
ಭಾರತದಲ್ಲಿ ಇನ್ಸ್ಟಾಗ್ರಾಮ್ ಹಲವಾರು ಪಾಕಿಸ್ತಾನಿ ಸಾಮಾಜಿಕ ಮಾಧ್ಯಮ ಪ್ರಭಾವಶಾಲಿಗಳು ಮತ್ತು ಸೆಲೆಬ್ರಿಟಿಗಳ ಅಕೌಂಟ್ಗಳನ್ನು ಬ್ಲಾಕ್ ಮಾಡಿದೆ. ಪ್ರಮುಖರಾದ ನಟಿ ಮಹಿರಾ ಖಾನ್, ಇನ್ಫ್ಲುಯೆನ್ಸರ್ ಹಾನಿಯಾ ಆಮಿರ್ ಮತ್ತು ನಟ-ಗಾಯಕ ಅಲಿ ಜಫರ್ ಅವರ ಖಾತೆಗಳನ್ನು ಭಾರತದ ಬಳಕೆದಾರರು ಪ್ರವೇಶಿಸಲು ಸಾಧ್ಯವಿಲ್ಲ.
ಈ ಅಕೌಂಟ್ಗಳನ್ನು ಪ್ರವೇಶಿಸಲು ಪ್ರಯತ್ನಿಸಿದಾಗ, “ಭಾರತದಲ್ಲಿ ಈ ಖಾತೆ ಲಭ್ಯವಿಲ್ಲ. ಕಾನೂನುಬದ್ಳವಾದ ವಿನಂತಿಯನ್ನು ಪಾಲಿಸಿ ಈ ವಿಷಯವನ್ನು ನಿರ್ಬಂಧಿಸಲಾಗಿದೆ” ಎಂದು ಸಂದೇಶ ಕಾಣಿಸುತ್ತದೆ.
ಇದಕ್ಕೆ ಕಾರಣ, ಭಾರತ ಸರ್ಕಾರ ಅಥವಾ ನ್ಯಾಯಾಲಯದ ತೀರ್ಪಿನ ಪ್ರಕಾರ ಇನ್ಸ್ಟಾಗ್ರಾಮ್ ಈ ನಿರ್ಬಂಧವನ್ನು ವಿಧಿಸಿರಬಹುದು ಎಂದು ಅಂದಾಜಿಸಲಾಗಿದೆ. ಹಿಂದೆ ಕೂಡ ಪಾಕಿಸ್ತಾನಿ ಕಲಾವಿದರು ಮತ್ತು ಸೆಲೆಬ್ರಿಟಿಗಳ ವಿಷಯಗಳನ್ನು ಭಾರತದಲ್ಲಿ ನಿರ್ಬಂಧಿಸಲಾಗಿತ್ತು.
ಇದರ ಬಗ್ಗೆ ಇನ್ನೂ ಔಪಚಾರಿಕವಾಗಿ ಯಾವುದೇ ಸ್ಪಷ್ಟ ಹೇಳಿಕೆ ನೀಡಿಲ್ಲ. ಆದರೆ, ಡಿಜಿಟಲ್ ಗಡಿಗಳು ಮತ್ತು ರಾಜಕೀಯ ಸಂಬಂಧಗಳು ಸಾಮಾಜಿಕ ಮಾಧ್ಯಮ ನೀತಿಗಳನ್ನು ಹೇಗೆ ಪ್ರಭಾವಿಸುತ್ತವೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ.



