
ಗ್ಲೋಬಲ್ ಫೈರ್ ಪವರ್ ಸಂಸ್ಥೆ ಬಿಡುಗಡೆ ಮಾಡಿದ 2025ರ ಮಿಲಿಟರಿ ಶಕ್ತಿಯ ತಾಜಾ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ 4ನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಅಮೆರಿಕ ಪ್ರಥಮ ಸ್ಥಾನವನ್ನು ಪಡೆದರೆ, ರಷ್ಯಾ 2ನೇ ಹಾಗೂ ಚೀನಾ 3ನೇ ಸ್ಥಾನಕ್ಕೇರಿದೆ. ಪಾಕಿಸ್ತಾನ ಈ ಬಾರಿ 12ನೇ ಸ್ಥಾನಕ್ಕೆ ಕುಸಿದಿದೆ.
ವಿಶ್ವದ ಶಕ್ತಿಶಾಲಿ ಸೇನೆಗಳ ಪಟ್ಟಿಯನ್ನು 60ಕ್ಕೂ ಹೆಚ್ಚು ಅಂಶಗಳ ಆಧಾರದ ಮೇಲೆ ನಿಗದಿಪಡಿಸಲಾಗಿದೆ. ಇದರಲ್ಲಿ ಮಿಲಿಟರಿ ಸಾಮರ್ಥ್ಯ, ಆರ್ಥಿಕ ಸ್ಥಿತಿ, ಲಾಜಿಸ್ಟಿಕ್ಸ್ ಸಾಮರ್ಥ್ಯ ಇತ್ಯಾದಿಗಳನ್ನು ಪರಿಗಣಿಸಲಾಗಿದೆ.
ವಿಶ್ವದಲ್ಲೇ ಭಾರತದ ವಾಯುಪಡೆ 4ನೇ ಮತ್ತು ನೌಕಾಪಡೆ 6ನೇ ಸ್ಥಾನವನ್ನು ಪಡೆದಿದೆ.