spot_img

ಜೆ.ಇ.ಇ.ಮೈನ್ ಅಂತಿಮ ಫಲಿತಾಂಶ : ಜ್ಞಾನಸುಧಾದ 9 ವಿದ್ಯಾರ್ಥಿಗಳಿಗೆ 99 ಕ್ಕಿಂತ ಅಧಿಕ ಪರ್ಸಂಟೈಲ್

Date:

spot_img

ಆಕಾಶ್ ಪ್ರಭು 99.9194206 ಪರ್ಸಂಟೈಲ್ ಸಾಧನೆ
ಭೌತಶಾಸ್ತ್ರದಲ್ಲಿ ಇಬ್ಬರಿಗೆ 100 ಪರ್ಸಂಟೈಲ್

ಕಾರ್ಕಳ/ಉಡುಪಿ : ರಾಷ್ಟ್ರಮಟ್ಟದಲ್ಲಿ ಇಂಜಿನಿಯರಿಂಗ್ ಪ್ರವೇಶಕ್ಕಾಗಿ ಎನ್.ಟಿ.ಎ ನಡೆಸುವ ಜೆ.ಇ.ಇ ಮೈನ್ ಪರೀಕ್ಷೆಯ 2ನೇ ಫೇಸ್‌ನ ಅಂತಿಮ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 9 ವಿದ್ಯಾರ್ಥಿಗಳು 99 ಕ್ಕೂ ಅಧಿಕ ಪರ್ಸಂಟೈಲ್ ಪಡೆದಿದ್ದು, ಇಬ್ಬರು ವಿದ್ಯಾರ್ಥಿಗಳು ಭೌತಶಾಸ್ತ್ರದಲ್ಲಿ 100 ಪರ್ಸಂಟೈಲ್ ಗಳಿಸಿದ್ದಾರೆ.

ವಿದ್ಯಾರ್ಥಿಗಳಾದ ಆಕಾಶ್ ಎಚ್. ಪ್ರಭು 99.9194206 ಪರ್ಸಂಟೈಲ್, ಧನುಶ್ ನಾಯಕ್ 99.7330507 ಪರ್ಸಂಟೈಲ್, ತರುಣ್ ಎ. ಸುರಾನ 99.7329879 ಪರ್ಸಂಟೈಲ್, ಕೆ. ಮನೋಜ್ ಕಾಮತ್ 99.6811864 ಪರ್ಸಂಟೈಲ್, ಚಿಂತನ್ ಜೆ.ಮೆಘಾವತ್ 99.6686123 ಪರ್ಸಂಟೈಲ್, ಹೃತ್ವಿಕ್ ಶೆಟ್ಟಿ 99.6582215 ಪರ್ಸಂಟೈಲ್, ವೇದಾಂತ್ ಶೆಟ್ಟಿ 99.2929708 ಪರ್ಸಂಟೈಲ್, ಸತೀಶ್ ಎಸ್.ಕರಗನ್ನಿ 99.1444377 ಪರ್ಸಂಟೈಲ್ ಹಾಗೂ ಅಪೂರ್ವ್ ವಿ. ಕುಮಾರ್ 99.0512045 ಪರ್ಸಂಟೈಲ್ ಪಡೆದಿದ್ದಾರೆ.

ವಿಷಯವಾರು ಅತ್ಯಧಿಕ ಪರ್ಸಂಟೈಲ್ ಗಳಿಸಿದ ಸಂಸ್ಥೆಯ ವಿದ್ಯಾರ್ಥಿಗಳಲ್ಲಿ, ಭೌತಶಾಸ್ತ್ರದಲ್ಲಿ 100 ಪರ್ಸಂಟೈಲ್‌ನೊಂದಿಗೆ ಸರ್ವಜಿತ್ ಕೆ.ಆರ್ ಮತ್ತು ಸಿದ್ಧಾರ್ಥ್ ಎ, ರಸಾಯನಶಾಸ್ತ್ರದಲ್ಲಿ ಅಮರ್ಥ್ಯ ಭಟ್ 99.9714342 ಪರ್ಸಂಟೈಲ್ ಹಾಗೂ ಗಣಿತಶಾಸ್ತ್ರದಲ್ಲಿ ಕೆ.ಮನೋಜ್‌ಕಾಮತ್ 99.9331666 ಪರ್ಸಂಟೈಲ್ ಪಡೆದಿದ್ದಾರೆ.

ವಿಷಯವಾರು ವಿಭಾಗದಲ್ಲಿ ಸಂಸ್ಥೆಯು, ಭೌತಶಾಸ್ತ್ರದಲ್ಲಿ 34 ಮಂದಿ, ರಸಾಯನಶಾಸ್ತ್ರದಲ್ಲಿ 35 ಮಂದಿ ಹಾಗೂ ಗಣಿತಶಾಸ್ತ್ರದಲ್ಲಿ 7 ಮಂದಿ ವಿದ್ಯಾರ್ಥಿಗಳು 99 ಕ್ಕಿಂತ ಅಧಿಕ ಪರ್ಸಂಟೈಲ್ ದಾಖಲಿಸಿಕೊಂಡಿದ್ದಾರೆ.

