spot_img

ಜ್ಞಾನಸುಧಾ : ಮೌಲ್ಯಸುಧಾ-39ರಲ್ಲಿ ‘ಸ್ವದೇಶ ಮಂತ್ರ’ ; ಮೌಲ್ಯ ಶಿಕ್ಷಣವೇ ಸಮಾಜದ ಎಲ್ಲಾ ಕೆಡುಕುಗಳಿಗೆ ರಾಮಬಾಣ : ನಿತ್ಯಾನಂದ ಎಸ್‌.ಬಿ.

Date:

spot_img

ಗಣಿತನಗರ : ಸ್ವದೇಶವೇ ಹೆಚ್ಚು ನಮಗೆ ಪ್ರಾಣಪ್ರಿಯವಾಗಿರುವುದು. ತೃಪ್ತಿಯನ್ನು ಹಾಗೂ ಆನಂದವನ್ನು ಮಾತೃಭೂಮಿ ಮಾತ್ರ ನೀಡಲು ಸಾಧ್ಯ ಅದೆಷ್ಟೋ ವೀರಸೇನಾನಿಗಳ ತ್ಯಾಗ, ಬಲಿದಾನಗಳಿಗೆ ದೇಶಭಕ್ತಿಯ ಸ್ಫೂರ್ತಿಗೆ ಸ್ವದೇಶ ಮಂತ್ರವೇ ಅಸ್ತ್ರವಾಗಿತ್ತು ಎಂದು ಮೈಸೂರಿನ ವಿವೇಕವಂಶಿ ಫೌಂಡೇಶನ್‌ನ ಸ್ಥಾಪಕರಾದ ಶ್ರೀ ನಿತ್ಯಾನಂದ ಎಸ್.ಬಿ ನುಡಿದರು.

ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ನ ಸಹಯೋಗದಲ್ಲಿ ನಡೆಯುತ್ತಿರುವ ಮೌಲ್ಯಸುಧಾ ಮಾಲಿಕೆ-39ರಲ್ಲಿ ‘ಸ್ವದೇಶಿ ಚಿಂತನೆ-ಯುವಕರಲ್ಲಿ ರಾಷ್ಟ್ರ ಭಕ್ತಿಯ ಬೆಳವಣಿಗೆ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.

ಈಗಿನ ಶಿಕ್ಷಣ ಕೇವಲ ಹೊಟ್ಟೆಪಾಡಿನ ಗುರಿಯಾಗಿದೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಮೌಲ್ಯಶಿಕ್ಷಣ ಕೂಡ ಅತ್ಯಗತ್ಯ ನಮ್ಮ ಸಮಾಜ ಸುಂದರವಾಗಬೇಕಾದರೆ, ಅದರ ಭವಿಷ್ಯವನ್ನು ನಿರ್ಮಾಣ ಮಾಡುವ ಭಾವಿ ಪ್ರಜೆಗಳಾದ ವಿದ್ಯಾರ್ಥಿಗಳಿಗೆ ಸಿಗಲೇ ಬೇಕಾದ ನೈತಿಕತೆಯನ್ನು ಈ ಮೌಲ್ಯಸುಧಾದ ಮೂಲಕ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು ಕೊಡುತ್ತಿರುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿ ಶ್ರೀ ಅನಿಲ್ ಕುಮಾರ್‌ ಜೈನ್, ಸಿ.ಇ.ಒ ಹಾಗೂ ಪ್ರಾಂಶುಪಾಲ ಶ್ರೀ ದಿನೇಶ್ ಎಂ ಕೊಡವೂರ್, ಜ್ಯೋತಿ ಪದ್ಮನಾಭ ಭಂಡಿ, ಉಪಪ್ರಾಂಶುಪಾಲರಾದ ಶ್ರೀ ಸಾಹಿತ್ಯ ಉಪಸ್ಥಿತರಿದ್ದರು. ಆಂಗ್ಲಭಾಷಾ ಉಪನ್ಯಾಸಕಿ ಕು.ದಿವ್ಯ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಮೂಡುಬಿದಿರೆ: ಬೆಳುವಾಯಿಯಲ್ಲಿ ಕಾರು ಅಪಘಾತ; ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೂಡುಬಿದಿರೆ ತಾಲೂಕಿನ ಬೆಳುವಾಯಿ ಹೋಮಲ್ಕೆ ಎಂಬಲ್ಲಿ ಕಾರು ಅಪಘಾತ ಸಂಭವಿಸಿ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಪಡಕುತ್ಯಾರು ಚಾತುರ್ಮಾಸ್ಯ ನಿರತ ಅನಂತ ಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳ ಆಶೀರ್ವಾದ ಪಡೆದ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್

ಶ್ರೀ ಮದ್ ಮಹಾಸಂಸ್ಥಾನ ಸರಸ್ವತಿ ಪೀಠ ಕಟಪಾಡಿ ಪಡಕುತ್ಯಾರು ಇಲ್ಲಿ ಚಾತುರ್ಮಾಸ್ಯ ವೃತಾಚರಣೆ ನಿರತ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳನ್ನು ಶಾಸಕ ವಿ. ಸುನಿಲ್ ಕುಮಾರ್ ಶನಿವಾರ ಭೇಟಿಯಾಗಿ ಆಶಿರ್ವಾದ ಪಡೆದರು.

ಪರಮಪೂಜ್ಯ ಲಿಂಗೈಕ್ಯ ಡಾ ಶರಣಬಸಪ್ಪ ಅಪ್ಪವರಿಗೆ ಕೇಂದ್ರ ಸರ್ಕಾರ ಈ ಬಾರಿ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ನೀಡಲಿ : ಶಶೀಲ್ ಜಿ ನಮೋಶಿ

ಶಶೀಲ್ ಜಿ ನಮೋಶಿ ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಸ್ಯಾಕ್ ಸಭಾಂಗಣದಲ್ಲಿ ನಡೆದ ಅಗಸ್ಟ್ 14 ರಂದು ಲಿಂಗೈಕ್ಯರಾದ ಪರಮ ಪೂಜ್ಯ ಶ್ರೀ ಶರಣಬಸಪ್ಪ ಅಪ್ಪ ಅವರಿಗೆ ಸಂಸ್ಥೆಯ ವತಿಯಿಂದ ನಡೆದ ಶೃದ್ಧಾಂಜಲಿಯ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಲೂರ್ಡ್ಸ್ ಶಾಲೆಯ ವಿದ್ಯಾರ್ಥಿಗಳ ಭರ್ಜರಿ ಸಾಧನೆ

ಆಗಸ್ಟ್ 3ರಂದು ಶಿವಮೊಗ್ಗದ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಲೂರ್ಡ್ಸ್ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.