spot_img

ಅಂತರಜಾತಿ ಹಾಗೂ ಸಾಮೂಹಿಕ ವಿವಾಹಗಳಿಂದ ಜಾತ್ಯತೀತ ಸಮಾಜ ನಿರ್ಮಾಣ ಸಾಧ್ಯ: ಸಿಎಂ ಸಿದ್ದರಾಮಯ್ಯ

Date:

spot_img

ದಾವಣಗೆರೆ : ಜಾತಿ ಭೇದ, ಲಿಂಗ ತಾರತಮ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ಅಂತರ್ಜಾತಿ ಹಾಗೂ ಸಾಮೂಹಿಕ ವಿವಾಹಗಳು ಪ್ರಮುಖವಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸೋಮವಾರ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಅವರ 95ನೇ ಜನ್ಮದಿನದ ಅಂಗವಾಗಿ ದಾವಣಗೆರೆದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಮಾತನಾಡಿದ ಅವರು, “ಬಸವಣ್ಣನವರೂ ಸೇರಿದಂತೆ ಶರಣ ಪರಂಪರೆ ಜಾತ್ಯತೀತ ಸಮಾಜದ ಕನಸು ಕಂಡಿತ್ತು. ಅದನ್ನು ಸಾಕಾರಗೊಳಿಸಲು ಸರ್ಕಾರ ಪ್ರತಿಬದ್ಧವಾಗಿದೆ” ಎಂದರು.

“ನಮ್ಮ ಸರ್ಕಾರ ಮಹಿಳೆಯರನ್ನು ಸಾಮಾಜಿಕ ಹಾಗೂ ಆರ್ಥಿಕವಾಗಿ ಸಬಲಗೊಳಿಸುವ ನಿಟ್ಟಿನಲ್ಲಿ ವಿವಿಧ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಅಂತರ್ಜಾತಿ ವಿವಾಹಗಳು ಹೆಚ್ಚಾದರೆ ಸಮಾಜದಲ್ಲಿ ಜಾತಿ ತಾರತಮ್ಯ ,ಲಿಂಗ ತಾರತಮ್ಯ ನಿವಾರಣೆಯಾಗುತ್ತದೆ” ಎಂದು ತಿಳಿಸಿದರು.

ಇದೇ ವೇದಿಕೆಯಲ್ಲಿ ಶಾಮನೂರು ಶಿವಶಂಕರಪ್ಪರ ಕುರಿತು ಮಾತನಾಡಿದ ಸಿಎಂ, “ಅವರ ಆರೋಗ್ಯ ಉತ್ತಮವಾಗಿದೆ. ಇಂತಹ ಶಕ್ತಿಯುತ ನಾಯಕರು ಇನ್ನೊಂದು ಚುನಾವಣೆಗೆ ಸಹ ಸ್ಪರ್ಧಿಸಬಹುದಾದಷ್ಟು ಚೈತನ್ಯದಿಂದಿದ್ದಾರೆ. ಅವರು ಆಸಕ್ತಿ ತೋರಿಸಿದರೆ ಕಾಂಗ್ರೆಸ್ ಮತ್ತೆ ಟಿಕೆಟ್ ನೀಡಲು ಸಿದ್ಧ” ಎಂದು ಹೇಳಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಶ್ರೀ ಕ್ಷೇ.ಧ.ಗ್ರಾ. ಯೋಜನೆ ಉಡುಪಿ ತಾಲೂಕು : 79ನೇ ಸ್ವಾತಂತ್ರ್ಯ ದಿನಾಚರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್(ರಿ.) ಉಡುಪಿ ತಾಲೂಕು ಇದರ ವತಿಯಿಂದ ಅಂಬಲಪಾಡಿ ಪ್ರಗತಿ ಸೌಧ ಆವರಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಪಣಂಬೂರಿನ ವೀಳ್ಯದೆಲೆ: ಆರೋಗ್ಯ ಭಾಗ್ಯದ ಕಣಜ

ವೀಳ್ಯದೆಲೆ ಎಂದರೆ ಕೇವಲ ತಾಂಬೂಲವಲ್ಲ, ಇದು ಔಷಧೀಯ ಗುಣಗಳ ಕಣಜ

ಗೂಗಲ್‌ನಿಂದ ಕೃತಕ ಬುದ್ಧಿಮತ್ತೆ ಆಧಾರಿತ ‘ಜೀನಿ 3’ ಬಿಡುಗಡೆ

ಗೂಗಲ್ ಡೀಪ್‌ಮೈಂಡ್ ಸಂಸ್ಥೆಯು ತನ್ನ ಇತ್ತೀಚಿನ ಸಂವಾದಾತ್ಮಕ 3D AI ಮಾದರಿ ಜೀನಿ 3 ಅನ್ನು ಅನಾವರಣಗೊಳಿಸಿದೆ.

ಧರ್ಮಸ್ಥಳ ಪ್ರಕರಣ: ಸುಳ್ಳು ದೂರು ನೀಡಿದರೆ ಕಠಿಣ ಕ್ರಮ – ಗೃಹ ಸಚಿವ ಜಿ. ಪರಮೇಶ್ವರ

ಸಾಮೂಹಿಕ ಸಮಾಧಿ ಆರೋಪ ಸುಳ್ಳಾದರೆ ದೂರುದಾರರಿಗೆ ಕಠಿಣ ಶಿಕ್ಷೆ: ಪರಮೇಶ್ವರ