
ಹೊಸದಿಲ್ಲಿ: ಭಾರತದ ಜನತೆ ಕಳೆದ ವರ್ಷ ಒಟ್ಟು 1.1 ಲಕ್ಷ ಕೋಟಿ ತಾಸುಗಳನ್ನು ಸ್ಮಾರ್ಟ್‌ಫೋನ್ ವೀಕ್ಷಣೆಯಲ್ಲಿ ಕಳೆದಿದ್ದಾರೆ ಎಂದು ಅರ್ನೆಸ್ಟ್ ಆ್ಯಂಡ್ ಯಂಗ್ (E&Y) ಸಂಸ್ಥೆಯ 2024ರ ಮನೋರಂಜನೆ ಮತ್ತು ಮಾಧ್ಯಮ ವರದಿ ತಿಳಿಸಿದೆ.
ಅತ್ಯಲ್ಪ ದರದಲ್ಲಿ ಡೇಟಾ ಲಭ್ಯವಾಗುತ್ತಿರುವುದರಿಂದ, ಡಿಜಿಟಲ್ ಮನೋರಂಜನೆ, ಗೇಮಿಂಗ್ ಮತ್ತು ಸೋಶಿಯಲ್ ಮೀಡಿಯಾ ಬಳಕೆ ಸಾಕಷ್ಟು ಹೆಚ್ಚಾಗಿದೆ.

ವರದಿ ಪ್ರಕಾರ, ಒಬ್ಬ ಭಾರತೀಯ ದಿನಕ್ಕೆ ಸರಾಸರಿ 5 ತಾಸು ಮೊಬೈಲ್ ಫೋನ್ ಬಳಸಿ ವ್ಯತೀತ ಮಾಡುತ್ತಿದ್ದಾನೆ.ಈ ಪೈಕಿ 70% ಸಮಯ ಸೋಶಿಯಲ್ ಮೀಡಿಯಾ, ಗೇಮಿಂಗ್ ಮತ್ತು ವೀಡಿಯೋ ವೀಕ್ಷಣೆಗೆ ಮೀಸಲಾಗಿರುವುದು ಗಮನಾರ್ಹ.ಭಾರತದ ಜನರು ಮೊಬೈಲ್ ಫೋನ್ ಬಳಕೆಯಲ್ಲಿ ಇಂಡೋನೇಷ್ಯಾ ಮತ್ತು ಬ್ರೆಜಿಲ್ ಬಳಿಕ ಮೂರನೇ ಸ್ಥಾನದಲ್ಲಿದ್ದಾರೆ.ಭಾರತದ ಮೊಬೈಲ್ ಬಳಕೆದಾರರು ಪ್ರತಿ ವರ್ಷ ತಾವು ಬಳಸುವ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದ್ದಾರೆ.
ಡಿಜಿಟಲ್ ಸ್ಮಾರ್ಟ್‌ಫೋನ್ ಬಳಕೆಯ ಹೆಚ್ಚಳದೊಂದಿಗೆ, ಮಾನಸಿಕ ಆರೋಗ್ಯ ಮತ್ತು ಉತ್ಪಾದಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಮತ್ತು ಸಮಯದ ಸಮತೋಲನ ಮತ್ತು ಸ್ಮಾರ್ಟ್‌ಫೋನ್ ಬಳಕೆಯ ಬಗ್ಗೆ ಜಾಗೃತಿಯ ಅಗತ್ಯವಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.