spot_img

ಕೆ.ಎಂ.ಇ.ಎಸ್‌ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಕೆ.ಬಾಲಕೃಷ್ಣರಾವ್‌ ಅಧಿಕಾರ ಸ್ವೀಕಾರ

Date:

spot_img

ಕಾರ್ಕಳದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಕೆ.ಎಂ.ಇ.ಎಸ್ ನ ಪ್ರಾಂಶುಪಾಲರಾಗಿ ಕೆ.ಬಾಲಕೃಷ್ಣರಾವ್‌ರವರು ದಿನಾಂಕ:27/05/2025ರಂದು ಅಧಿಕಾರ ಸ್ವೀಕರಿಸಿರುತ್ತಾರೆ. ಶ್ರೀಯುತರು ಆಂಗ್ಲಭಾಷೆ ಹಾಗೂ ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ನಲವತ್ತು ವರ್ಷಗಳ ದೀರ್ಘಕಾಲ ವಿಜ್ಞಾನ ಶಿಕ್ಷಕರಾಗಿ, ಆಂಗ್ಲಭಾಷಾ ಮತ್ತು ಗಣಿತ ಉಪನ್ಯಾಸಕರಾಗಿ ಶೈಕ್ಷಣಿಕ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದು, ಬೇರೆ ಬೇರೆ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಸೇವೆಯನ್ನು ಸಲ್ಲಿಸಿರುತ್ತಾರೆ. ಎನ್.ಸಿ.ಸಿ ನೇವಲ್‌ ವಿಂಗ್ ಕಮಿಶನ್ಸ್ ಆಫೀಸರಾಗಿ ಹದಿನೈದು ವರ್ಷಗಳ ಸೇವೆ ಸಲ್ಲಿಸಿದ ಇವರು ಕೊಚ್ಚಿನ್ ನೇವಲ್‌ಸ್, ವಿಶಾಖಪಟ್ಟಣ ನೇವಲ್ ಬೇಸ್‌ಗಳಲ್ಲಿ ಎನ್.ಸಿ.ಸಿ ತರಬೇತಿಗಳನ್ನು ಪಡೆದಿರುತ್ತಾರೆ. ಉತ್ತರ ಭಾರತದ ಮಸ್ಸೂರಿ, ಗೋವಾ ಇತ್ಯಾದಿ ಸ್ಥಳಗಳಲ್ಲಿ ರಾಷ್ಟ್ರೀಯ ಟ್ರಕ್ಕಿಂಗ್ ಎಕ್ಸ್‌ಪೆಡಿಶನ್‌ನಲ್ಲಿ ಭಾಗವಹಿಸಿದ್ದು, ಬೆಂಗಳೂರಿನ ಸೋಮನ ಹಳ್ಳಿಯಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಭಾಗವಹಿಸಿರುತ್ತಾರೆ. ಶ್ರೀಯುತರು ಕನ್ನಡ, ಇಂಗ್ಲೀಷ್ ಭಾಷೆಗಳಲ್ಲಿ ಲೇಖನಗಳನ್ನು ಬರೆದಿರುತ್ತಾರೆ. ಆಕಾಶವಾಣಿ ಮಂಗಳೂರಿನಲ್ಲಿ ಕಥೆ, ಚಿಂತನ, ಪ್ರಬಂಧಗಳನ್ನು ಮಂಡಿಸಿ, ಸಾಹಿತ್ಯದಲ್ಲಿಯೂ ಅಭಿರುಚಿಯನ್ನು ಹೊಂದಿರುತ್ತಾರೆ. ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಇವರು ಕಾರ್ಕಳ ಸಾಹಿತ್ಯ ಸಂಘ ಮತ್ತು ಅಖಿಲ ಭಾರತ ಸಾಹಿತ್ಯ ಪರಿಷದ್ ಕಾರ್ಕಳ ಇವುಗಳ ಸಕ್ರೀಯ ಸದಸ್ಯರಾಗಿರುತ್ತಾರೆ. ನಾಟಕ, ಯಕ್ಷಗಾನಗಳಲ್ಲಿ ಪಾತ್ರ ನಿರ್ವಹಿಸಿರುತ್ತಾರೆ. ಹಲವಾರು ಕನ್ನಡ ಸಾಹಿತ್ಯ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದು, ಕವನವಾಚನ ಮಾಡಿರುತ್ತಾರೆ. ಕಾರ್ಕಳ ಇಂಟರಾಕ್ಟ್ ಕ್ಲಬ್ ನ ಸಂಯೋಜಕರಾಗಿಯೂ, ಕಾರ್ಕಳ ಜೇಸೀಸ್ ಸಂಸ್ಥೆಯ ಸಕ್ರಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿರುತ್ತಾರೆ. ಶ್ರೀಯುತರು ಹಲವಾರು ಸಂಘ ಸಂಸ್ಥೆಗಳಿಂದ ಗೌರವ ಪುರಸ್ಕಾರಗಳನ್ನು ಪಡೆದಿರುತ್ತಾರೆ. ಇತ್ತೀಚಿಗೆ ಶ್ರೀಯುತರು ಬರೆದಿರುವ ಕನ್ನಡ ಕಾದಂಬರಿ ‘ಪಥ’ ಬಿಡುಗಡೆಯಾಗಿದೆ.

ಇವರು ಈ ವಿದ್ಯಾಸಂಸ್ಥೆಗೆ ಪ್ರಾಂಶುಪಾಲರಾಗಿ ನೇಮಕಗೊಂಡಿರುವುದಕ್ಕೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೆ.ಎಸ್ ಇಮ್ಮಿಯಾಜ್ ಅಹಮ್ಮದ್‌ರವರು ಶ್ರೀಯುತರಿಗೆ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕಾರ್ಕಳದಲ್ಲಿ “ಆಳ್ವಾಸ್ ಪ್ರಗತಿ” ಬೃಹತ್ ಉದ್ಯೋಗ ಮೇಳದ ಪೂರ್ವಭಾವಿ ಮಾಹಿತಿ ಶಿಬಿರ

ಈ ಮಾಹಿತಿ ಶಿಬಿರದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಹಿರಿಯ ಅಧಿಕಾರಿಗಳು ಮತ್ತು ತಜ್ಞರು ಭಾಗವಹಿಸಲಿದ್ದು, ಉದ್ಯೋಗ ಮೇಳದ ಸಮಗ್ರ ವಿವರಗಳನ್ನು ನೀಡಲಿದ್ದಾರೆ.

ಮಂಗಳೂರು: ಔಷಧಿಯೆಂದು ಇಲಿಪಾಷಾಣ ಸೇವಿಸಿದ್ದ ಹೆಡ್ ಕಾನ್ಸ್‌ಟೇಬಲ್ ದುರ್ಮರಣ!

ಔಷಧಿಯೆಂದು ತಪ್ಪಾಗಿ ಭಾವಿಸಿ ಇಲಿಪಾಷಾಣ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಒಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಧರ್ಮಸ್ಥಳ : ಮೊದಲು ಗುರುತಿಸಿದ ಸ್ಥಳದಲ್ಲಿ ಮಿನಿ ಹಿಟಾಚಿ ಬಳಕೆಯಾದರೂ ಸಿಗದ ಕಳೇಬರ

ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಬಳಿ ಮೃತದೇಹ ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಉತ್ಖನನ ಕಾರ್ಯದಲ್ಲಿ,ಮೊದಲು ಗುರುತಿಸಿದ ಸ್ಥಳದಲ್ಲಿ ಮಿನಿ ಹಿಟಾಚಿ ಯಂತ್ರವನ್ನು ಬಳಸಿದರೂ ಇದುವರೆಗೆ ಕಳೇಬರ ಪತ್ತೆಯಾಗಿಲ್ಲ.

ಮರವಂತೆಯಲ್ಲಿ ಮಳೆಗಾಲದಲ್ಲೂ ಅಪಾಯಕಾರಿ ಬೋಟಿಂಗ್: ಪ್ರವಾಸಿಗರ ಪ್ರಾಣದೊಂದಿಗೆ ಚೆಲ್ಲಾಟ!

ಬೈಂದೂರು ತಾಲೂಕಿನ ಮರವಂತೆ ಗ್ರಾಮದಲ್ಲಿ ಮಳೆಗಾಲದ ನಡುವೆಯೂ ಸೌಪರ್ಣಿಕಾ ನದಿಯಲ್ಲಿ ಅಪಾಯಕಾರಿ ಬೋಟಿಂಗ್ ನಡೆಸಲಾಗುತ್ತಿದ್ದು, ಇದು ಪ್ರವಾಸಿಗರ ಪ್ರಾಣಕ್ಕೆ ಅಪಾಯ ತಂದೊಡ್ಡುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.