
ರೀಲ್ಸ್ ಹುಚ್ಚಿಗೆ ಮಿತಿ ಇಲ್ಲ ಎಂಬಂತೆ, ಯುವತಿಯೊಬ್ಬಳು ಸ್ಮಶಾನದಲ್ಲಿ ಉರಿಯುತ್ತಿರುವ ಚಿತೆಯ ಮುಂದೆ ನಗುತ್ತಾ ಫೋಸ್ ಕೊಟ್ಟು ವಿಡಿಯೋ ಮಾಡಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ವಿಡಿಯೋದ ವಿವರ ಮತ್ತು ಆಕ್ರೋಶ
ಸೀರೆಯುಟ್ಟು ಸ್ಮಶಾನಕ್ಕೆ ಬಂದ ಯುವತಿಯು, ಹಿನ್ನಲೆಯಲ್ಲಿ ಉರಿಯುತ್ತಿರುವ ಚಿತೆಯ ಮುಂದೆ ಕ್ಯಾಮರಾಕ್ಕೆ ಪೋಸ್ ನೀಡಿದ್ದಾಳೆ. ರೀಲ್ಸ್ ಮಾಡುವ ಈ ಹುಚ್ಚುತನವು ಮೌನ ಮತ್ತು ಗೌರವದಿಂದ ಇರಬೇಕಾದ ದುಃಖದ ಸಂದರ್ಭದ ಘನತೆಗೆ ಧಕ್ಕೆ ತಂದಿದೆ ಎಂದು ನೆಟ್ಟಿಗರು ಟೀಕಿಸಿದ್ದಾರೆ. ಇದು ನಿಜವಾದ ವಿಡಿಯೋ ಅಥವಾ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಎಡಿಟ್ ಮಾಡಲಾಗಿದೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.
ಆದರೆ ಈ ವಿಡಿಯೋವನ್ನು ‘Shoneekapoor’ ಎಂಬ X ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಇದುವರೆಗೆ ಸಾವಿರಾರು ವೀಕ್ಷಣೆಗಳನ್ನು ಕಂಡಿದೆ. ವಿಡಿಯೋಗೆ ಆಕ್ರೋಶಭರಿತ ಕಾಮೆಂಟ್‌ಗಳು ಮತ್ತು ಟೀಕೆಗಳು ವ್ಯಕ್ತವಾಗಿವೆ. ಈ ಘಟನೆ ಎಲ್ಲಿ ನಡೆದಿರುವುದು ಎಂಬುದರ ಕುರಿತು ಯಾವುದೇ ಅಧಿಕೃತ ಮಾಹಿತಿ ಇಲ್ಲ.