
ಖಾನ್ ಯೂನಿಸ್ : ದಕ್ಷಿಣ ಗಾಜಾದ ಮುಖ್ಯ ಆಸ್ಪತ್ರೆಯಾದ ನಾಸರ್ ಆಸ್ಪತ್ರೆಯ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ.
ಸಚಿವಾಲಯದ ಹೇಳಿಕೆಯ ಪ್ರಕಾರ, ನಾಸರ್ ಆಸ್ಪತ್ರೆಯ ನಾಲ್ಕನೇ ಮಹಡಿಯ ಮೇಲೆ ‘ಡಬಲ್-ಟ್ಯಾಪ್’ ದಾಳಿ ನಡೆಸಲಾಗಿದೆ. ಮೊದಲು ಒಂದು ಕ್ಷಿಪಣಿ ಆಸ್ಪತ್ರೆಗೆ ಅಪ್ಪಳಿಸಿದ್ದು, ನಂತರ ರಕ್ಷಣಾ ಸಿಬ್ಬಂದಿ ಬರುತ್ತಿದ್ದಂತೆಯೇ ಮತ್ತೊಂದು ಕ್ಷಿಪಣಿ ಅಪ್ಪಳಿಸಿದೆ.
ದಕ್ಷಿಣ ಗಾಜಾದ ಅತಿ ದೊಡ್ಡ ಆಸ್ಪತ್ರೆಯಾಗಿರುವ ನಾಸರ್, ಕಳೆದ 22 ತಿಂಗಳಲ್ಲಿ ಹಲವು ಬಾರಿ ದಾಳಿಗಳಿಗೆ ಗುರಿಯಾಗಿದೆ. ಈ ಹಿಂದಿನ ದಾಳಿಯೊಂದರಲ್ಲಿ, ಆಸ್ಪತ್ರೆಯ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ಗಳ ಒಳಗೆ ಹಮಾಸ್ ಉಗ್ರಗಾಮಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿ ಇಸ್ರೇಲ್ ಸೇನೆಯು ದಾಳಿ ನಡೆಸಿರುವುದಾಗಿ ಹೇಳಿಕೊಂಡಿತ್ತು. ಇತ್ತೀಚಿನ ಈ ದಾಳಿಯ ಬಗ್ಗೆ ಇಸ್ರೇಲ್ ಸೇನೆಯು ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.