ಇರಾನ್ ಶರಣಾಗುವುದು ಸಾಧ್ಯವೇ ಇಲ್ಲ! ಟ್ರಂಪ್ ಎಚ್ಚರಿಕೆಗೆ ಖಮೇನಿಯಿಂದ ತಿರುಗೇಟು : ಇಸ್ರೇಲ್ ಮೇಲೆ ಫತಾಹ್-1 ಕ್ಷಿಪಣಿಯಿಂದ ತೀಕ್ಷ್ಣ ದಾಳಿ

Date:

spot_img

ಟೆಹ್ರಾನ್/ವಾಷಿಂಗ್ಟನ್ : ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ಅಲೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಈ ಸಂಘರ್ಷಕ್ಕೆ ಈಗ ಅಮೆರಿಕದ ನೇರ ಎಚ್ಚರಿಕೆಗೂ ಇರಾನ್ ತೀವ್ರ ಪ್ರತಿಕ್ರಿಯೆ ನೀಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ “ಇರಾನ್ ಶರಣಾಗಬೇಕು” ಎಂಬ ಹೇಳಿಕೆಗೆ ಪ್ರತಿಸ್ಪಂದಿಸಿದ ಇರಾನ್‌ನ ಉನ್ನತ ನಾಯಕ ಆಯತೊಲ್ಲಾ ಅಲಿ ಖಮೇನಿ, “ಇರಾನ್ ಶರಣಾಗುವ ರಾಷ್ಟ್ರವಲ್ಲ. ಒಂದು ವೇಳೆ ಅಮೆರಿಕ ಮಧ್ಯಪ್ರವೇಶ ಮಾಡಿದರೆ ಮುಂದೆಂದೂ ಸರಿಪಡಿಸಲಾಗದ ಮಟ್ಟದ ಹಾನಿಯನ್ನು ಎದುರಿಸಬೇಕಾಗುತ್ತದೆ ” ಎಂದು ಹೇಳಿದ್ದಾರೆ.

ಇದರ ಬೆನ್ನಲ್ಲೇ , ಇರಾನ್ ಇಸ್ರೇಲ್ ಮೇಲಿನ ದಾಳಿಯ ಹಿನ್ನಲೆಯಲ್ಲಿ ತನ್ನ ಶಕ್ತಿಶಾಲಿ ಫತಾಹ್-1 ಹೈಪರ್‌ಸಾನಿಕ್ ಕ್ಷಿಪಣಿಯನ್ನು ಉಡಾಯಿಸಿದ್ದು, ಈ ಕ್ಷಿಪಣಿ ಇಸ್ರೇಲ್‌ನ ಐರನ್ ಡೋಮ್‌ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಭೇದಿಸಿದೆ. ಕ್ಷಿಪಣಿ ಟೆಲ್ ಅವಿವ್ ಸಮೀಪ ಬಿದ್ದು ಸ್ಫೋಟಗೊಂಡಿದ್ದು, ಇಸ್ರೇಲ್ ಮಾಧ್ಯಮಗಳು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ.

585 ಮಂದಿ ಮೃತರು – 1,300 ಮಂದಿ ಗಾಯಗೊಂಡವರು
ಇಸ್ರೇಲ್ ಕೈಗೊಂಡಿರುವ ವಾಯು ದಾಳಿಗಳಿಂದ ಇರಾನ್‌ನಲ್ಲಿ ಈಗಾಗಲೇ ಕನಿಷ್ಠ 585 ಮಂದಿ ಸಾವನ್ನಪ್ಪಿದ್ದು, 1,300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇನ್ನು ಇರಾನ್ ತಿರುಗೇಟಾಗಿ ನಡೆಸಿದ 400ಕ್ಕೂ ಹೆಚ್ಚು ಕ್ಷಿಪಣಿ ದಾಳಿ ಮತ್ತು ಡ್ರೋನ್ ದಾಳಗಳಿಂದ ಇಸ್ರೇಲ್‌ನಲ್ಲಿ 24 ಮಂದಿ ಸಾವಿಗೀಡಾಗಿದ್ದಾರೆ.

