
ಬೆಂಗಳೂರು : ಐದು ವರ್ಷಗಳ ಹಿಂದೆ ಭಾರತದಲ್ಲಿ ನಿಷೇಧಗೊಂಡಿದ್ದ ಜನಪ್ರಿಯ ಸೋಶಿಯಲ್ ಮೀಡಿಯಾ ಅಪ್ಲಿಕೇಶನ್ ಟಿಕ್‌ಟಾಕ್ (TikTok) ಮತ್ತೆ ದೇಶಕ್ಕೆ ಮರಳಲಿದೆಯೇ ಎಂಬ ಪ್ರಶ್ನೆ ಈಗ ಇಂಟರ್‌ನೆಟ್ ಲೋಕದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕೆಲವು ಬಳಕೆದಾರರಿಗೆ ಈ ಅಪ್ಲಿಕೇಶನ್‌ನ ವೆಬ್‌ಸೈಟ್ ಈಗ ತೆರೆದುಕೊಳ್ಳುತ್ತಿರುವುದು ಈ ವದಂತಿಗೆ ಮುಖ್ಯ ಕಾರಣವಾಗಿದೆ.
ಇದು ಅಧಿಕೃತ ರೀ-ಎಂಟ್ರಿಯಲ್ಲ!
2020ರ ಜೂನ್ 29ರಂದು ರಾಷ್ಟ್ರೀಯ ಭದ್ರತೆ ಮತ್ತು ಡೇಟಾ ಗೌಪ್ಯತೆಯ ಕಳವಳಗಳ ಕಾರಣದಿಂದಾಗಿ (ಮಾಹಿತಿ ತಂತ್ರಜ್ಞಾನ ಕಾಯ್ದೆ 2000, ಸೆಕ್ಷನ್ 69ಎ ಅಡಿಯಲ್ಲಿ) ಟಿಕ್‌ಟಾಕ್ ಅನ್ನು ಬ್ಯಾನ್ ಮಾಡಲಾಗಿತ್ತು. ಪ್ರಸ್ತುತ, ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ಗಳಲ್ಲಿ ಲಭ್ಯವಿಲ್ಲ. ಕೇವಲ ವೆಬ್‌ಸೈಟ್ ಮಾತ್ರ ಕೆಲವು ಬಳಕೆದಾರರಿಗೆ ಪ್ರವೇಶ ನೀಡುತ್ತಿರುವುದರಿಂದ ಈ ಕುತೂಹಲ ಹುಟ್ಟಿಕೊಂಡಿದೆ. ಆದರೆ, ಈ ಬಗ್ಗೆ ಚೀನಾದ ಬೈಟ್‌ಡ್ಯಾನ್ಸ್ ಕಂಪನಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಹಾಗಾಗಿ, ಸದ್ಯಕ್ಕೆ ಈ ಅಪ್ಲಿಕೇಶನ್ ಭಾರತಕ್ಕೆ ಹಿಂತಿರುಗುವ ಸಾಧ್ಯತೆಗಳು ಕಡಿಮೆ ಎಂದು ಹೇಳಬಹುದು.