
ಜಾರ್ಖಂಡ್ ಮತ್ತು ಉತ್ತರ ಪ್ರದೇಶ ಎಸ್‌ಟಿಎಫ್ ಜಂಟಿ ಕಾರ್ಯಾಚರಣೆಯಲ್ಲಿ ಶಾರ್ಪ್‌ಶೂಟರ್ ಅನುಜ್ ಕನೌಜಿಯಾ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದಾನೆ. ಶನಿವಾರ (ಮಾ.29) ನಡೆದ ಈ ಕಾರ್ಯಾಚರಣೆಯಲ್ಲಿ ಡಿವೈಎಸ್‌ಪಿ ಡಿಕೆ ಶಾಹಿ ಗಾಯಗೊಂಡಿದ್ದಾರೆ.
ಅನುಜ್ ಕಳೆದ ಐದು ವರ್ಷಗಳಿಂದ ತಲೆಮರೆಸಿಕೊಂಡು ಓಡಾಟದಲ್ಲಿದ್ದ ಕ್ರಿಮಿನಲ್. ಕೊಲೆ, ಸುಲಿಗೆ, ಭೂ ಕಬಳಿಕೆ, ಶಸ್ತ್ರಾಸ್ತ್ರ ಕಳ್ಳಸಾಗಾಣಿಕೆ ಸೇರಿದಂತೆ 23 ಕೇಸ್‌ಗಳಲ್ಲಿ ಅಪರಾಧಿ. ಆತನ ಬಗ್ಗೆ ಮಾಹಿತಿ ನೀಡಿದವರಿಗೆ 2.5 ಲಕ್ಷ ರೂ ಬಹುಮಾನ ಘೋಷಿಸಲಾಗಿತ್ತು.
ಎನ್‌ಕೌಂಟರ್ ಬಳಿಕ ಎರಡು ಪಿಸ್ತೂಲ್, ಕಾರ್ಟಿಜಸ್, ಮೊಬೈಲ್ ಪೋನ್ ವಶಕ್ಕೆ ತೆಗೆದುಕೊಳ್ಳಲಾಗಿದೆ. ಮೊಬೈಲ್‌ನಿಂದ ಆತನ ಕ್ರಿಮಿನಲ್ ನೆಟ್‌ವರ್ಕ್ ಕುರಿತು ತನಿಖೆ ಮುಂದುವರಿಯುತ್ತಿದೆ.