
ಕಾರ್ಕಳ : ರಾಜೀವ್ ಗಾಂಧಿ ಆಧುನಿಕ ಭಾರತದ ರುವಾರಿಯಾಗಿದ್ದರು, ದೇಶದ ಸರ್ವಾಂಗಿಣ ಅಭಿವೃದ್ಧಿಯು ಗ್ರಾಮೀಣ ಅಭಿವೃದ್ಧಿಯನ್ನು ಅವಲಂಬಿಸಿದೆ ಆ ನೆಲೆಯಲ್ಲಿ ಒಬ್ಬ ಪ್ರದಾನಿಯಾಗಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿ ತಂದು ಗ್ರಾಮೀಣ ಮಟ್ಟದ ಬಡ ವರ್ಗದ ಜನರಿಗೆ ಆಡಳಿತ ನಡೆಸುವ ಅದಿಕಾರವನ್ನು ಕೊಟ್ಟವರು ರಾಜೀವ್ ಗಾಂಧಿಯವರು, ಇದು ಪ್ರಜಾತಂತ್ರ ವ್ಯವಸ್ಥೆಯ ಮಾಹಾ ಕ್ರಾಂತಿಗೆ ನಾಂದಿ ಹಾಡಿತ್ತು, ಭಾರತ ಇಂದು ವಿಶ್ವದ ಆಧುನಿಕ ತಂತ್ರಜ್ಞಾನವನ್ನು ಹೊಂದಿರುವ ಅಭಿವೃದ್ಧಿಶೀಲ ರಾಷ್ಟ್ರವಾಗುವಲ್ಲಿ ರಾಜೀವ್ ಗಾಂಧಿಯವರ ಆಡಳಿತಾತ್ಮಕ ದೂರದೃಷ್ಟಿತ್ವವೇ ಕಾರಣವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ ಅಭಿಪ್ರಾಯ ಪಟ್ಡರು ಅವರು ಇಂದು ಕಾರ್ಕಳ ಕಾಂಗ್ರೆಸ್ ಕಛೇರಿಯಲ್ಲಿ ಭಾರತ ರತ್ನ ದಿ. ರಾಜೀವ್ ಗಾಂದಿಯವರ 34 ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅದ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಶುಭದರಾವ್ ಮಾತನಾಡಿ 18 ವರ್ಷದ ಯುವ ವರ್ಗಕ್ಕೆ ಮತದಾನದ ಅಧಿಕಾರವನ್ನು ನೀಡಿ ಯುವಕರು ದೇಶದ ರಾಜಕೀಯ ವ್ಯವಸ್ಥೆಯ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ಮಾಡಿಕ್ಕೊಟ್ಟರು, ಬೊಪೋರ್ಸ್ ಎಂಬ ಸುಳ್ಳು ಹಗರಣವನ್ನು ಮುಂದಿಟ್ಟು ಅವರ ತೇಜೋವಧೆಯನ್ನು ಮಾಡಿದರೂ ಅದನ್ನು ಸವಾಲಾಗಿ ಸ್ವೀಕರಿಸಿ ದೇಶದ ಅಖಂಡತೆ ಮತ್ತು ಸೈದಾಂತಿಕ ಬದ್ದತೆಗಾಗಿ ತನ್ನ ಪ್ರಾಣವನ್ನೇ ಮುಡಿಪಾಗಿಟ್ಟು ಹುತಾತ್ಮರಾದರು. ವರ್ತಮಾನದ ರಾಜಕೀಯ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ಭಾರತೀಯರ ಮನಸ್ಸಿನಲ್ಲಿಯು ಅವರ ನೆನಪು ಅಚ್ಚಳಿಯದೆ ಉಳಿದಿದ್ದು ಅವರು ಸಾಧಿಸಿದ ಸಾಧನೆಯ ಮಾರ್ಗಗಳು ಚಿರಸ್ಮರಣೀಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ನಳಿನಿ ಆಚಾರ್ಯ, ವಿವೇಕಾನಂದ ಶೆಣೈ, ಮಹಿಳಾ ಅದ್ಯಕ್ಷೆ ಭಾನು ಬಾಸ್ಕರ್, ಯುವ ಕಾಂಗ್ರೆಸ್ ಅದ್ಯಕ್ಷ ಮಲ್ಲಿಕ್ ಅತ್ತೂರು, ಉಪಾದ್ಯಕ್ಷ ಆಕಾಶ್, ಯುವ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಜೋಗಿ, ನಗರ ಮಹಿಳಾ ಅದ್ಯಕ್ಷೆ ರೀನಾ, ಕಾರ್ಯದರ್ಶಿ ಜೋಕಿಂ ಪಿಂಟೋ, ಶೋಭಾ ಪ್ರಸಾದ್ ಉಪಸ್ಥಿತಿತರಿದ್ದರು, ಭೂನ್ಯಾಯ ಮಂಡಲಿ ಸದಸ್ಯ ಸುನೀಲ್ ಭಂಡಾರಿ ಸ್ವಾಗತಿಸಿ ಕಾಂತಿ ಶೆಟ್ಟಿ ಧನ್ಯವಾದವಿತ್ತರು