
ಹಿರಿಯಡ್ಕ : ಹಿರಿಯಡ್ಕದ ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘ (ರಿ) ಕೊಂಡಾಡಿ, ಭಜನೆಕಟ್ಟೆಯಲ್ಲಿ ಹಿಂದುಸ್ಥಾನಿ ಸಂಗೀತ ಶಾಲೆಯ ಉದ್ಘಾಟನಾ ಕಾರ್ಯಕ್ರಮವು ಜೂನ್ 29, 2025ರಂದು ಬೆಳಿಗ್ಗೆ 9:30ಕ್ಕೆ ನಡೆಯಲಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ, ETV ‘ಎದೆ ತುಂಬಿ ಹಾಡುವೆನು’ ಸೀಸನ್ 1ರ ವಿಜೇತರಾದ ಹಾಗೂ 24 ಗಂಟೆಗಳ ನಿರಂತರ ಗಾಯನದ ಮೂಲಕ ‘Golden Book of World Records’ನಲ್ಲಿ ದಾಖಲೆಯನ್ನು ಸಾಧಿಸಿದ ವಿದ್ವಾನ್ ಯಶವಂತ್ ಎಂ.ಜಿ. ಭಾಗವಹಿಸಲಿದ್ದಾರೆ ಹಾಗೂ ಶ್ರೀ ರಾಘವೇಂದ್ರ ಕಾರ್ಕಳ (ಶ್ರೀ ರಾಘವೇಂದ್ರ ಮಠ, ತೆಳ್ಳಾರು ರಸ್ತೆ), ಶ್ರೀ ನಿತೀಶ್ ಕುಮಾರ್ ಶೆಟ್ಟಿ (ಶ್ರೀ ರಾಮ ಭಜನಾ ಮಂಡಳಿ, ಕೊಂಡಾಡಿ), ಹಾಗೂ ಶ್ರೀ ಜಯರಾಮ ಆಚಾರ್ಯ ಕೋಟ್ನಕಟ್ಟೆ (ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘದ ಅಧ್ಯಕ್ಷ) ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಈ ಹಿಂದುಸ್ಥಾನಿ ಸಂಗೀತ ಶಾಲೆಯ ಶಿಕ್ಷಕರಾಗಿ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದೇಶಿಕ ಕಲೆಗಳ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಸಂಗೀತ ಶಿಕ್ಷಕ ವಿದ್ವಾನ್ ಅಶೋಕ್ ಆಚಾರ್ಯ ಸೈಬ್ರಾ ಕಟ್ಟೆಯವರು ತರಬೇತಿಯನ್ನು ನೀಡಲಿದ್ದಾರೆ. ಇಲ್ಲಿ ಹಿಂದುಸ್ಥಾನಿ ಶಾಸ್ತ್ರೀಯ ಗಾಯನ, ಹಾರ್ಮೋನಿಯಂ ವಾದನ, ಭಜನೆಗಳು ಹಾಗೂ ಭಾವಗೀತೆಗಳ ತರಬೇತಿ ನೀಡಲಾಗುವುದು. ಭಾಗವಹಿಸಲು ವಯಸ್ಸಿನ ಮಿತಿಯಿಲ್ಲ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಈ ಕಾರ್ಯಕ್ರಮವು ಸಾರ್ವಜನಿಕರಿಗೆ ಮುಕ್ತವಾಗಿದ್ದು, ಹೆಚ್ಚಿನ ಮಾಹಿತಿಗಾಗಿ 9731728991 ಅಥವಾ 9008530676 ಎಂಬ ಸಂಖ್ಯೆಗಳನ್ನು ಸಂಪರ್ಕಿಸಬಹುದು.