ಗಾಜಾದಲ್ಲಿ ಪಾಕ್ ಸೇನೆಗೆ ನೋ ಎಂಟ್ರಿ: ಡೊನಾಲ್ಡ್ ಟ್ರಂಪ್ ಯೋಜನೆಗೆ ಇಸ್ರೇಲ್ ಅಡ್ಡಗಾಲು!

Date:

spot_img

ಗಾಜಾಪಟ್ಟಿಯಲ್ಲಿ ಶಾಂತಿ ಸ್ಥಾಪನೆಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೂಪಿಸಿರುವ ಮಹತ್ವಾಕಾಂಕ್ಷೆಯ ‘ಅಂತಾರಾಷ್ಟ್ರೀಯ ಸ್ಥಿರೀಕರಣ ಪಡೆ’ (ISF) ಯೋಜನೆಗೆ ಈಗ ಹೊಸ ವಿಘ್ನ ಎದುರಾಗಿದೆ. ಈ ಪಡೆಯಲ್ಲಿ ಪಾಕಿಸ್ತಾನದ ಸೇನೆಯನ್ನು ಸೇರಿಸಿಕೊಳ್ಳುವ ಪ್ರಸ್ತಾವನೆಗೆ ಇಸ್ರೇಲ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇಸ್ಲಾಮಾಬಾದ್‌ಗೆ ನೇರ ಎಚ್ಚರಿಕೆ ನೀಡಿದೆ.

ಗಾಜಾದ ಪುನರ್ನಿರ್ಮಾಣ ಮತ್ತು ಭದ್ರತೆಯ ಉಸ್ತುವಾರಿ ವಹಿಸಲಿರುವ ಈ ಅಂತಾರಾಷ್ಟ್ರೀಯ ಪಡೆಯಲ್ಲಿ ಪಾಕ್ ಸೈನಿಕರ ಉಪಸ್ಥಿತಿಯನ್ನು ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಭಾರತದಲ್ಲಿನ ಇಸ್ರೇಲ್ ರಾಯಭಾರಿ ರೀವನ್ ಅಜರ್ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಭಯೋತ್ಪಾದನೆಯನ್ನು ಪೋಷಿಸುವ ದೇಶಗಳೊಂದಿಗೆ ಇಸ್ರೇಲ್ ಎಂದಿಗೂ ಕೈಜೋಡಿಸುವುದಿಲ್ಲ ಎಂಬ ಖಡಕ್ ಸಂದೇಶ ರವಾನಿಸಿದ್ದಾರೆ.

ಭಯೋತ್ಪಾದನಾ ನಂಟಿನ ಆತಂಕ: ಹಮಾಸ್ ಉಗ್ರಗಾಮಿ ಸಂಘಟನೆ ಮತ್ತು ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (LeT) ನಡುವಿನ ಸಂಬಂಧಗಳು ದಿನೇ ದಿನೇ ವೃದ್ಧಿಸುತ್ತಿರುವುದು ಇಸ್ರೇಲ್‌ನ ಆತಂಕಕ್ಕೆ ಕಾರಣವಾಗಿದೆ. ಪಾಕಿಸ್ತಾನವು ಹಮಾಸ್ ಉಗ್ರರಿಗೆ ಆಶ್ರಯ ಮತ್ತು ಬೆಂಬಲ ನೀಡುತ್ತಿರುವ ಹಿನ್ನೆಲೆಯಲ್ಲಿ, ಅಂತಹ ದೇಶದ ಸೇನೆಯು ಗಾಜಾದಲ್ಲಿ ನೆಲೆ ನಿಲ್ಲುವುದು ಭದ್ರತೆಗೆ ದೊಡ್ಡ ಅಪಾಯ ಎಂದು ಅಜರ್ ವಿಶ್ಲೇಷಿಸಿದ್ದಾರೆ.

“ನಾವು ಕೇವಲ ನಂಬಿಕಸ್ಥ ಮತ್ತು ಉತ್ತಮ ರಾಜತಾಂತ್ರಿಕ ಬಾಂಧವ್ಯ ಹೊಂದಿರುವ ರಾಷ್ಟ್ರಗಳೊಂದಿಗೆ ಮಾತ್ರ ಭದ್ರತಾ ವಿಚಾರಗಳಲ್ಲಿ ಸಹಕರಿಸುತ್ತೇವೆ. ಪಾಕಿಸ್ತಾನದ ವಿಷಯದಲ್ಲಿ ಅಂತಹ ನಂಬಿಕೆ ನಮಗಿಲ್ಲ,” ಎಂದು ಹೇಳುವ ಮೂಲಕ ಪಾಕ್ ಆಡಳಿತಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಇಸ್ರೇಲ್ ಮುಖಭಂಗ ಮಾಡಿದೆ. ಟ್ರಂಪ್ ಅವರ 20 ಅಂಶಗಳ ಯೋಜನೆಯಡಿ ಗಾಜಾವನ್ನು ಉಗ್ರಮುಕ್ತಗೊಳಿಸುವ ಗುರಿಯಿದ್ದು, ಅಲ್ಲಿ ಪಾಕ್ ಸೇನೆಯ ಪ್ರವೇಶವು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಬಹುದು ಎಂಬುದು ಇಸ್ರೇಲ್‌ನ ವಾದವಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಜಯರಾಮ ಬನಾನ ಸಾಧನೆಗೆ ಕೋಟ ಪೂಜಾರಿ ಮೆಚ್ಚುಗೆ

ಉದ್ಯಮಿ ಜಯರಾಮ ಬನಾನ ಸಾಧನೆಯನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೊಂಡಾಡಿದ್ದು, ಮೋದಿ ಸರ್ಕಾರದ ಸಾಧನಾ ಪುಸ್ತಕ ನೀಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಾರ್ಕಳ ಎಸ್.ವಿ.ಟಿ. ಕಾಲೇಜಿನಲ್ಲಿ ಇಂಟರ್ಯಾಕ್ಟ್ ಕ್ಲಬ್ ಪದಗ್ರಹಣ

ಕಾರ್ಕಳ ಎಸ್.ವಿ.ಟಿ. ಕಾಲೇಜಿನಲ್ಲಿ ರೋಟರಿ ಪ್ರಾಯೋಜಿತ ಇಂಟರ್ಯಾಕ್ಟ್ ಕ್ಲಬ್ ಪದಗ್ರಹಣ ನೆರವೇರಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಉಡುಪಿ: ಧರ್ಮಸ್ಥಳ ಯೋಜನೆಯಿಂದ ಉಚಿತ ಹೊಲಿಗೆ ತರಬೇತಿ ಚಾಲನೆ

ಉಡುಪಿಯ ಬೊಮ್ಮರಬೆಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 3 ತಿಂಗಳ ಉಚಿತ ಹೊಲಿಗೆ ತರಬೇತಿಗೆ ಚಾಲನೆ ಸಿಕ್ಕಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಉಡುಪಿ: ಮಹಿಳೆಯರಿಗೆ ಸರ್ಕಾರಿ ಇಲಾಖೆಗಳ ಅಧ್ಯಯನ ಪ್ರವಾಸ

ಉಡುಪಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರಿಗೆ ಶೈಕ್ಷಣಿಕ ಹಾಗೂ ಜಾಗೃತಿ ಅಧ್ಯಯನ ಪ್ರವಾಸ ಆಯೋಜನೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