
ಜೆ ಸಿ ಐ ಕಾರ್ಕಳ, ರೋಟರಿ ಕ್ಲಬ್ ಕಾರ್ಕಳ ಜಲ್ವಾ-ಇ-ನೂರ್ ಮದ್ರಸ ಪುಲ್ಕೇರಿ ಕಾರ್ಕಳ ಇವರ ಸಹಯೋಗದಲ್ಲಿ ಶ್ರೀ ಸಮದ್ ಖಾನ್ & ಶ್ರೀಮತಿ ಶಗುಪ್ತಾಖಾನ್ ದಂಪತಿಗಳ ಸುಪುತ್ರಿ ಕು.ಅಲ್ಯಾ ಬಾನ್ ಇವರ ಹುಟ್ಟುಹಬ್ಬದ ಪ್ರಯುಕ್ತ ಕಾರ್ಕಳದ ವಿಜೇತ ವಿಶೇಷ ಶಾಲೆಯಲ್ಲಿ ಉಚಿತವಾಗಿ ಕುಡಿಯುವ ನೀರಿನ ಸರಬರಾಜು ಕಾರ್ಯಕ್ರಮದ ಚಾಲನೆ.

ಜೆ ಸಿ.ಐ ಕಾರ್ಕಳ, ರೋಟರಿ ಕ್ಲಬ್ ಕಾರ್ಕಳ ಜಲ್ವಾ-ಇ-ನೂರ್ ಮದ್ರಸ ಪುಲ್ಕೇರಿ, ಕಾರ್ಕಳ ಇವರ ಸಹಯೋಗದಲ್ಲಿ ಶ್ರೀ ಸಮದ್ ಖಾನ್ & ಶ್ರೀಮತಿ ಶಗುಪ್ತಾಖಾನ್ ದಂಪತಿಗಳ ಸುಪುತ್ರಿ ಕು.ಅಲ್ಯಾ ಬಾನ್ ಇವರ ಹುಟ್ಟುಹಬ್ಬದ ಪ್ರಯುಕ್ತ ಕಾರ್ಕಳದ ವಿಜೇತ ವಿಶೇಷ ಶಾಲೆಯಲ್ಲಿ ಉಚಿತವಾಗಿ ಕುಡಿಯುವ ನೀರಿನ ಸರಬರಾಜು ಕಾರ್ಯಕ್ರಮದ ಚಾಲನೆಯನ್ನು ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಪ್ರಸನ್ನ ಕುಮಾರ್ ಇವರು ನೆರವೇರಿಸಿ ದೀಪ ಪ್ರಜ್ವಲಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಜೆಸಿಐ ಕಾರ್ಕಳ ಅಧ್ಯಕ್ಷರಾದ ಜೇಸಿ ಶ್ವೇತಾ ಜೈನ್, ರೋಟರಿ ಕ್ಲಬ್ ಕಾರ್ಕಳ ಅಧ್ಯಕ್ಷರಾದ ರೊಟೇರಿಯನ್ ಇಕ್ಬಾಲ್ ಅಹಮ್ಮದ್, ಶಿವ ಆರ್ಟ್ಸ್ ನ ಮಾಲಕರಾದ ವರದರಾಯ ಪ್ರಭು, ಜಲ್ವಾ-ಇ-ನೂರ್ ಮದ್ರಸ ಪುಲ್ಕೇರಿ, ಕಾರ್ಕಳ ಇದರ ಕಾರ್ಯದರ್ಶಿ ಅಬ್ದುಲ್ಲಾ ಶೇಖ್ ಅದಫ್, ವಿಜೇತ ವಿಶೇಷ ಶಾಲಾ ಸಂಸ್ಥಾಪಕಿ ಡಾ.ಕಾಂತಿ ಹರೀಶ್, ರೋಟರಿ ಕ್ಲಬ್ ಸದಸ್ಯರಾದ ಶ್ರೀ ವಿಘ್ನೇಶ್ & ಸುಶ್ಮಿತಾ ದಂಪತಿಗಳು, ಬಾಲಕೃಷ್ಣ ದೇವಾಡಿಗ, ಸುರೇಶ್ ನಾಯಕ್, ರೋಟರಿ ಕ್ಲಬ್ ಕಾರ್ಯದರ್ಶಿ ಗಣೇಶ್ ಸಾಲ್ಯಾನ್, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಸಂಸ್ಥೆಗೆ ಸಹಕರಿಸಿದ ತಮಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನು ಕರುಣಿಸಲೆಂದು ವಿಜೇತ ಶಾಲಾ ಮಕ್ಕಳ ಪ್ರಾರ್ಥನೆ.