MTR ಫುಡ್ಸ್ ಸ್ವಾಧೀನಕ್ಕೆ ITC ತಯಾರಿ

Date:

spot_img

ಬೆಂಗಳೂರು: ಪ್ರಸಿದ್ಧ MTR ಫುಡ್ಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಈಸ್ಟರ್ನ್ ಕಾಂಡಿಮೆಂಟ್ಸ್ ಕಂಪನಿಗಳನ್ನು ಖರೀದಿಸಲು ಐಟಿಸಿ (ITC) ಮುಂದಾಗಿದ್ದು, ನಾರ್ವೆ ಮೂಲದ ಓರ್ಕ್ಲಾ ಎಎಸ್ಎ (Orkla ASA) ಜೊತೆ ಮಾತುಕತೆ ಅಂತಿಮ ಹಂತ ತಲುಪಿದೆ.

ಸುಮಾರು 1.4 ಬಿಲಿಯನ್ ಯುಎಸ್ ಡಾಲರ್ (₹12,163 ಕೋಟಿ) ಮೌಲ್ಯದ ಈ ಡೀಲ್‌ ಮೂಲಕ ಐಟಿಸಿ ದಕ್ಷಿಣದ ಮಾರುಕಟ್ಟೆಯಲ್ಲಿ ತನ್ನ ಪ್ರಭಾವ ಹೆಚ್ಚಿಸಲು ಉದ್ದೇಶಿಸಿದೆ. MTR ಫುಡ್ಸ್ 1950ರಲ್ಲಿ ಬೆಂಗಳೂರಿನ ಮೈಯಾ ಕುಟುಂಬ ಆರಂಭಿಸಿದ ಕಂಪನಿ ಆಗಿದ್ದು, ಪ್ರಸ್ತುತ ಜಾಗತಿಕ ಮಾರುಕಟ್ಟೆಯಲ್ಲಿಯೂ ತನ್ನ ಛಾಪು ಮೂಡಿಸಿದೆ.

ಓರ್ಕ್ಲಾ 2007ರಲ್ಲಿ MTR, 2020ರಲ್ಲಿ ಈಸ್ಟರ್ನ್ ಅನ್ನು ಖರೀದಿಸಿದ್ದು, ಇದೀಗ ಉತ್ತಮ ಮೌಲ್ಯಮಾಪನ ದೊರಕಿದರೆ ಖಾಸಗಿ ಒಪ್ಪಂದದ ಮೂಲಕ ಪಾಲು ಮಾರಾಟ ಮಾಡಲು ಸಜ್ಜಾಗಿದೆ. ಇಲ್ಲವಾದರೆ IPO ಆಯ್ಕೆಯನ್ನು ಪರಿಗಣಿಸಬಹುದು.

ಇತ್ತೀಚೆಗೆ FMCG ಬ್ರ್ಯಾಂಡ್ ಪ್ರಸುಮಾ ಸ್ವಾಧೀನ ಪಡೆದಿರುವ ITC, MTR ಮತ್ತು ಈಸ್ಟರ್ನ್ ಅನ್ನು ಪಡೆದುಕೊಂಡರೆ ಮಸಾಲೆ ಹಾಗೂ ತಕ್ಷಣದ ಆಹಾರ ವಿಭಾಗದಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಲಿದೆ. FY24ರಲ್ಲಿ ಓರ್ಕ್ಲಾ ಇಂಡಿಯಾ ₹2,400 ಕೋಟಿ ಆದಾಯ ಗಳಿಸಿದ್ದು, ಇದರಲ್ಲಿ 80% MTR ಹಾಗೂ ಈಸ್ಟರ್ನ್ ಬ್ರ್ಯಾಂಡ್‌ನಿಂದ ಬಂದಿದೆ.

ಈ ಡೀಲ್ ಕುರಿತು ಐಟಿಸಿ ಅಧ್ಯಕ್ಷ ಸಂಜೀವ್ ಪುರಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ಓರ್ಕ್ಲಾ ಕೂಡ ವದಂತಿಗಳನ್ನು ಖಂಡಿಸಿದೆ. ಒಪ್ಪಂದ ಅಂತಿಮಗೊಂಡರೆ, MTR ಮತ್ತು ಈಸ್ಟರ್ನ್ ಹೊಸ ಮಾಲೀಕನಾಗಿ ಐಟಿಸಿ ಪರಿಣಮಿಸಲಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ವಿಳಂಬ: ಹೈಕಮಾಂಡ್ ನಿರ್ಧಾರ ಶೀಘ್ರ

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಮತ್ತೆ ವಿಳಂಬಗೊಂಡಿದೆ. ಹೈಕಮಾಂಡ್ ಅನುಮೋದನೆಗಾಗಿ ನಾಯಕರು ಕಾಯುತ್ತಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಇಂಡಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ; ಡೆತ್‌ನೋಟ್ ಪತ್ತೆ

ಇಂಡಿಯ ಡಾ. ಬಿ.ಆರ್. ಅಂಬೇಡ್ಕರ್ ವಸತಿ ನಿಲಯದಲ್ಲಿ 16 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್‌ನೋಟ್ ಪತ್ತೆಯಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಐಐಟಿ ರೂರ್ಕಿಯಲ್ಲಿ ರಾಜಕೀಯ ಪೋಸ್ಟ್‌ಗೆ ನಿಷೇಧ: ಜಾಲತಾಣದಲ್ಲಿ ಆಕ್ರೋಶ

ಐಐಟಿ ರೂರ್ಕಿ ತನ್ನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ರಾಜಕೀಯ ಪೋಸ್ಟ್ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮಂಜೊಟ್ಟಿಯಲ್ಲಿ ಜುಲೈ 26 ರಂದು ‘ಕೆಸರ್ಡ್ ಒಂಜಿ ದಿನ’ ಕ್ರೀಡಾಕೂಟ!

ಬೊಮ್ಮಾರಬೆಟ್ಟು ಗ್ರಾಮಸ್ಥರಿಗಾಗಿ ಹಿರಿಯಡ್ಕ ಮಂಜೊಟ್ಟಿಯಲ್ಲಿ 'ಕೆಸರ್ಡ್ ಒಂಜಿ ದಿನ' ಗ್ರಾಮೀಣ ಕ್ರೀಡಾಕೂಟ ಆಯೋಜನೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