
- ಬಿ.ಪ್ಲಾನಿಂಗ್‌ನಲ್ಲಿ ಮನೋಜ್ ಕಾಮತ್ ಕೆಟಗರಿ ವಿಭಾಗದಲ್ಲಿ ರಾಷ್ಟ್ರಕ್ಕೆ ಪ್ರಥಮ ಹಾಗೂ ಜನರಲ್ ಮೆರಿಟ್ ವಿಭಾಗದಲ್ಲಿ 6ನೇ ರ‍್ಯಾಂಕ್
- ಬಿ.ಆರ್ಕ್ ನಲ್ಲಿ ಚಿಂತನ್ ಮೆಘವತ್ ಕೆಟಗರಿ ವಿಭಾಗದಲ್ಲಿ ರಾಷ್ಟ್ರಕ್ಕೆ ಪ್ರಥಮ ರ‍್ಯಾಂಕ್ ಹಾಗೂ ಜನರಲ್ ಮೆರಿಟ್ ವಿಭಾಗದಲ್ಲಿ 19ನೇ ರ‍್ಯಾಂಕ್
- ಗಣಿತಶಾಸ್ತ್ರದಲ್ಲಿ ಮನೋಜ್ ಕಾಮತ್‌ಗೆ 100 ಪರ್ಸಂಟೈಲ್
ಗಣಿತನಗರ : ರಾಷ್ಟ್ರ ಮಟ್ಟದಲ್ಲಿ ಎನ್.ಟಿ.ಎ ನಡೆಸುವ ಜೆಇಇ ಮೈನ್.ಬಿ.ಆರ್ಕ್ ಮತ್ತು ಬಿ.ಪ್ಲಾನಿಂಗ್ ನ ಅಂತಿಮ ಫಲಿತಾಂಶದಲ್ಲಿ, ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಕೆ.ಮನೋಜ್ ಕಾಮತ್ ಬಿ.ಪ್ಲಾನಿಂಗ್ ವಿಭಾಗದಲ್ಲಿ 99.9855627 ಪರ್ಸಂಟೈಲ್ ಪಡೆದು ಜನರಲ್ ವಿಭಾಗದಲ್ಲಿ 6ನೇ ಹಾಗೂ ಇ.ಡಬ್ಲ್ಯು.ಎಸ್ ವರ್ಗದಲ್ಲಿ 1ನೇ ರ‍್ಯಾಂಕ್ ಮತ್ತು ಬಿ.ಆರ್ಕ್ ವಿಭಾಗದಲ್ಲಿ 99.8881752 ಪರ್ಸಂಟೈಲ್ (ಗಣಿತಶಾಸ್ತ್ರದಲ್ಲಿ 100 ಪರ್ಸಂಟೈಲ್) ಪಡೆದು ಇ.ಡಬ್ಲ್ಯು.ಎಸ್. ವರ್ಗದಲ್ಲಿ 6ನೇ ಮತ್ತು ಜನರಲ್ ಮೆರಿಟ್ ವಿಭಾಗದಲ್ಲಿ 83ನೇ ರ‍್ಯಾಂಕ್ ನ್ನು ಪಡೆದಿರುತ್ತಾರೆ.
ಬಿ.ಆರ್ಕ್ ವಿಭಾಗದಲ್ಲಿ ಚಿಂತನ್ ಮೆಘವತ್ 99.9741943 ಪರ್ಸಂಟೈಲ್ ಪಡೆದು ಜನರಲ್ ಮೆರಿಟ್ ವಿಭಾಗದಲ್ಲಿ 19ನೇ ರ‍್ಯಾಂಕ್ ಹಾಗೂ ಕೆಟಗರಿ ವಿಭಾಗದಲ್ಲಿ ಮೊದಲನೇ ರ‍್ಯಾಂಕ್ ನ್ನು, ಬಿ.ಪ್ಲಾನಿಂಗ್ ವಿಭಾಗದಲ್ಲಿ 99.8556269 ಪರ್ಸಂಟೈಲ್‌ನೊಂದಿಗೆ ಕೆಟಗರಿ ವಿಭಾಗದಲ್ಲಿ 3ನೇ ರ‍್ಯಾಂಕ್ ಹಾಗೂ ಜನರಲ್ ಮೆರಿಟ್ ವಿಭಾಗದಲ್ಲಿ 48ನೇ ರ‍್ಯಾಂಕ್ ನ್ನು ತನ್ನದಾಗಿಸಿಕೊಂಡಿದ್ದಾರೆ. ಜೊತೆಗೆ ಆಕಾಶ್ ಪ್ರಭು 99.9627251 ಪರ್ಸಂಟೈಲ್ ನೊಂದಿಗೆ 27ನೇ ಬ್ಯಾಂಕ್, ತರುಣ್ ಎ.ಸುರಾನ 99.9483886 ಪರ್ಸಂಟೈಲ್‌ನೊಂದಿಗೆ 39ನೇ ರ‍್ಯಾಂಕ್ ಹಾಗೂ ಕೆಟಗರಿ ವಿಭಾಗದಲ್ಲಿ 7ನೇ ರ‍್ಯಾಂಕ್ , ಅಭಿರಾಮ್ ತೇಜ 99.7562794 ಪರ್ಸಂಟೈಲ್, ದರ್ಶನ್ ಡಿ ಬಾಯಾರ್ 99.6466111 ಪರ್ಸಂಟೈಲ್ ಮತ್ತು ರುತ್ವಿಕ್ ಶೆಟ್ಟಿ 99.3548572 ಪರ್ಸಂಟೈಲ್ ಗಳಿಸಿದ್ದಾರೆ.
ಜೆ.ಇ.ಇ ಮೈನ್, ಬಿ.ಆರ್ಕ್‌ನ ಅಂತಿಮ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 7 ವಿದ್ಯಾರ್ಥಿಗಳಿಗೆ 99ಕ್ಕಿಂತ ಅಧಿಕ ಪರ್ಸಂಟೈಲ್, 13 ವಿದ್ಯಾರ್ಥಿಗಳಿಗೆ 98ಕ್ಕಿಂತ ಅಧಿಕ ಪರ್ಸಂಟೈಲ್, 17 ವಿದ್ಯಾರ್ಥಿಗಳಿಗೆ 97ಕ್ಕಿಂತ ಅಧಿಕ ಪರ್ಸಂಟೈಲ್, 19 ವಿದ್ಯಾರ್ಥಿಗಳಿಗೆ 96ಕ್ಕಿಂತ ಅಧಿಕ ಪರ್ಸಂಟೈಲ್ ಹಾಗೂ 24 ವಿದ್ಯಾರ್ಥಿಗಳು 95ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿರುತ್ತಾರೆ.
ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಸಾಧನೆಗೆ ಬೆನ್ನೆಲುಬಾದ ಜ್ಞಾನಸುಧಾ ಎಂಟ್ರನ್ಸ್ ಅಕಾಡೆಮಿಯ ಪರಿಶ್ರಮವನ್ನು ಶ್ಲಾಘಿಸಿ ಎಲ್ಲರನ್ನು ಅಭಿನಂದಿಸಿದ್ದಾರೆ.