spot_img

ಜೆ.ಇ.ಇ.(ಬಿ.ಆರ್ಕ್) ಫಲಿತಾಂಶ ಪ್ರಕಟ: ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಅಮೋಘ ಸಾಧನೆ

Date:

ದೇಶದ ಪ್ರತಿಷ್ಠಿತ ಆರ್ಕಿಟೆಕ್ಚರ್ ವಿಶ್ವವಿದ್ಯಾನಿಲಯಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳಿಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುವ ಜೆ.ಇ.ಇ.(ಬಿ. ಆರ್ಕ್ )2025 ಅರ್ಹತಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಮೋಹಿತ್-99.4093359 ಪರ್ಸೆಂಟೈಲ್ ನೊಂದಿಗೆ ಬಿ. ಆರ್ಕ್ ಮತ್ತು ಬಿ. ಪ್ಲಾನಿಂಗ್ ಎರಡರಲ್ಲೂ ರಾಷ್ಟ್ರಕ್ಕೆ ಕೆಟಗರಿ ವಿಭಾಗದಲ್ಲಿ ಆರನೇ ರ‍್ಯಾಂಕ್ ಗಳಿಸಿ ವಿಶಿಷ್ಟಸಾಧನೆಗೈದಿದ್ದಾರೆ.

ವಿದ್ಯಾರ್ಥಿಗಳಾದ ತೇಜಸ್ ವಿ ನಾಯಕ್ (AIR 101), ಟಿ ಪ್ರದೀಪ್ (AIR 117),ಮೋನಿಕಾ ಕೆ ಎ(AIR 140), ಸುಧಾಂಶು ಪಾಲೇಕರ್ (AIR 268), ಪ್ರತಿಕ್ ಎನ್ ಶೆಟ್ಟಿ (AIR 362), ತ್ರಿಶ್ಲಾ ಗಾಂಧಿ (AIR 423), ರೋಹಿತ್ ಜಿ ಬಿ -(AIR 461), ಸಾಚಿ ಶಿವಕುಮಾರ್ -(AIR 484), ಚಿನ್ಮಯಿ ಆರ್-(AIR 519), ಮನೋಜ್ ಎಂ ಆರ್ -(AIR 846), ಚೇತನ್ ಗೌಡ -(AIR 867), ಆಕಾಶ್ ದೇವಾಡಿಗ -(AIR 980) ಕೆಟಗರಿ ವಿಭಾಗದಲ್ಲಿ ರ‍್ಯಾಂಕ್ ಗಳಿಸಿದ್ದಾರೆ. 500 ರ‍್ಯಾಂಕ್ ಒಳಗೆ 10 ಮಂದಿ, 1000 ರ‍್ಯಾಂಕ್ ಒಳಗೆ 14 ಮಂದಿ ವಿದ್ಯಾರ್ಥಿಗಳು ತೇರ್ಗಡೆ ಪಡೆಯುವ ಮೂಲಕ ರಾಷ್ಟ್ರದ ಪ್ರತಿಷ್ಠಿತ ಸಂಸ್ಥೆಗಳಿಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.

ರಾಷ್ಟ್ರದ ಅತ್ಯುನ್ನತ ಸಂಸ್ಥೆಯಾದ ಐ.ಐ.ಟಿ. ಹಾಗೂ ಇನ್ನಿತರ ಆರ್ಕಿಟೆಕ್ಚರ್ ಕಾಲೇಜುಗಳಲ್ಲಿ ಬಿ. ಆರ್ಕ್ ಕೋರ್ಸಿಗೆ ಪ್ರವೇಶ ಪಡೆಯಲು ಈ ಪರೀಕ್ಷೆಗೆ ಕ್ರಿಯೇಟಿವ್ ಸಂಸ್ಥೆಯು ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುತ್ತಾ ಬಂದಿದ್ದು ಸಂಸ್ಥೆಯು ಆರಂಭದ ವರ್ಷದಿಂದಲೇ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಉನ್ನತ ಫಲಿತಾಂಶ ಗಳಿಸುವ ಮೂಲಕ ಗುಣಾತ್ಮಕ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ.

ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು ಹಾಗೂ ಜೆ.ಇ.ಇ. ಬಿ. ಆರ್ಕ್ ಪರೀಕ್ಷೆಯ ಸಂಯೋಜಕರಾದ ಸುಮಂತ್ ದಾಮ್ಲೆ, ರಕ್ಷಿತ್ ಬಿ.ಎಸ್, ಶರತ್ ರವರು ಅಭಿನಂದನೆ ಸಲ್ಲಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಖಳನಟ ಮುಕುಲ್ ದೇವ್ ನಿಧನ – ಉಪೇಂದ್ರ ಅಭಿನಯದ ‘ರಜನಿ’ ಚಿತ್ರದಿಂದ ಕನ್ನಡಿಗರ ಮನ ಗೆದ್ದ ನಟ ವಿಧಿವಶ

ಬಾಲಿವುಡ್ ಹಾಗೂ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಖ್ಯಾತ ನಟ ಮುಕುಲ್ ದೇವ್ ಶನಿವಾರ ನಿಧನರಾಗಿದ್ದಾರೆ.

ಜಲ, ವಾಯು ಸಂಕಟ, ಮಹಾಮಾರಿ, ರಾಜಕೀಯ ಬದಲಾವಣೆ – ಕೋಡಿಮಠ ಸ್ವಾಮೀಜಿಯಿಂದ ಭವಿಷ್ಯವಾಣಿ

ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಬೆಳಗಾವಿಯಲ್ಲಿ ಸ್ಫೋಟಕ ಭವಿಷ್ಯ ನುಡಿದ್ದು, ಮುಂಬರುವ ದಿನಗಳಲ್ಲಿ ಜಗತ್ತಿಗೆ ಗಂಭೀರ ಸವಾಲುಗಳು ಎದುರಾಗಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮಕ್ಕಳ ಆರೋಗ್ಯದಲ್ಲಿ ದೊಡ್ಡಪತ್ರೆ ಎಲೆಯ ಮಹತ್ವ

ಮಳೆಗಾಲದ ವಾತಾವರಣ ಬದಲಾವಣೆಗಳಿಂದ ಮಕ್ಕಳಿಗೆ ಶೀತ, ಕೆಮ್ಮು, ಜ್ವರ ಸೇರಿ ಸಣ್ಣ ಅನಾರೋಗ್ಯಗಳು ಸಾಮಾನ್ಯ. ಈ ವೇಳೆ ದೊಡ್ಡಪತ್ರೆ ಎಲೆಗಳು ರಾಮಬಾಣ ಮನೆಮದ್ದಾಗಬಹುದು.

ಉಡುಪಿ ಜಿಲ್ಲೆಗೆ ಮೊದಲ ವಿದ್ಯುತ್ ಚಿತಾಗಾರ: ಕೋಟೇಶ್ವರ ಹಿಂದೂ ರುದ್ರಭೂಮಿಯಲ್ಲಿ ನೂತನ ಸೌಲಭ್ಯ ಉದ್ಘಾಟನೆ

ಉಡುಪಿ ಜಿಲ್ಲೆಯ ಮೊದಲ ವಿದ್ಯುತ್ ಚಿತಾಗಾರವು ಕುಂದಾಪುರ ತಾಲೂಕಿನ ಕೋಟೇಶ್ವರದ ಹಿಂದೂ ರುದ್ರಭೂಮಿಯಲ್ಲಿ ನಿರ್ಮಾಣಗೊಂಡಿದ್ದು, ಶನಿವಾರ ಅದ್ದೂರಿಯಾಗಿ ಲೋಕಾರ್ಪಣೆಗೊಂಡಿತು