ಜ್ಞಾನಸುಧಾದಲ್ಲಿ 99 ಪರ್ಸಂಟೈಲ್‌ಗಿಂತ ಅಧಿಕ 9 ವಿದ್ಯಾರ್ಥಿಗಳು,
98 ಪರ್ಸಂಟೈಲ್‌ಗಿಂತ ಅಧಿಕ 30 ವಿದ್ಯಾರ್ಥಿಗಳು,
97 ಪರ್ಸಂಟೈಲ್‌ಗಿಂತ ಅಧಿಕ 60 ವಿದ್ಯಾರ್ಥಿಗಳು
96 ಪರ್ಸಂಟೈಲ್‌ಗಿಂತ ಅಧಿಕ 88 ವಿದ್ಯಾರ್ಥಿಗಳು
95 ಪರ್ಸಂಟೈಲ್‌ಗಿಂತ ಅಧಿಕ 117 ವಿದ್ಯಾರ್ಥಿಗಳು
90 ಪರ್ಸಂಟೈಲ್‌ಗಿಂತ ಅಧಿಕ 217 ವಿದ್ಯಾರ್ಥಿಗಳು ಉತ್ತಮ ಪರ್ಸಂಟೈಲ್ ಗಳಿಸಿದ್ದಾರೆ.
ಈ ಎಲ್ಲಾ ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಸಾಧನೆಗೆ ಬೆನ್ನೆಲುಬಾದ ಜ್ಞಾನಸುಧಾ ಎಂಟ್ರನ್ಸ್ ಅಕಾಡೆಮಿಯ ಪರಿಶ್ರಮವನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರು, ಆಡಳಿತ ಮಂಡಳಿ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಅಭಿನಂದಿಸಿ ಹರ್ಷವ್ಯಕ್ತಪಡಿಸಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕಾರ್ಕಳದ ಗೋವಿಂದೂರಿನಲ್ಲಿ ಭೀಕರ ಗಾಳಿ ಮಳೆಗೆ ಅಯ್ಯಪ್ಪ ಶಿಬಿರದ ಮೇಲ್ಚಾವಣಿ ಕುಸಿತ

ಇಂದು ಮದ್ಯಾಹ್ನ 3:00 ಸುಮಾರಿಗೆ ಬಿರುಸಿನ ಗಾಳಿ ಮಳೆಗೆ ಕಾರ್ಕಳದ ಗೋವಿಂದೂರಿನ ಅಯ್ಯಪ್ಪ ಶಿಬಿರದ ಮೇಲ್ಚಾವಣಿ ಗಾಳಿಯ ರಭಸಕ್ಕೆ ಹಾರಿ ನುಚ್ಚುನೂರಾಗಿದೆ.

40 ದಾಟಿದವರ ಸಂಧು ನೋವಿಗೆ ಆಯುರ್ವೇದದಲ್ಲಿದೆ ಪರಿಣಾಮಕಾರಿ ಪರಿಹಾರ!

ವಯಸ್ಸು 40 ದಾಟಿದಂತೆ ಕಾಣಿಸಿಕೊಳ್ಳುವ ಸಂಧು ನೋವು ಅದೆಷ್ಟೋ ಜನರನ್ನು ಕಾಡುತ್ತದೆ.

ವಾಟ್ಸಾಪ್‌ನಿಂದ ಹೊಸ AI ವೈಶಿಷ್ಟ್ಯ ‘ಕ್ವಿಕ್ ರಿಕ್ಯಾಪ್’: ಇನ್ನು ಮಿಸ್ಡ್ ಮೆಸೇಜ್ ಚಿಂತೆ ಇಲ್ಲ!

ಮೆಟಾ ಕಂಪನಿಯು ಅಭಿವೃದ್ಧಿಪಡಿಸಿರುವ ವಾಟ್ಸಾಪ್ ಕ್ವಿಕ್ ರಿಕ್ಯಾಪ್ AI (WhatsApp Quick Recap AI) ಎಂಬ ನೂತನ ಕೃತಕ ಬುದ್ಧಿಮತ್ತೆ ಆಧಾರಿತ ವೈಶಿಷ್ಟ್ಯವು, ಬಳಕೆದಾರರು ಗ್ರೂಪ್‌ಗಳು ಅಥವಾ ವೈಯಕ್ತಿಕ ಚಾಟ್‌ಗಳಲ್ಲಿ ಮಿಸ್ ಮಾಡಿಕೊಂಡ ಸಂದೇಶಗಳನ್ನು ಸರಳ ಮತ್ತು ಅರ್ಥಪೂರ್ಣವಾಗಿ ಸಂಕ್ಷಿಪ್ತಗೊಳಿಸಲು ನೆರವಾಗಲಿದೆ.

ಜ್ಞಾನಸುಧಾ : ಮೌಲ್ಯಸುಧಾ-38ರಲ್ಲಿ ‘ಕಾರ್ಗಿಲ್ ವಿಜಯ ದಿವಸ’

ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಸಹಯೋಗದಲ್ಲಿ ತಿಂಗಳ ಸರಣಿಯ ಮೌಲಿಕ ಕಾರ್ಯಕ್ರಮ ಮೌಲ್ಯಸುಧಾ ಮಾಲಿಕೆ-38ನ್ನು ಕಾರ್ಗಿಲ್ ವಿಜಯದಿವಸದ ಶುಭಸಂದರ್ಭದಲ್ಲಿ ಆಯೋಜಿಸಲಾಗಿದೆ.