ಅಮೆರಿಕದ ಸಭೆ, ಟ್ರಂಪ್ ವ್ಯಾಖ್ಯಾನಗಳು ಕುತೂಹಲಕ್ಕೆ ಕಾರಣ
ವಾಷಿಂಗ್ಟನ್‌ನಲ್ಲಿ ಟ್ರಂಪ್ ತಮ್ಮ ಭದ್ರತಾ ಅಧಿಕಾರಿಗಳೊಂದಿಗೆ ಶ್ವೇತಭವನದಲ್ಲಿ ವಿಶೇಷ ಸಭೆ ನಡೆಸಿದ್ದಾರೆ. ಈ ಸಭೆಗೂ ಮೊದಲು “ಅಲಿ ಖಮೇನಿ ಎಲ್ಲಿ ಅಡಗಿದ್ದಾರೆ ಎಂಬುದು ನಮಗೆ ಗೊತ್ತು. ಆದರೆ ಈಗಲೇ ನಾವು ಅವರನ್ನು ಕೊಲ್ಲುವುದಿಲ್ಲ,” ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದು, ಇದರ ಬೆನ್ನಲ್ಲೇ ಸಭೆ ನಡೆಸಿ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಇರಾನ್ ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿ ಮುಂದುವರಿಕೆ
ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಗಾಯಿ ಮತ್ತು ಇತರ ಅಧಿಕಾರಿಗಳೂ ಅಮೆರಿಕದ ಮಧ್ಯಸ್ಥಿಕೆಯನ್ನು ತಳ್ಳಿಹಾಕಿದ್ದಾರೆ. ಪರಮಾಣು ಯೋಜನೆ ಮುಂದುವರಿಯಲಿದೆ ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ.

ಪ್ರಮುಖ ಉಲ್ಲೇಖಗಳು:
“ಇರಾನ್ ಶರಣಾಗುವ ರಾಷ್ಟ್ರವಲ್ಲ! ಇರಾನ್ ಯುದ್ಧದಲ್ಲಿ ಅಮೆರಿಕ ಹಸ್ತಕ್ಷೇಪ ಮಾಡಿದರೆ, , ಎಂದಿಗೂ ಸರಿಪಡಿಸಲಾಗದ ಹಾನಿಯನ್ನು ಎದುರಿಸಬೇಕಾಗುತ್ತದೆ.”
— ಅಲಿ ಖಮೇನಿ, ಇರಾನ್ ಸರ್ವೋಚ್ಚ ನಾಯಕ

“ನಾನು ಇರಾನ್ ಮೇಲೆ ದಾಳಿ ಮಾಡಬಹುದು, ಮಾಡದೆಯೂ ಇರಬಹುದು. ನಾನೇನು ಮಾಡುವೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ.”
— ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಪರ್ಕಳ ಶಿಶು ಸ್ಪರ್ಧೆ ಮತ್ತು ತಾಯಿ ಮಗುವಿನ ಆರೋಗ್ಯ ಶಿಬಿರ 2026

ಪರ್ಕಳದಲ್ಲಿ ನಡೆದ ತಾಯಿ-ಮಗುವಿನ ಆರೋಗ್ಯ ಮಾಹಿತಿ ಕಾರ್ಯಕ್ರಮ ಹಾಗೂ ಮಕ್ಕಳ ಶಿಶು ಸ್ಪರ್ಧೆ 2026 ರ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕಾರ್ಕಳ ಮಾಳ ಬಳಿ ಸರಣಿ ಅಪಘಾತ: 3 ಕಾರು ಜಖಂ

ಕಾರ್ಕಳ ಮಾಳ ಚೆಕ್ ಪೋಸ್ಟ್ ಬಳಿ ಹೆದ್ದಾರಿಯಲ್ಲಿ ಆಯಿಲ್ ಲೀಕ್ ಆಗಿ 3 ಕಾರುಗಳ ನಡುವೆ ಭೀಕರ ಸರಣಿ ಅಪಘಾತ ಸಂಭವಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಚೆನ್ನಮ್ಮ ದೇವೇಗೌಡ ನಿಧನ: ಡಾ ಮಂಜುನಾಥ್ ಭಾವುಕ

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನರಾಗಿದ್ದು, ಅಳಿಯ ಡಾ. ಸಿ.ಎನ್. ಮಂಜುನಾಥ್ ಭಾವುಕರಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕ್ರಿಯೇಟಿವ್ ಪುಸ್ತಕಧಾರೆ 2026: ಕಾರ್ಕಳದಲ್ಲಿ 25 ಕೃತಿಗಳ ಬಿಡುಗಡೆ

ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ಪುಸ್ತಕಧಾರೆ 2026 ಕಾರ್ಯಕ್ರಮ ಸಡಗರದಿಂದ ಜರುಗಿದ್ದು, ಒಟ್ಟು 25 ಕೃತಿಗಳು ಲೋಕಾರ್ಪಣೆಗೊಂಡಿವೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.