
ಟೆಲ್ ಅವೀವ್/ಟೆಹ್ರಾನ್ : ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ ಸಂಘರ್ಷ 11ನೇ ದಿನಕ್ಕೆ ಕಾಲಿಟ್ಟಿರುವ ನಡುವೆ, ಇಸ್ರೇಲ್ ಸೇನೆ ಇಂದು ನಡೆಸಿದ ಭಾರೀ ವೈಮಾನಿಕ ದಾಳಿಯಲ್ಲಿ ಇರಾನ್‌ನ ಹಲವಾರು ಯುದ್ಧ ತಾಣಗಳು ನಾಶವಾಗಿವೆ ಎಂದು ಇಸ್ರೇಲ್ ಸೇನೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಇಸ್ರೇಲ್ ಸೇನೆ ಸೋಮವಾರ ನಡೆಸಿದ ದಾಳಿಯಲ್ಲಿ ಸೆಂಟ್ರಲ್ ಇರಾನ್‌ನ ಮಿಸೈಲ್ ಸ್ಟೋರೇಜ್ ಗುರಿಯಾಗಿದ್ದು, ಪಶ್ಚಿಮ ಇರಾನ್‌ನ ಕೆರ್ಮನ್ ಶಾ ಪ್ರದೇಶದ ವಿಮಾನ ನಿಲ್ದಾಣ ಹಾಗೂ ಭೂಗತ ಬಂಕರ್‌ಗಳ ಮೇಲೂ ದಾಳಿ ನಡೆದಿದೆ.
ಈ ದಾಳಿಗಳಲ್ಲಿ ಕನಿಷ್ಠ ಆರು ವಿಮಾನ ನಿಲ್ದಾಣಗಳು, ಎಫ್-14 ಜೆಟ್, ಎಫ್-5 ಯುದ್ಧವಿಮಾನಗಳು, ಎಎಚ್-1 ಹೆಲಿಕಾಪ್ಟರ್‌ಗಳು ಸೇರಿದಂತೆ 15ಕ್ಕೂ ಹೆಚ್ಚು ಯುದ್ಧ ವಿಮಾನಗಳು ನಾಶಗೊಂಡಿವೆ ಎಂದು ವರದಿಯಾಗಿದೆ.
ಇರಾನ್ ವಿರುದ್ಧ ನಡೆಯುತ್ತಿರುವ ಈ ದಾಳಿಗಳನ್ನು ಅಮೆರಿಕದ ಸಹಕಾರದೊಂದಿಗೆ ಇಸ್ರೇಲ್ ಮುಂದುವರಿಸಿದ್ದು, “ಇರಾನ್‌ನ ಸರ್ವಾಧಿಕಾರಿ ಆಡಳಿತವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ನಮ್ಮ ತೀರ್ಮಾನ ಖಡಕ್” ಎಂದು ಇಸ್ರೇಲ್ ಸೇನೆ ಸ್ಪಷ್ಟಪಡಿಸಿದೆ.
ಇಡೀ ಭದ್ರತಾ ತಂತ್ರಜ್ಞಾನದ ಸಿದ್ಧತೆಗಳೊಂದಿಗೆ ನಡೆಸಿದ ಈ ದಾಳಿಯಲ್ಲಿ ಇರಾನ್‌ನ ಪ್ರಮುಖ ರನ್‌ವೇಗಳು, ಭೂಗತ ಶೆಡ್ಗಳು, ಮಿಸೈಲ್ ಸಾಗಣೆ ಕೇಂದ್ರಗಳು ಸಂಪೂರ್ಣ ನಾಶಗೊಂಡಿವೆ ಎಂದು ಸೇನೆ ತಿಳಿಸಿದೆ.