
ಹಿರಿಯಡಕ : ಹಿರಿಯಡಕ ಗ್ರೀನ್ ಪಾರ್ಕ್ ಶಾಲೆಯಲ್ಲಿ 79 ನೇ ಸ್ವಾತಂತ್ರೋತ್ಸವವನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹವಾಲ್ದಾರ್ ಸುಧೀರ್ ನಾಯಕ್ ರವರು ಧ್ವಜಾರೋಹಣ ಮಾಡಿ ಮಾತನಾಡುತ್ತ ವಿದ್ಯಾರ್ಥಿಗಳು ದೇಶಕ್ಕಾಗಿ ತ್ಯಾಗ ಮಾಡಿದವರ ಬಗ್ಗೆ ತಿಳಿದುಕೊಂಡು ಗೌರವಿಸಬೇಕು. ಭಾರತ ಸೇನೆಯನ್ನು ಸೇರಿ ದೇಶ ಸೇವೆ ಮಾಡುವ ಮನಸ್ಸು ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು.

ಅತಿಥಿಯಾಗಿ ಭಾಗವಹಿಸಿದ ಹಳೆ ವಿದ್ಯಾರ್ಥಿ ಶ್ರೀಯ ಎಸ್. ಶೆಟ್ಟಿಯವರು ತಾನು ಕಲಿತ ಶಾಲೆ ನನಗೆ ಒಳ್ಳೆಯ ವಿಧ್ಯೆಯನ್ನು ನೀಡಿದ್ದರಿಂದ ಜೀವನದಲ್ಲಿ ಶಿಸ್ತು ಹಾಗೂ ಪ್ರಾಮಾಣಿಕತೆಯಿಂದ ನಾನು ಉತ್ತಮವಾದ ಉದ್ಯೋಗವನ್ನು ಪಡೆದು ತೃಪ್ತಿಕರವಾದ ಜೀವನವನ್ನು ನಡೆಸುತ್ತಿದ್ದೇನೆ ಎನ್ನುತ್ತಾ ತನ್ನ ಶಾಲಾ ದಿನಗಳ ಅನುಭವವನ್ನು ವಿದ್ಯಾರ್ಥಿಗಳ ಮುಂದಿಡುತ್ತಾ ತನ್ನ ಶಾಲೆಯು ಬಹಳಷ್ಟು ಅಭಿವೃದ್ಧಿ ಹೊಂದಿದೆ ಎಂದು ಶುಭ ಹಾರೈಸಿದರು.

ಶಾಲಾ ಪ್ರಾಂಶುಪಾಲೆ ಕ್ಲಾರಿನ್ ನಿಕೋಲಸ್ ಸ್ವಾತಂತ್ರ್ಯ ದಿನದ ಮಹತ್ವವನ್ನು ತಿಳಿಸಿದರು. ಉಪಪ್ರಾಂಶುಪಾಲೆ ಜಯಶ್ರೀ ತೆಂಡೂಲ್ಕರ್, ಆಡಳಿತಾಧಿಕಾರಿ ಶೇಕರ್ ಗುಜ್ಜರ್ ಬೆಟ್ಟು, ವ್ಯವಸ್ಥಾಪಕಿ ಅಮಿತಾ ಹೆಗ್ಡೆ, ಸಂಯೋಜಕಿಯರಾದ ಉಷಾ ರಾವ್, ಗೀತಾ ಭಟ್ ಮುಂತಾದವರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ನವಮಿ ಸ್ವಾಗತಿಸಿ ಅನನ್ಯ ಮತ್ತು ಶ್ರೀಯ ಪರಿಚಯಿಸಿ ಸಂಕರ್ ಸ್ವಾತಂತ್ರ್ಯದ ಬಗ್ಗೆ ಮಾತಾಡಿದರು. ದ್ರಿಶಿಕ ನಾಯ್ಕ್ ವಂದಿಸಿ ಪೂರ್ವಿ ಮತ್ತು ತ್ರಿವೇಣಿ ನಿರೂಪಿಸಿದರು.



