spot_img

ಜ್ಞಾನಸುಧಾ : ಸಂಸ್ಥಾಪಕರ ಜನ್ಮ ದಿನಾಚರಣೆ ;ರಕ್ತದಾನ ಶಿಬಿರ ಹಾಗೂ ಸಾಮಾಜಿಕ ನೆರವಿನ ಕಾರ್ಯಕ್ರಮ

Date:

spot_img

ಆಗಸ್ಟ್ 19 : ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್‌ ಟ್ರಸ್ಟ್‌ನ ವತಿಯಿಂದ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ದಿ.ಗೋಪ ಶೆಟ್ಟಿಯವರ 104ನೇ ಜನ್ಮದಿನದ ಅಂಗವಾಗಿ ಆಗಸ್ಟ್ 21ರಂದು ಸಾಮಾಜಿಕ ನೆರವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಆ ದಿನ ಬೆಳಗ್ಗೆ ಕೆ.ಎಂ.ಸಿ. ಬ್ಲಡ್ ಸೆಂಟರ್‌ನ ನೆರವಿನೊಂದಿಗೆ ರಕ್ತದಾನ ಶಿಬಿರ ನೆರವೇರಲಿರುವುದು.

ಸನ್ಮಾನ ಕಾರ್ಯಕ್ರಮ : ಇದೇ ಸಂದರ್ಭ ಖ್ಯಾತ ಸಮಾಜ ಸೇವಕ ಶ್ರೀ ವಿಶು ಶೆಟ್ಟಿ , ಸ್ವಚ್ಛ ಕಾರ್ಕಳ ಬ್ರಿಗೇಡ್‌ನ ಶ್ರೀ ಫೆಲಿಕ್ಸ್ ವಾಝ್ ಹಾಗೂ ಕುಕ್ಕುಂದೂರು, ಬೈಲೂರು, ಹಿರ್ಗಾನ ಹಾಗೂ ಅಜೆಕಾರ್ ಗ್ರಾಮಗಳ ಸ್ವಚ್ಛತಾ ಕಾರ್ಮಿಕರಿಗೆ ಗೌರವ ಸನ್ಮಾನ ಜರುಗಲಿರುವುದು.

ರಕ್ತದಾನ ಶಿಬಿರವನ್ನು ಕಸ್ತೂರ್ಬಾ ಹಾಸ್ಪಿಟಲ್ ರಕ್ತನಿಧಿ ಹಾಗೂ ಎಚ್.ಬಿ.ಟಿ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಡಾ.ಗಣೇಶ್ ಮೋಹನ್‌ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 3.30ಕ್ಕೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಕಳ ರೋಟರಿ ಆಸ್ಪತ್ರೆಯ ಪ್ರಸೂತಿ ಹಾಗೂ ಸ್ತ್ರೀ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸಂಜಯ್ ವಹಿಸಲಿದ್ದಾರೆ. ಕುಕ್ಕುಂದೂರು ಗ್ರಾಮ ಪಂಚಾಯತ್ ಸದಸ್ಯರಾದ ರಹಮತ್ತುಲ್ಲಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್‌ ಟ್ರಸ್ಟ್‌ ಪ್ರಕಟಣೆಯಲ್ಲಿ
ತಿಳಿಸಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಅತಿಯಾದ ಗಾಳಿ ಮಳೆಯಿಂದ ಆದ ಹಾನಿಗೆ ತುರ್ತು ಪರಿಹಾರ ಒದಗಿಸುವಂತೆ ಸರ್ಕಾರಕ್ಕೆ ಬಿಜೆಪಿ ಕ್ಷೇತ್ರಧ್ಯಕ್ಷ ನವೀನ್‌ ನಾಯಕ್‌ ಆಗ್ರಹ

ಅತಿಯಾದ ಗಾಳಿ ಮಳೆಯಿಂದ ಆದ ಹಾನಿಗೆ ತುರ್ತು ಪರಿಹಾರ ಒದಗಿಸುವಂತೆ ಸರ್ಕಾರಕ್ಕೆ ಬಿಜೆಪಿ ಕ್ಷೇತ್ರಧ್ಯಕ್ಷ ನವೀನ್‌ ನಾಯಕ್‌ ಆಗ್ರಹಿಸಿದ್ದಾರೆ.

ರೋಬೋಟ್‌ನಿಂದಲೇ ಮಗುವಿನ ಜನನ: ಜಗತ್ತಿನ ಮೊದಲ ಕೃತಕ ಗರ್ಭಧಾರಣೆಗೆ ಚೀನಾ ಸಿದ್ಧತೆ

ಭವಿಷ್ಯದಲ್ಲಿ ಹೆರಿಗೆಗೆ ಮಹಿಳೆಯರ ಅಗತ್ಯ ಇರಲಿಕ್ಕಿಲ್ಲ. ಯಾಕೆಂದರೆ, ಹ್ಯೂಮನಾಯ್ಡ್ ರೋಬೋಟ್‌ಗಳು ಮಾನವ ಮಗುವಿಗೆ ಜನ್ಮ ನೀಡುವ ಸಾಧ್ಯತೆಯಿದೆ ಎಂದು ಚೀನಾದ ವಿಜ್ಞಾನಿಗಳು ಹೇಳಿದ್ದಾರೆ.

ಕೃಷ್ಣರಾಜ ಹೆಗ್ಡೆ ಕೌಡೂರು ( ತಮ್ಮಣ್ಣ) ದೈವಾಧೀನ – ನಾಳೆ ಬೈಲೂರಿನಲ್ಲಿ ಅಂತಿಮ ದರ್ಶನ

ಎಲ್ಲರಿಗೂ ಪ್ರೀತಿಪಾತ್ರರಾಗಿದ್ದ ಹಾಗೂ ಗೌರವಾನ್ವಿತ ವ್ಯಕ್ತಿಯಾಗಿದ್ದ ಕೌಡೂರಿನ ಶ್ರೀ ಕೃಷ್ಣರಾಜ ಹೆಗ್ಡೆ ರವರು ಇಂದು ದೈವಾಧೀನರಾಗಿದ್ದಾರೆ.

ರೈತರೇ ಎಚ್ಚರ ! ಅತಿಯಾದ ಯೂರಿಯಾ ಗೊಬ್ಬರ ಕೃಷಿಗೆ ಶಾಪ: ಬಂಜರಾಗುವ ಭೂಮಿ , ಆರೋಗ್ಯಕ್ಕೆ ಕುತ್ತು

ರೈತರಿಗೆ ಸುಲಭವಾಗಿ ಲಭ್ಯವಿರುವ ಮತ್ತು ಬೆಳೆಗಳ ಬೆಳವಣಿಗೆಗೆ ಶೀಘ್ರ ಫಲಿತಾಂಶ ನೀಡುತ್ತದೆ ಎಂದು ನಂಬಿರುವ ಯೂರಿಯಾ ರಾಸಾಯನಿಕ ಗೊಬ್ಬರವು ಇಂದು ರೈತ ಸಮುದಾಯ ಮತ್ತು ಭೂಮಿಯ ಆರೋಗ್ಯಕ್ಕೆ ಬಹುದೊಡ್ಡ ಅಪಾಯ ತಂದೊಡ್ಡಿದೆ.