
ನವದೆಹಲಿ: ಭಾರತ ಟೀ ರಫ್ತಿನಲ್ಲಿ ಭಾರೀ ಏರಿಕೆ ಕಂಡು, ಶ್ರೀಲಂಕಾವನ್ನು ಹಿಂದಿಕ್ಕಿ ಜಗತ್ತಿನ ಎರಡನೇ ಅತಿದೊಡ್ಡ ಟೀ ರಫ್ತು ರಾಷ್ಟ್ರವಾಗಿ ಹೊರಹೊಮ್ಮಿದೆ. ಟೀ ಬೋರ್ಡ್ ಆಫ್ ಇಂಡಿಯಾ ಪ್ರಕಟಿಸಿದ ವರದಿ ಪ್ರಕಾರ, 2024ರಲ್ಲಿ ಭಾರತ ಬರೋಬ್ಬರಿ 255 ಮಿಲಿಯನ್ ಕೆ.ಜಿ. ಟೀ ರಫ್ತು ಮಾಡಿದೆ. ಈ ಪಟ್ಟಿಯಲ್ಲಿ ಕೀನ್ಯಾ ಮೊದಲ ಸ್ಥಾನದಲ್ಲಿದೆ.
ಕಳೆದ ಹತ್ತು ವರ್ಷಗಳಲ್ಲಿ ಭಾರತದ ಟೀ ರಫ್ತು ಪ್ರಮಾಣದಲ್ಲಿ ನಿರಂತರ ಏರಿಕೆ ಕಂಡುಬಂದಿದ್ದು, ಜಾಗತಿಕ ಅಸ್ಥಿರತೆಯ ನಡುವೆಯೂ 2023ರ 231.69 ಮಿಲಿಯನ್ ಕೆ.ಜಿ. ರಿಂದ 2024ರಲ್ಲಿ 255 ಮಿಲಿಯನ್ ಕೆ.ಜಿ. ಗೆ ಏರಿಕೆಯಾಗಿದೆ.
ಆರ್ಥಿಕ ಹಿರಿಮೆ:
ಭಾರತದ ಟೀ ರಫ್ತು ಮೌಲ್ಯದಲ್ಲಿ ಶೇ. 15ರಷ್ಟು ಏರಿಕೆ ಕಂಡು, 2023ರಲ್ಲಿ ₹6,161 ಕೋಟಿ ಆದಾಯ ಇದ್ದರೆ, 2024ರಲ್ಲಿ ಅದು ₹7,111 ಕೋಟಿ ಗೆ ಏರಿಕೆಯಾಗಿದೆ.
ಮುಖ್ಯ ಎಕ್ಸ್ಪೋರ್ಟ್ ಡೆಸ್ಟಿನೇಶನ್:
ಭಾರತದಿಂದ ಯುಎಇ, ಇರಾಕ್, ಇರಾನ್, ರಷ್ಯಾ, ಯುಎಸ್‌ಎ ಮತ್ತು ಬ್ರಿಟನ್ ಸೇರಿ 25ಕ್ಕೂ ಅಧಿಕ ದೇಶಗಳಿಗೆ ಟೀ ರಫ್ತು ಮಾಡಲಾಗುತ್ತಿದ್ದು, ಇರಾಕ್‌ಗೆ ಶೇ. 20% ರಫ್ತುಗೊಂಡಿದೆ. 2024ರ ಸಾಲಿನಲ್ಲಿ ಪಶ್ಚಿಮ ಏಷ್ಯಾ ದೇಶಗಳಿಗೆ 40-50 ಮಿಲಿಯನ್ ಕೆ.ಜಿ. ಟೀ ಕಳುಹಿಸುವ ನಿರೀಕ್ಷೆಯಿದೆ.