
ಔರಾದ ತಾಲೂಕಿನ ವಿಜಯನಗರ ತಾಂಡಾ ಶಿವಾರದಲ್ಲಿ ಅಕ್ರಮವಾಗಿ ಬಚ್ಚಿಟ್ಟಿದ್ದ 56 ಕೆ.ಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿ ಅಂಬಾಜಿ (56) ಎಂಬಾತನನ್ನು ಬಂಧಿಸಿದ್ದಾರೆ.
ಘಟನೆ ವಿವರ:
ಆರೋಪಿಯು ತನ್ನ ಹೊಲದ ಸೊಯಾಬಿನ್ ಹೊಟ್ಟಿನಲ್ಲಿ ಗಾಂಜಾ ಬಚ್ಚಿಟ್ಟಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಸಂತಪೂರ ಠಾಣೆಯ ಪಿಎಸ್‌ಐ ನಂದಕುಮಾರ ಮುಳೆ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಈ ಕಾರ್ಯಾಚರಣೆಯಲ್ಲಿ ‘ದೀಪಾ’ ಎಂಬ ಶ್ವಾನ ಪ್ರಮುಖ ಪಾತ್ರ ವಹಿಸಿ, ಗಾಂಜಾ ಪತ್ತೆ ಹಚ್ಚಲು ನೆರವಾಯಿತು.
ಈ ದಾಳಿಯಲ್ಲಿ ತಹಸೀಲ್ದಾರ ಮಲ್ಲಶೆಟ್ಟಿ ಚಿದ್ರೆ ಹಾಗೂ ಪೊಲೀಸರು ಸುನೀಲಕುಮಾರ ಕೋರೆ, ಏಕನಾಥ, ಕೊಟ್ರೇಶ್, ರಾಮರೆಡ್ಡಿ, ಸುಭಾಷ, ಸಿದ್ದಣ್ಣ, ಗೌತಮ್ ಸೇರಿ ಹಲವು ಸಿಬ್ಬಂದಿಗಳು ಭಾಗವಹಿಸಿದ್ದರು.