spot_img

ಆರೋಗ್ಯದಲ್ಲಿ ಬಾಳೆಹಣ್ಣಿನ ಮಹತ್ವ

Date:

spot_img

ಎಲ್ಲಾ ಹಣ್ಣುಗಳಿಗಿಂತಲೂ ಸುಲಭವಾಗಿ ದೊರಕುವ ಮತ್ತು ವರ್ಷಪೂರ್ತಿ ಲಭ್ಯವಿರುವ ಹಣ್ಣು ಎಂದರೆ ಬಾಳೆಹಣ್ಣು. ಹಳ್ಳಿಗಳಲ್ಲಿ ಊರಿನಿಂದ ಬರುವವರು ಹೆಚ್ಚಾಗಿ ಒಂದು ಡಜನ್ ಬಾಳೆಹಣ್ಣು ಕೊಂಡೊಯ್ಯುವ ಪದ್ಧತಿ ಇನ್ನೂ ಉಳಿದಿದೆ. ಬಾಳೆಹಣ್ಣನ್ನು ಸೇವಿಸುವುದರಿಂದಾಗುವ ಪ್ರಯೋಜನಗಳಿಂದ ಅದನ್ನು ನಿತ್ಯ ಆಹಾರದ ಅವಿಭಾಜ್ಯ ಅಂಗವನ್ನಾಗಿ ಮಾಡಿವೆ.

ಬಾಳೆಹಣ್ಣಿನಲ್ಲಿರುವ ಟ್ರಿಪ್ಟೋಫಾನ್ ಎಂಬ ಪ್ರೊಟೀನ್ ಅಂಶ, ದೇಹದಲ್ಲಿ ಸಿರೊಟೋನಿಸ್ ಆಗಿ ಪರಿವರ್ತನೆಗೊಳ್ಳುತ್ತದೆ. ಇದರಿಂದ ಮಾನಸಿಕ ಶಾಂತಿ ಹೆಚ್ಚಾಗಿ, ಒತ್ತಡ ಕಡಿಮೆಯಾಗುತ್ತದೆ. ಇದಕ್ಕಾಗಿಯೇ ಕೆಲವರು ಊಟದ ನಂತರ ಬಾಳೆಹಣ್ಣು ತಿನ್ನುವ ಅಭ್ಯಾಸ ಹೊಂದಿರುತ್ತಾರೆ. ಇದು ಜೀರ್ಣಕ್ರಿಯೆ ಸುಧಾರಿಸುವ ಜೊತೆಗೆ ಶರೀರಕ್ಕೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ಸರಿಯಾಗಿ ಒದಗಿಸುತ್ತದೆ.

ಕ್ರೀಡಾಪಟುಗಳ ಶಕ್ತಿಯ ಮೂಲವೆಂದರೆ ಬಾಳೆಹಣ್ಣು. ಇದರಲ್ಲಿರುವ ಸುಕ್ರೋಸ್, ಫ್ರಕ್ಟೋಸ್ ಮತ್ತು ಗ್ಲೂಕೋಸ್ ಶರೀರಕ್ಕೆ ತಕ್ಷಣ ಶಕ್ತಿ ನೀಡುವ ಮೂಲಕ ದೀರ್ಘಕಾಲ ಚೈತನ್ಯ ತುಂಬಲು ಸಹಕಾರಿಯಾಗುತ್ತವೆ. ಇದನ್ನು ವೈದ್ಯರೂ ಊಟದ ಬಳಿಕ ಅಥವಾ ವ್ಯಾಯಾಮದ ಬಳಿಕ ಸೇವಿಸಲು ಸಲಹೆ ನೀಡುತ್ತಾರೆ.

ಪೌಷ್ಟಿಕ ಅಂಶಗಳ ದೃಷ್ಟಿಯಿಂದ ನೋಡಿದರೆ, ಬಾಳೆಹಣ್ಣು ಪೋಟ್ಯಾಸಿಯಮ್, ಮೆಗ್ನೀಸಿಯಂ, ವಿಟಮಿನ್ ಎ, ಬಿ, ಸಿ ಮತ್ತು ವಿಟಮಿನ್ ಬಿ6 ಅನ್ನು ಒಳಗೊಂಡಿದ್ದು, ಹೃದಯದ ಆರೋಗ್ಯ ಕಾಪಾಡಲು ಹಾಗೂ ತೂಕ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ. ಮಕ್ಕಳಿಗೆ ಪ್ರತಿದಿನ ಬಾಳೆಹಣ್ಣು ನೀಡುವುದರಿಂದ ಆಸ್ತಮಾ ತಡೆಯಲು ಸಾಧ್ಯವಿದೆ. ದೇಹದ ನರಮಂಡಲವನ್ನು ಬಲಪಡಿಸುವ ಜೊತೆಗೆ ಬಿಳಿ ರಕ್ತಕಣಗಳ ಉತ್ಪತ್ತಿಯನ್ನು ಹೆಚ್ಚಿಸುತ್ತದೆ. ಹಸಿರು ಬಾಳೆಹಣ್ಣಿಗಿಂತ ಹೆಚ್ಚು ಪ್ರಯೋಜನ ನೀಡುವ ಬಣ್ಣ ಬದಲಾದ ಕಪ್ಪು ಬಾಳೆಹಣ್ಣು ಇನ್ನೂ ಹೆಚ್ಚು ಪರಿಣಾಮಕಾರಿ.

