
ಬಿಹಾರ, ಮೇ 30 : ಪಹಲ್ಲಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ “ಆಪರೇಷನ್ ಸಿಂದೂರ್” ನ ಹೆಸರಿನಲ್ಲಿ ಭಾರತೀಯ ಸೇನೆಯು ಪಾಕಿಸ್ತಾನದ ಏರ್ ಬೇಸ್‌ಗಳು ಮತ್ತು ಉಗ್ರರ ತಾಣಗಳನ್ನು ಕ್ಷಣಾರ್ಧದಲ್ಲಿ ನಾಶಮಾಡಿದ ಶೌರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಬಿಹಾರದಲ್ಲಿ ನಡೆಸಿದ ಚುನಾವಣಾ ರ‍್ಯಾಲಿಯಲ್ಲಿ ಉಲ್ಲೇಖಿಸಿದರು.
ಬಿಹಾರದ ಕರಾಕತ್ ಪಟ್ಟಣದಲ್ಲಿ ಶುಕ್ರವಾರ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಪಹಲ್ಗಾಮ್ ದಾಳಿಯ ಬಳಿಕ ದೇಶದ ಭದ್ರತೆಗೆ ಪ್ರತಿಸ್ಪಂದನೆ ನೀಡುವ ಮಾತು ನೀಡಿದ್ದೇನೆ ಮತ್ತು ಅದನ್ನು ಈಡೇರಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. “ಪಾಕಿಸ್ತಾನದ ಸೇನೆಯ ರಕ್ಷಣೆಯಡಿ ಅಡಗಿದ್ದ ಉಗ್ರರು, ನಮ್ಮ ಪಡೆಗಳ ತೀವ್ರ ದಾಳಿಗೆ ನಲುಗಿದರು. ಕೆಲವೇ ನಿಮಿಷಗಳಲ್ಲಿ ಪಾಕಿಸ್ತಾನದಲ್ಲಿನ ಹಲವು ಭಯೋತ್ಪಾದಕ ತಾಣಗಳು ಮತ್ತು ವಾಯುನೆಲೆಗಳು ನಾಶವಾಗಿವೆ,” ಪಾಕಿಸ್ತಾನ ಮತ್ತು ಜಗತ್ತಿಗೆ ಸಿಂದೂರದ ಶಕ್ತಿ ಏನೆಂದು ತೋರಿಸಿದ್ದೇವೆ,” ಎಂದು ಮೋದಿ ಹೇಳಿದರು.
“ಪಹಲ್ಲಾಮ್ ಘಟನೆಯ ಎರಡು ದಿನಗಳ ನಂತರ ನಾನು ಬಿಹಾರಕ್ಕೆ ಭೇಟಿ ನೀಡಿ ಭಯೋತ್ಪಾದಕ ಅಡಗುತಾಣಗಳನ್ನು ನೆಲಸಮ ಮಾಡಲಾಗುವುದು ಎಂದು ಬಿಹಾರದ ಮಣ್ಣಿನಿಂದ ದೇಶಕ್ಕೆ ಭರವಸೆ ನೀಡಿದ್ದೆ. ಅವರಿಗೆ ಕಲ್ಪನೆಗೂ ಮೀರಿದ ಶಿಕ್ಷೆಯನ್ನು ನೀಡಲಾಗುವುದು ಎಂದು ನಾನು ಹೇಳಿದ್ದೆ. ಈಗ ನಾನು ಬಿಹಾರಕ್ಕೆ ಹಿಂತಿರುಗಿದ್ದೇನೆ, ನಾನು ನನ್ನ ಭರವಸೆಯನ್ನು ಈಡೇರಿಸಿದ್ದೇನೆ” ಎಂದು ಹೆಮ್ಮೆಯಿಂದ ಪ್ರಧಾನಿ ಮೋದಿ ಇಡೀ ಜಗತ್ತಿಗೆ ಸಿಂದೂರದ ಶಕ್ತಿಯ ಬಗ್ಗೆ ತಿಳಿಸಿದರು.