
ಹೆಬ್ರಿ : 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಹೆಬ್ರಿ ಗ್ರಾಮ ಪಂಚಾಯತ್ ವತಿಯಿಂದ ಸಮಾಜ ಮಂದಿರದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ತಾರಾನಾಥ್ ಎಸ್. ಬಂಗೇರ ಅವರು ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುಪ್ರಿಯಾ ಮತ್ತು ಸದಸ್ಯರುಗಳಾದ ಮಾಲತಿ, ಜನಾರ್ಧನ್ ಎಚ್, ಕರುಣಾಕರ ಸೇರಿಗಾರ್, ಎಚ್.ಬಿ. ಸುರೇಶ್, ಕೃಷ್ಣ ನಾಯ್ಕ, ಆಶಾಲತಾ ಹೆಗ್ಡೆ, ಆಶಾ, ಸುರೇಖಾ ಶೆಟ್ಟಿ, ಸುಶೀಲಾ ಉಪಸ್ಥಿತರಿದ್ದರು. ಅಲ್ಲದೆ, ಪಿಡಿಒ ಸದಾಶಿವ ಸೇರ್ವೆಗಾರ್, ಲೆಕ್ಕ ಸಹಾಯಕಿ ಪ್ರತಿಭಾ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.