ಜೆಸಿಐ ಹೆಬ್ರಿಯ ಆಶ್ರಯದಲ್ಲಿ ನಡೆದ ಜೇಸಿ ಸಪ್ತಾಹ ಸಪ್ತ ನಕ್ಷತ್ರದ ಸಮಾರೋಪ ಸಮಾರಂಭ

Date:

spot_img

ಹೆಬ್ರಿ : ಜೆಸಿಐ ಹೆಬ್ರಿಯ ಆಶ್ರಯದಲ್ಲಿ ನಡೆದ ಜೇಸಿ ಸಪ್ತಾಹ ಸಪ್ತ ನಕ್ಷತ್ರದ ಸಮಾರೋಪ ಸಮಾರಂಭ ಹೆಬ್ರಿ ಜೇಸಿಐ ಅಧ್ಯಕ್ಷರಾದ ಸೋನಿ ಪಿ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರಗಿತು. ಕಾರ್ಯಕ್ರಮದಲ್ಲಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸಾಧಕಿ, ಹೆಬ್ರಿ ಅಮೃತ ಭಾರತಿ ಕಾಲೇಜಿನ ಹಳೆ ವಿದ್ಯಾರ್ಥಿ ಭರತನಾಟ್ಯ ಕಲಾವಿದೆ ವಿದುಷಿ ದೀಕ್ಷಾ ಇವರನ್ನು ಗೌರವಿಸಲಾಯಿತು ಹಾಗೂ ಹೆಬ್ರಿಯ ಪ್ರಗತಿಪರ ಹೋರಾಟ ಸಮಿತಿ ಅಧ್ಯಕ್ಷ ಕೆರೆಬೆಟ್ಟು ಸಂಜೀವ ಶೆಟ್ಟಿ ಅವರಿಗೆ ಹಿರಿಯ ನಾಗರಿಕ ಪ್ರಶಸ್ತಿ, ಜೇಸಿ ಪೂರ್ವಧ್ಯಕ್ಷ ಪ್ರವೀಣ್ ಶೆಟ್ಟಿ ಅವರಿಗೆ ಕಮಲ ಪತ್ರ ಪ್ರಶಸ್ತಿ, ಯುವ ಉದ್ಯಮಿ ಸತೀಶ್ ಕುಲಾಲ್ ಇವರಿಗೆ ಯುವ ಸಾಧಕ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಪ್ರಶಸ್ತಿ ವಿತರಿಸಿ ಮಾತನಾಡಿದ ಮುಖ್ಯ ಅತಿಥಿಗಳಾದ ಮುನಿಯಾಲು ಉದಯ್ ಶೆಟ್ಟಿ ಅವರು ಜೇಸಿಐರವರು ಮಾಡುವ ಸಾಮಾಜಿಕ ಕೆಲಸ, ಸಾಧಕರನ್ನು ಗೌರವಿಸುವ ಕಾರ್ಯ ಮತ್ತು ವ್ಯಕ್ತಿತ್ವ ವಿಕಸನದ ಕೆಲಸ ಎಲ್ಲರಿಗೂ ಮಾದರಿ , ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಲು ಯುವಕರು ಜೇಸಿ ಸಂಸ್ಥೆಗೆ ಸೇರಿದ ಸಲಹೆ ನೀಡಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಜೇಸಿಐ ವಲಯ 15ರ ಆಡಳಿತ ವಿಭಾಗ ನಿರ್ದೇಶಕ ಅಜಿತ್ ಕುಮಾರ್ ರೈರವರು ಭಾಗವಹಿಸಿದ್ದರು.ವೇದಿಕೆಯಲ್ಲಿ ಎಚ್ ಯೋಗೀಶ್ ಭಟ್, ಜೇಸಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೆ. ಕೃಷ್ಣ ಶೆಟ್ಟಿ, ಸೀನಿಯರ್ ಚೇಂಬರ್ ಅಧ್ಯಕ್ಷ ಸುದೀಪ್ ಭಟ್ ಜೆಸಿರೇಟ್ ಸಂಯೋಜಕಿ ರಂಜಿತ ಆರ್ ಪ್ರಭು ಉಪಸ್ಥಿತರಿದ್ದರು.

ಆದರ್ಶ ಶಿಕ್ಷಕ ಪ್ರಶಸ್ತಿ ವಿಜೇತ ಪೂರ್ವಧ್ಯಕ್ಷ ಮಂಜುನಾಥ್ ಕುಲಾಲ್ ರವರನ್ನು ಗೌರವಿಸಲಾಯಿತು.ಜೇಸಿ ಸಪ್ತಾಹದ ಅಂಗವಾಗಿ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಪೂರ್ವಧ್ಯಕ್ಷ ಪ್ರಸಾದ್ ಶೆಟ್ಟಿ, ಜೇಸಿ ರೇಟ್ ಪೂರ್ವಧ್ಯಕ್ಷೆ ಗೀತಾ ಮಂಜುನಾಥ್ ಸನ್ಮಾನಿತರನ್ನು ಪರಿಚಯಿಸಿದರು. ಪೂರ್ವಧ್ಯಕ್ಷ ನಿತೀಶ್ ಎಸ್ ಪಿ ಬಹುಮಾನ ವಿಜೇತರ ವಿವರವನ್ನು ವಾಚಿಸಿದರು . ಜೇಸಿ ಚಾರಿಟೇಬಲ್ ಟ್ರಸ್ಟ್ ನ ದತ್ತಿ ಪುರಸ್ಕಾರವನ್ನು ಮತ್ತು ಪೂರ್ವಧ್ಯಕ್ಷ ಜೆ ಸಿ ನಾಗರಾಜ ಶೆಟ್ಟಿ ಎಸ್ ಆರ್ ಸಹಾಯಧನವನ್ನು ಎರಡು ಅನಾರೋಗ್ಯ ಪೀಡಿತ ಫಲಾನುಭವಿಗಳಿಗೆ ವಿತರಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಸೋನಿ ಪಿ ಶೆಟ್ಟಿ ಸಹಕರಿಸಿದ ಎಲ್ಲಾ ಪೂರ್ವಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ದಾನಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿ ಮಾತನಾಡಿದರು. ಕಾರ್ಯದರ್ಶಿ ಉದಯ್ ಸೇರಿಗಾರ್ ಧನ್ಯವಾದ ನೀಡಿದರು. ನಂತರ ಕಲಾಚಿಗರು ತಂಡ ಹಳ್ಳಾಡಿ ಇವರಿಂದ ಕುಂದಗನ್ನಡ ಹೆಂಗ್ಸ್ರ್ ಪಂಚೈತಿ ಕಾರ್ಯಕ್ರಮ ನೆರವೇರಿತು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಬಿಸಿಸಿಐ ಹೊಸ ನಿಯಮ: ನೋಬಾಲ್ ಎಸೆದರೆ ಬೌಲರ್ ಪಂದ್ಯದಿಂದ ಅಮಾನತು

2026-27ರ ದೇಶಿ ಕ್ರಿಕೆಟ್ ಋತುವಿಗೆ ಬಿಸಿಸಿಐ ಹೊಸ ನಿಯಮ ತಂದಿದೆ. ನಿಯಮ ಉಲ್ಲಂಘಿಸುವ ಬೌಲರ್‌ಗಳಿಗೆ ಕಠಿಣ ಶಿಕ್ಷೆ ಖಚಿತ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬಿಸಿಸಿಐ ಹೊಸ ನಿಯಮ: ನೋಬಾಲ್ ಎಸೆದರೆ ಬೌಲರ್ ಪಂದ್ಯದಿಂದ ಅಮಾನತು

2026-27ರ ದೇಶಿ ಕ್ರಿಕೆಟ್ ಋತುವಿಗೆ ಬಿಸಿಸಿಐ ಹೊಸ ನಿಯಮ ತಂದಿದೆ. ನಿಯಮ ಉಲ್ಲಂಘಿಸುವ ಬೌಲರ್‌ಗಳಿಗೆ ಕಠಿಣ ಶಿಕ್ಷೆ ಖಚಿತ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಅಮೆರಿಕ-ಇರಾನ್ ಯುದ್ಧ: ಪಾಕಿಸ್ತಾನದಿಂದ ಶಾಂತಿ ಯತ್ನ

ಅಮೆರಿಕ ಮತ್ತು ಇರಾನ್ ನಡುವೆ ಯುದ್ಧ 10ನೇ ದಿನಕ್ಕೆ ಕಾಲಿಟ್ಟಿದ್ದು, ಶಾಂತಿ ಒಪ್ಪಂದಕ್ಕೆ ಪಾಕಿಸ್ತಾನದ ಮೂಲಕ ಪ್ರಯತ್ನ ಸಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ತೈಲ ಬೆಲೆ ಭಾರಿ ಏರಿಕೆ: ಇರಾನ್ ಅಮೆರಿಕ ಸಂಘರ್ಷದ ಪ್ರಭಾವ

ಮಧ್ಯಪ್ರಾಚ್ಯ ಯುದ್ಧದಿಂದಾಗಿ ಕಚ್ಚಾ ತೈಲ ದರದಲ್ಲಿ ಭಾರಿ ಏರಿಕೆ ಕಂಡಿದೆ. ಭಾರತಕ್ಕೆ ಇಂಧನ ಬಿಕ್ಕಟ್ಟಿನ ಭೀತಿ ಎದುರಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.