
ವಾಷಿಂಗ್ಟನ್: ಅಮೆರಿಕದ ಡಲ್ಲಾಸ್‌ನಲ್ಲಿ ಪತ್ನಿ ಮತ್ತು ಮಗನ ಮುಂದೆ ಭಾರತೀಯ ಮೂಲದ ಚಂದ್ರಮೌಳಿ ನಾಗಮಲ್ಲಯ್ಯ (50) ಎಂಬುವವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಅಮೆರಿಕದ ಮೋಟೆಲ್‌ನಲ್ಲಿ ವಾಗ್ವಾದದ ನಂತರ ಈ ಘಟನೆ ನಡೆದಿದ್ದು, ಆರೋಪಿ ಮಾರ್ಟಿನೆಜ್ ಮಚ್ಚಿನಿಂದ ಚಂದ್ರಮೌಳಿಯ ತಲೆ ಕಡಿದು ವಿಕೃತಿ ಮೆರೆದಿದ್ದಾನೆ. ನಂತರ ಕತ್ತರಿಸಿದ ತಲೆಯನ್ನು ಕಾಲಿನಿಂದ ಒದ್ದಿದ್ದಾನೆ.
ಡಲ್ಲಾಸ್ ಪೊಲೀಸರು ಆರೋಪಿ ಮಾರ್ಟಿನೆಜ್‌ನನ್ನು ಬಂಧಿಸಿದ್ದಾರೆ. ಸೆಪ್ಟೆಂಬರ್ 10 ರಂದು ನಡೆದ ಈ ಆಘಾತಕಾರಿ ಘಟನೆ, ಭಾರತೀಯ ಸಮುದಾಯದಲ್ಲಿ ಆತಂಕ ಮೂಡಿಸಿದೆ.