
ಕಾರ್ಕಳ : ಕುಕ್ಕುಂದೂರಿನ ಕೆ. ಎಂ . ಇ . ಎಸ್ . ಶಿಕ್ಷಣ ಸಂಸ್ಥೆಯಲ್ಲಿ ಪರೀಕ್ಷೆ ಬರೆದ 77 ವಿದ್ಯಾರ್ಥಿಗಳಲ್ಲಿ 75 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಪರೀಕ್ಷೆಗೆ ಕುಳಿತ 77 ವಿದ್ಯಾರ್ಥಿಗಳಲ್ಲಿ 27 ವಿಧ್ಯಾರ್ಥಿಗಳು ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. 43 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ , 5 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ವಿಜ್ಞಾನ ವಿಭಾಗದಲ್ಲಿ 585 ಅಂಕ ಪಡೆದ ಪ್ರಥ್ವಿ ಆಚಾರ್ಯ ಮತ್ತು ವಾಣಿಜ್ಯ ವಿಭಾಗದಲ್ಲಿ 588 ಅಂಕ ಪಡೆದ ಶ್ರೇಷ್ಠ.ಕೆ ಪ್ರಥಮ ಸ್ಥಾನಿಯಾದರೆ , 578 ಅಂಕ ಪಡೆದ ಅಂಬಿಕ ದಾಮೋದರ್ ಪಟಾಗರ್ ಮತ್ತು ಆಯೇಷ ಅಝ್ಮೀನಾ ದ್ವಿತೀಯ ಸ್ಥಾನಿಯಾಗಿದ್ದಾರೆ.