
ಆಂಧ್ರಪ್ರದೇಶದ ಶ್ರೀಹರಿಕೋಟಾ ಮತ್ತು ತಮಿಳುನಾಡಿನ ಕುಲಶೇಖರ್‌ಪಟ್ಟಿಣಂನಲ್ಲಿ ಈ ಎರಡು ಹೊಸ ಉಡಾವಣಾ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ. ಇವು ಭವಿಷ್ಯದ ಮಹತ್ವದ ಬಾಹ್ಯಾಕಾಶ ಯೋಜನೆಗಳಿಗೆ ಸಹಾಯ ಮಾಡುವ ನಿರೀಕ್ಷೆಯಲ್ಲಿವೆ.
ಈ ಸಂದರ್ಭ ಚಂದ್ರಯಾನ-4 ಬಗ್ಗೆ ಮಾಹಿತಿಯನ್ನು ಹಂಚಿಕೊಂಡ ಅವರು, ಈ ಮಿಷನ್ 9200 ಕೆ.ಜಿ ತೂಕ ಹೊಂದಿದ್ದು, ಚಂದ್ರನ ಮೇಲ್ಮೈಯಿಂದ ಸ್ಯಾಂಪಲ್ ಸಂಗ್ರಹಿಸಿ ಅಧ್ಯಯನ ನಡೆಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ಜಿ-20 ಉಪಗ್ರಹ & ಮಹಿಳಾ ವಿಜ್ಞಾನಿಗಳಿಗೆ ಆದ್ಯತೆ
ಹವಾಮಾನ ಅಧ್ಯಯನಕ್ಕಾಗಿ ಜಿ-20 ಉಪಗ್ರಹವನ್ನು ವಿನ್ಯಾಸಗೊಳಿಸುತ್ತಿರುವ ಇಸ್ರೋ, ಅದರ ಪೇಲೋಡ್‌ನ ಶೇ.40 ಭಾಗವನ್ನು ಭಾರತದಲ್ಲಿ ಅಭಿವೃದ್ಧಿಪಡಿಸಿದೆ. ಇಸ್ರೋ ಈಗಾಗಲೇ ಭಾರತೀಯ ನಿರ್ಮಿತ ರಾಕೆಟ್‌ಗಳ ಮೂಲಕ 34 ದೇಶಗಳ 433 ಉಪಗ್ರಹಗಳನ್ನು ಉಡಾವಣೆ ಮಾಡಿರುವ ಸಾಧನೆಯನ್ನೂ ಉಲ್ಲೇಖಿಸಲಾಗಿದೆ.
ಮಹಿಳಾ ವಿಜ್ಞಾನಿಗಳಿಗೆ ಹೆಚ್ಚಿನ ಅವಕಾಶ ಒದಗಿಸಲು ಇಸ್ರೋ ಬದ್ಧವಾಗಿದೆ ಎಂದು ನಾರಾಯಣನ್ ತಿಳಿಸಿದ್ದಾರೆ. ಚಂದ್ರಯಾನ ಮತ್ತು ಮಾರ್ಸ್ ಆರ್ಬಿಟರ್ ಮಿಷನ್‌ನಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ.