spot_img

ಭಾರತ-ಇಂಗ್ಲೆಂಡ್ 2ನೇ T20ಗೆ ಸಜ್ಜು, ಪ್ರಶಂಸನೀಯ ಪ್ರದರ್ಶನಕ್ಕೆ ನಿರೀಕ್ಷೆ

Date:

ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ಚಾಂಪಿಯನ್ಸ್ ರ ಆಟವಾಡಿ 7 ವಿಕೆಟ್‌ಗಳಿಂದ ಇಂಗ್ಲೆಂಡ್‌ ವಿರುದ್ಧ ಗೆಲುವು ದಾಖಲಿಸಿದ ಟೀಮ್ ಇಂಡಿಯಾ, ಶನಿವಾರ ಚೆನ್ನೈ T20 ಪಂದ್ಯದಲ್ಲೂ ಅದೇ ಲಯ ಕಾಪಾಡಲು ದೃಢಸಂಕಲ್ಪಗೊಂಡಿದೆ. 5 ಪಂದ್ಯಗಳ ಸುದೀರ್ಘ ಸರಣಿಯ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್‌ ತಿರುಗಿಬೀಳಲು ಸಾಧ್ಯತೆಯಿದ್ದು, ಸ್ಪರ್ಧೆ ಕಠಿಣವಾಗಲಿದೆ.

ಶಮಿ ಗೈರಲ್ಲೂ ಉತ್ತಮ ಪ್ರದರ್ಶನ
ಮೊಹಮ್ಮದ್ ಶಮಿ ತವರಿನ ಕೋಲ್ಕತಾದಲ್ಲಿ ಆಡಲಿಲ್ಲದಿದ್ದರೂ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್ ಅವರ ಬೌಲಿಂಗ್ ಮೂಲಕ ಭಾರತ ಬಲಿಷ್ಠ ಪ್ರದರ್ಶನ ನೀಡಿತು. ಚಕ್ರವರ್ತಿ ಒಂದು ಓವರ್‌ನಲ್ಲಿ ಎರಡು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿ ಇಂಗ್ಲೆಂಡ್ ತಂಡವನ್ನು ಸಂಕಷ್ಟಕ್ಕೆ ಸಿಕ್ಕಿಸಿದರು.

ಅಭಿಷೇಕ್ ಗಾಯ, ಸ್ಯಾಮ್ಬನ್‌ಫಾರ್ಮ್ ಗಮನಕ್ಕೆ
ಬ್ಯಾಟಿಂಗ್‌ನಲ್ಲಿ ಅಭಿಷೇಕ್ ಶರ್ಮ ಅವರ 232ರಷ್ಟು ಸ್ಟ್ರೈಕ್‌ರೇಟ್ ಮಿಂಚಿಸಿತ್ತು, ಆದರೆ ಅಭ್ಯಾಸದ ವೇಳೆ ಗಾಯಗೊಂಡಿದ್ದಾರೆ. ಸಂಜು ಸ್ಯಾಮ್ಬನ್ ಸಿಡಿದು ನಿಂತರೂ ಇನ್ನಿಂಗ್ಸ್‌ ಅನ್ನು ಆಳಕ್ಕೆ ಕೊಂಡೊಯ್ಯುವಲ್ಲಿ ವಿಫಲರಾದರು. ನಾಯಕ ಸೂರ್ಯಕುಮಾರ್ ಯಾದವ್ ಈ ಪಂದ್ಯದಲ್ಲಿ ಖಾತೆ ತೆರೆಯುವ ನಿರೀಕ್ಷೆಯಿದೆ.

ಚೆಪಾಕ್ ಅಂಗಳದಲ್ಲಿ ಸ್ಪಿನ್ನರ್‌ಗಳಿಗೆ ಮೇಲುಗೈ
ಚೆಪಾಕ್ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವಾಗುವ ನಿರೀಕ್ಷೆಯಿದ್ದು, ಭಾರತ ತಂಡವು ವಿವಿಧತೆ ಹೊಂದಿರುವ ಗುಣಮಟ್ಟದ ಸ್ಪಿನ್ನರ್‌ಗಳನ್ನು ಹೊಂದಿರುವುದರಿಂದ ಕಮಾಲಿನ ಆಟದ ನಿರೀಕ್ಷೆಯಿದೆ. ಶಮಿ ತಂಡಕ್ಕೆ ಮರಳಿದರೆ, ನಿತೀಶ್ ಕುಮಾರ್ ರೆಡ್ಡಿ ಅವರು ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ.

ಪುನರ್‌ಪ್ರದರ್ಶನದ ನಿರೀಕ್ಷೆ
ಬಟ್ಲರ್, ಲಿವಿಂಗ್‌ಸ್ಟೋನ್, ಬ್ರೂಕ್ ಮುಂತಾದ ಟT20 ಸ್ಪೆಷಲಿಸ್ಟ್ ಆಟಗಾರರನ್ನೊಳಗೊಂಡ ಬಲಿಷ್ಠ ಇಂಗ್ಲೆಂಡ್ ತಂಡ ಚೆನ್ನೈಯಲ್ಲಿ ತಿರುಗಿಬೀಳಲು ಪ್ರಯತ್ನಿಸಲಿದೆ. ಈಡನ್‌ ಗಾರ್ಡನ್ಸ್‌ನಲ್ಲಿ ನಡೆದ ಎಡವಟ್ಟನು ಮರೆತು, ಇಂಗ್ಲೆಂಡ್ ತಂಡ ಉತ್ತಮ ಆಟವನ್ನು ನೀಡಲು ಸಜ್ಜಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ನಾರಾಯಣ ಗುರು ಜಯಂತಿ

ಜ್ಞಾನ ಮತ್ತು ಸಮಾನತೆಯ ಪುನರುತ್ಥಾನಕ್ಕೆ ಪ್ರೇರಣೆಯ ದಿನಪ್ರತಿ ವರ್ಷ ಸೆಪ್ಟೆಂಬರ್ 7, ಭಾರತದ ಕರಾವಳಿ ತೀರದ ಜನತೆಗೆ ಒಂದು ಪವಿತ್ರ ಮತ್ತು ಮಹತ್ವದ ದಿನ

ಧರ್ಮಸ್ಥಳ ಪ್ರಕರಣ: ಆರೋಪಿ ಚಿನ್ನಯ್ಯ ನ್ಯಾಯಾಂಗ ಬಂಧನಕ್ಕೆ, ಶಿವಮೊಗ್ಗ ಜೈಲಿಗೆ ರವಾನೆ

'ಧರ್ಮಸ್ಥಳದಲ್ಲಿ ಹೆಣ ಹೂತಿದ್ದೇನೆ' ಎಂದು ಹಲವು ದಿನಗಳ ಕಾಲ ಸುದ್ದಿಯಲ್ಲಿದ್ದ ಆರೋಪಿ ಚಿನ್ನಯ್ಯನ ಎಸ್.ಐ.ಟಿ ಕಸ್ಟಡಿ ಅವಧಿ ಮುಗಿದಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಐಸಿಸಿ ಮತ್ತು Google Pay ಜಂಟಿ ಪ್ರಯತ್ನ: ಮಹಿಳಾ ವಿಶ್ವಕಪ್ ಟಿಕೆಟ್ ಮಾರಾಟಕ್ಕೆ ಹೊಸ ಡಿಜಿಟಲ್ ಸ್ಪರ್ಶ

ವಿಶೇಷ ಟಿಕೆಟ್‌ಗಳು ಗೂಗಲ್ ಪೇ ಮೂಲಕ ಸೆಪ್ಟೆಂಬರ್ 8ರವರೆಗೆ ಲಭ್ಯವಿರಲಿದ್ದು, ಸೆಪ್ಟೆಂಬರ್ 9 ರಿಂದ ಎಂದಿನಂತೆ ಟಿಕೆಟ್ ಮಾರಾಟ ಪ್ರಾರಂಭವಾಗಲಿದೆ ಎಂದು ICC ತಿಳಿಸಿದೆ.

ಸೈನಸ್ ಸಮಸ್ಯೆ: ಕರಿಮೆಣಸಿನ ಆವಿಯಿಂದ ಪರಿಹಾರ ಸಾಧ್ಯವೇ?

ಮೂಗು ಕಟ್ಟಿಕೊಂಡಾಗ ಅಥವಾ ಸೈನಸ್‌ಗಳಿಂದ ತಲೆನೋವು ಬಂದಾಗ ಬಿಸಿ ನೀರಿನ ಆವಿಗೆ ಕರಿಮೆಣಸು ಸೇರಿಸಿ ಉಸಿರಾಡುವುದು ಒಂದು ಜನಪ್ರಿಯ ವಿಧಾನ.