ ಶ್ರೇಣಿಯ ಫಲಿತಾಂಶ ದಾಖಲಿಸಿರುವ ಸಂಸ್ಥೆ ಉಡುಪಿ ಜಿಲ್ಲೆಯಲ್ಲಿ ಪ್ರಸಿದ್ಧವಾಗಿದೆ. ನೀಟ್, ಜೆ.ಇ.ಇ, ಸಿ.ಇ.ಟಿ ಯಂತಹ ಪರೀಕ್ಷೆಗಳಲ್ಲಿ ರಾಷ್ಟ್ರಮಟ್ಟದ ವಿವಿಧ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆದುಕೊಂಡ ಹೆಗ್ಗಳಿಕೆ ತ್ರಿಶಾ ವಿದ್ಯಾ ಸಂಸ್ಥೆಗೆ ಇದೆ.

ವಿದ್ಯಾರ್ಥಿಗಳ ದಾಖಲೆಯ ಫಲಿತಾಂಶಕ್ಕೆ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕರು, ಉಪನ್ಯಾಸಕ ವರ್ಗದವರು, ಪಾಲಕ- ಪೋಷಕರು, ಬೋಧಕೇತರ ವೃಂದದವರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಭಾರತದ ಪ್ರತಿದಾಳಿಗೆ ಪಾಕ್ ತತ್ತರ! ಶಹಬಾಜ್ ಶರೀಫ್ ಎಲ್ಲಿ ಎಂಬ ಪ್ರಶ್ನೆ

ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ತೀವ್ರವಾಗುತ್ತಿರುವ ಈ ಸಂದರ್ಭದಲ್ಲಿ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಶರೀಫ್ ಅವರ ರಹಸ್ಯ ಸ್ಥಾನದ ಕುರಿತು ಅನೇಕ ಅನುಮಾನಗಳು ಬೆಳೆಯುತ್ತಿವೆ.

ಭದ್ರಾವತಿಯಲ್ಲಿ ವಾಕಿಂಗ್‌ಗೆ ಹೋದ ವ್ಯಕ್ತಿ ಮಾರಣಾಂತಿಕ ಹಲ್ಲೆಗೆ ಬಲಿ

ಶುಕ್ರವಾರ ಬೆಳಿಗ್ಗೆ ವಾಕಿಂಗ್‌ಗೆ ತೆರಳಿದ್ದ ಹಿರಿಯ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಘಟನೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರಿನ ಹೊಸಕೊಪ್ಪ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ರಸ್ತೆಯಲ್ಲಿ ನಡೆದಿದೆ.

ಪಾಕಿಸ್ತಾನದಿಂದ ಮತ್ತೆ ಡ್ರೋನ್ ದಾಳಿ: ಗಡಿ ಪ್ರದೇಶಗಳಲ್ಲಿ ಉದ್ವಿಗ್ನತೆ, ಭಾರತೀಯ ಸೇನೆ ತಕ್ಷಣ ಪ್ರತಿದಾಳಿ!

ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದು, ಗುರುವಾರದ ಬಳಿಕ ಶುಕ್ರವಾರ ರಾತ್ರಿ ಕೂಡ ಪಾಕಿಸ್ತಾನದಿಂದ ಡ್ರೋನ್ ದಾಳಿಗಳು ನಡೆದಿವೆ.

ದಿನ ವಿಶೇಷ – ವಿಶ್ವ ರೆಡ್ ಕ್ರಾಸ್ ದಿನ

ವಿಶ್ವದ ಶಾಂತಿಗಾಗಿ ವಿಶ್ವದ ಆರೋಗ್ಯಕ್ಕಾಗಿ ಮೇ 8ರಂದು ಜಗತ್ತಿನಾದ್ಯಂತ ವಿಶ್ವ ರೆಡ್ ಕ್ರಾಸ್ ದಿನ ಎಂದು ಆಚರಿಸಲ್ಪಡುತ್ತಿದೆ.ವಿಶ್ವ ರೆಡ್ ಕ್ರಾಸ್ ಸಂಸ್ಥೆಯ ಜನಕನಾದ ಹೆನ್ರಿ ಡ್ಯೂನಾಂಟ್ ಎನ್ನುವವರ ಜನ್ಮದಿನವಾದ ಕಾರಣದಿಂದ ಈ ದಿನವನ್ನು ಅದರ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ.