
ಬೆಂಗಳೂರು : ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದ್ದು, ಆರು ಮಂದಿ ಐಎಎಸ್ ಅಧಿಕಾರಿಗಳು, ನಾಲ್ಕು ಐಎಫ್‌ಎಸ್ ಅಧಿಕಾರಿಗಳು ಹಾಗೂ ಓರ್ವ ಐಪಿಎಸ್ ಅಧಿಕಾರಿ ಸೇರಿದಂತೆ ಒಟ್ಟು 11 ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿ, ತಕ್ಷಣದಿಂದ ಜಾರಿಗೆ ಬರುವಂತೆ ಹೊಸ ಹುದ್ದೆಗಳನ್ನು ನಿಯೋಜಿಸಿದೆ.
ವರ್ಗಾವಣೆಯಾದ ಐಎಎಸ್ ಅಧಿಕಾರಿಗಳು ಮತ್ತು ಹೊಸ ಹುದ್ದೆಗಳು:
- ಗಂಗೂಬಾಯಿ ರಮೇಶ್ ಮಾನಕರ್ – ಆಯುಕ್ತರು, ಇಎಸ್‌ಐಎಸ್, ಕಾರ್ಮಿಕ ಇಲಾಖೆ, ಬೆಂಗಳೂರು.
- ಎನ್. ಚಂದ್ರಶೇಖರ್ – ವ್ಯವಸ್ಥಾಪಕ ನಿರ್ದೇಶಕ, ರೇಷ್ಮೆ ಮಾರುಕಟ್ಟೆ ಮಂಡಳಿ, ಬೆಂಗಳೂರು.
- ಎಸ್.ಜೆ. ಸೋಮಶೇಖರ್ – ಆಯುಕ್ತ, ಗ್ರಾಮೀಣ ಅಭಿವೃದ್ಧಿ, ಬೆಂಗಳೂರು.
- ಟಿ. ಭೂಬಾಲನ್ – ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಇಡಿಸಿಎಲ್ ನಿರ್ದೇಶಕ ಹುದ್ದೆಯ ಹೆಚ್ಚುವರಿ ಹೊಣೆ.
- ಅಪರ್ಣಾ ರಮೇಶ್ – ಹೆಚ್ಚುವರಿ ಆಯುಕ್ತರು, ವಾಣಿಜ್ಯ ತೆರಿಗೆ (ಸವೀರ್‍ಸ್ ಅನಾಲಿಸಿಸ್), ಬೆಂಗಳೂರು.
- ಕಾನಿಷ್ಕ – ಹೆಚ್ಚುವರಿ ಆಯುಕ್ತ, ವಾಣಿಜ್ಯ ತೆರಿಗೆಗಳು (ಜಾಗೃತ ದಳ), ಬೆಂಗಳೂರು.
ಐಪಿಎಸ್ ಮತ್ತು ಐಎಫ್‌ಎಸ್ ಅಧಿಕಾರಿಗಳ ವರ್ಗಾವಣೆ:
- ಕೆ.ಎಂ. ಶಾಂತರಾಜು (ಐಪಿಎಸ್) – ಎಸ್‌ಪಿ, ಆಂತರಿಕ ಭದ್ರತಾ ವಿಭಾಗ.
- ಸ್ಮಿತಾ ಬಿದ್ದೂರ್ (ಐಎಫ್‌ಎಸ್) – ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪ್ರಚಾರ ಮತ್ತು ಐಸಿಟಿ).
- ಪಿ.ಸಿ. ರೇ (ಐಎಫ್‌ಎಸ್) – ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕ).
- ಮನೋಜ್ ಕುಮಾರ್ (ಐಎಫ್‌ಎಸ್) – ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜತೆಗೆ ಎಂಎಸ್‌ಐಎಲ್‌ನ ವ್ಯವಸ್ಥಾಪಕ ನಿರ್ದೇಶಕ ಹುದ್ದೆ (ಹೆಚ್ಚುವರಿ).
- ಉಪೇಂದ್ರ ಪ್ರತಾಪ್ ಸಿಂಗ್ (ಐಎಫ್‌ಎಸ್) – ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತ.
ಈ ವರ್ಗಾವಣೆಗಳು ಆಡಳಿತದಲ್ಲಿ ಹೊಸ ಬದಲಾವಣೆಗಳನ್ನು ತರಲಿವೆ ಎಂದು ನಿರೀಕ್ಷಿಸಲಾಗಿದೆ.