ನಿದ್ರಾ ಸಮಸ್ಯೆ, ಹೊಟ್ಟೆ ನೋವು, ಅಜೀರ್ಣ, ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಕಡಿಮೆ ಮಾಡಲು ಬಾಳೆಹಣ್ಣು ಸಹಕಾರಿಯಾಗಿದೆ. ಇದರಲ್ಲಿರುವ ವಿಟಮಿನ್ ಬಿ-6 ಹಾಗೂ ಮೆಗ್ನೀಸಿಯಂ ಸ್ನಾಯುಗಳನ್ನು ಸಡಿಲಗೊಳಿಸುವ ಮೂಲಕ ಗುಣಮಟ್ಟದ ನಿದ್ರೆ ನೀಡುತ್ತದೆ. ಬಾಳೆಹಣ್ಣು ನಿಯಮಿತವಾಗಿ ಸೇವಿಸಿದರೆ ರಕ್ತದೊತ್ತಡ ಸಮತೋಲನಗೊಳ್ಳುವ ಜೊತೆಗೆ ದೇಹದ ಪ್ರತಿರೋಧಕ ಶಕ್ತಿ ಸುಧಾರಿಸುತ್ತದೆ.

ಆದ್ದರಿಂದ, ಆರೋಗ್ಯಕರ ಜೀವನಕ್ಕಾಗಿ ಪ್ರತಿದಿನ ಬಾಳೆಹಣ್ಣನ್ನು ಆಹಾರದಲ್ಲಿ ಸೇರಿಸಿಕೊಳ್ಳಿ!

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಮಣಿಪಾಲದಲ್ಲಿ ಸಂಚಾರ ನಿಯಮ ಉಲ್ಲಂಘನೆ: ಲಕ್ಷಾಂತರ ರೂ. ದಂಡ ಸಂಗ್ರಹ

ಸಂಚಾರ ನಿಯಮ ಉಲ್ಲಂಘನೆ ಮತ್ತು ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಲಕ್ಷಾಂತರ ರೂಪಾಯಿ ದಂಡ ಸಂಗ್ರಹಿಸಲಾಗಿದೆ.

ಕಲಾಪದ ವೇಳೆ ಮೊಬೈಲ್‌ನಲ್ಲಿ ‘ರಮ್ಮಿ’ ಆಟದಲ್ಲಿ ಮುಳುಗಿದ ಕೃಷಿ ಸಚಿವ

ಮಹಾರಾಷ್ಟ್ರ ವಿಧಾನಸಭೆಯ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಓರ್ವ ಸಚಿವರು ತಮ್ಮ ಮೊಬೈಲ್ ಫೋನ್‌ನಲ್ಲಿ 'ರಮ್ಮಿ' ಗೇಮ್ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಆಧಾರ್ ಕಾರ್ಡ್‌ಗೆ ಅವಧಿ ಇದೆಯೇ? ನಿಮ್ಮ ಆಧಾರ್ ಸಿಂಧುತ್ವವನ್ನು ಪರಿಶೀಲಿಸುವುದು ಹೇಗೆ?

ಸಾಮಾನ್ಯವಾಗಿ ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್‌ನಂತಹ ಗುರುತಿನ ಚೀಟಿಗಳಿಗೆ ನಿರ್ದಿಷ್ಟ ಅವಧಿ ಇರುತ್ತದೆ. ಆದರೆ, ಬಹುತೇಕರಿಗೆ ಆಧಾರ್ ಕಾರ್ಡ್‌ಗೆ ಎಕ್ಸ್‌ಪೈರಿ ದಿನಾಂಕದ ಬಗ್ಗೆ ಗೊಂದಲವಿದೆ.

ಉಪರಾಷ್ಟ್ರಪತಿ ಧಂಖರ್: ಭಾರತದ ಸಾರ್ವಭೌಮತೆಗೆ ಸವಾಲಿಲ್ಲ, ವಿದೇಶಿ ಹಸ್ತಕ್ಷೇಪ ಅಸಾಧ್ಯ

ಪಾಕಿಸ್ತಾನದೊಂದಿಗಿನ ಭಾರತದ ಸಂಬಂಧಗಳ ಕುರಿತು ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಹೇಳಿಕೆಗಳ ಹಿನ್ನೆಲೆಯಲ್ಲಿ, ಭಾರತದ ಉಪರಾಷ್ಟ್ರಪತಿ ಜಗದೀಪ್ ಧಂಖರ್ ಅವರು ದೇಶದ ಸಾರ್ವಭೌಮತ್ವ ಮತ್ತು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವಿಕೆಯ ಬಗ್ಗೆ ಬಲವಾದ ಸಂದೇಶವನ್ನು ರವಾನಿಸಿದ್ದಾರೆ