
ಕಾರ್ಕಳ : ಜೆಸಿಐ ಕಾರ್ಕಳ ರೂರಲ್ ವತಿಯಿಂದ ವಲಯ ನಿರ್ದೇಶಿತ ಆರೋಹಣ ವ್ಯಕ್ತಿತ್ವ ವಿಕಸನಕ್ಕೆ ತರಬೇತಿಗಳ ಸಪ್ತಾಹದ ಹೂರಣ ಇದರ ಅಂಗವಾಗಿ ಆಹಾರ – ವಿಹಾರ , ಆಚಾರ – ವಿಚಾರಗಳ ಮೂಲಕ ವ್ಯಕ್ತಿತ್ವ ನಿರ್ಮಾಣ ಮತ್ತು ಚಟುವಟಿಕೆಗಳ ಮೂಲಕ ನಾಯಕತ್ವ ಕೌಶಲ್ಯ ವಿಕಸನ ಕುರಿತ ಮೊದಲ ವಿಶೇಷ ತರಬೇತಿ ಕಾರ್ಯಕ್ರಮ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು , ಕಾಬೆಟ್ಟು ಕಾರ್ಕಳ ಇಲ್ಲಿ ಯಶಸ್ವಿಯಾಗಿ ನಡೆಯಿತು.

ತರಬೇತಿಯನ್ನು ಜೆಸಿಐ ಇಂಡಿಯಾ ರಾಷ್ಟ್ರೀಯ ತರಬೇತುದಾರರಾದ ಡಾ.ವಿಜಯ್ ನೆಗಳೂರ್ ನಡೆಸಿಕೊಟ್ಟರು. ತರಬೇತಿಯಲ್ಲಿ 110 ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಆರೋಗ್ಯಕರ ಆಹಾರ ಪದ್ಧತಿ , ಸಕಾರಾತ್ಮಕ ಜೀವನ ಶೈಲಿ , ಶಿಸ್ತಿನ ನಡೆ-ನುಡಿ ಹಾಗೂ ಒಳ್ಳೆಯ ಚಿಂತನೆಗಳ ಮಹತ್ವವನ್ನು ಅನುಭವಾತ್ಮಕ ಚಟುವಟಿಕೆಗಳ ಮೂಲಕ ಕಲಿತುಕೊಂಡರು.

ಈ ಕಾರ್ಯಕ್ರಮದಲ್ಲಿ ಜೆಸಿಐ ಕಾರ್ಕಳ ರೂರಲ್ ಅಧ್ಯಕ್ಷರಾದ ಜೆಸಿ ಅರುಣ್ ಮಾಂಜ , ಕಾಲೇಜು ಪ್ರಾಂಶುಪಾಲರಾದ ಡಾ.ಸುರೇಶ್ ರೈ ಕೆ, Placement cell ಸಂಯೋಜಕರಾದ ಡಾ.ಸುಬ್ರಮಣ್ಯ ಕೆ.ಸಿ , IQAC ಸಂಯೋಜಕರಾದ ವಿನಯ್ ಎಮ್.ಎಸ್, ಜೆಸಿಐ ಕಾರ್ಕಳ ರೂರಲ್ ಪೂರ್ವಧ್ಯಕ್ಷರಾದ ಜೆಸಿ ಮೋಹನ್ ನಕ್ರೆ , ಜೆಸಿ ವೀಣಾ ರಾಜೇಶ್, ಸದಸ್ಯರಾದ ಶ್ವೇತಾ ಅರುಣ್, ಜೆಜೆಸಿ ದಿಯಾ ರಾಜೇಶ್ ಭಂಡಾರಿ, ಜೆಜೆಸಿ ರಕ್ಷಣ್ ಭಾಗವಹಿಸಿದ್ದರು.