
ಶಿವಮೊಗ್ಗ: ಆಗಸ್ಟ್ 3 ರಂದು ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಕುಬುಡೊ ಬುಡೋಕಾನ್ ಕರಾಟೆ ಡೊ ಅಸೋಸಿಯೇಷನ್ಸ್‌ನ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಇವರು ಒಟ್ಟು 15 ಚಿನ್ನ, 10 ಬೆಳ್ಳಿ ಮತ್ತು 5 ಕಂಚಿನ ಪದಕಗಳನ್ನು ಪಡೆದು ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ.
ಈ ವಿದ್ಯಾರ್ಥಿಗಳು ಕರಾಟೆ ಶಿಕ್ಷಕರಾದ ರೆನ್ಸಿ ಸೋಮನಾಥ ಡಿ ಸುವರ್ಣ, ಸೆನ್ಸಾಯಿ ವಿಜಯಲಕ್ಷ್ಮಿ ಆರ್ ನಾಯಕ್, ಸೆನ್ಸಾಯಿ ಐಶ್ವರ್ಯ ಆರ್ ನಾಯಕ್ ಮತ್ತು ಸೌಂದರ್ಯ ಆರ್ ನಾಯಕ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಶಿಕ್ಷಕರ ಮಾರ್ಗದರ್ಶನದಲ್ಲಿ ಉತ್ತಮ ತರಬೇತಿ ಪಡೆದ ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದಾರೆ.