spot_img

ಕೇಂದ್ರ ಸರ್ಕಾರ ಜಿ.ಎಸ್.ಟಿ ನೋಟೀಸ್ ನೀಡಿದ್ದರೆ ರಾಜ್ಯ ಸರ್ಕಾರ ಹಿಂಪಡೆಯಲು ಸಾಧ್ಯವೇ..? ಸಾಮಾನ್ಯ ಜ್ಞಾನವಿಲ್ಲದ ಕಾಂಗ್ರೆಸ್ ನಾಯಕರು

Date:

spot_img

ಕಾರ್ಕಳ : ಸರ್ಕಾರದ ಅಡಿಯಲ್ಲಿ CGST ಮತ್ತು ರಾಜ್ಯ ಸರ್ಕಾರಗಳ‌ ಅಡಿಯಲ್ಲಿ SGST ಎರಡು ಭಾಗಗಳಿದೆ. ಸಣ್ಣಪುಟ್ಟ ವ್ಯಾಪಾರಿಗಳಿಗೆ ಟೀ ಅಂಗಡಿಗಳಿಗೆ, ಕಾಂಡಿಮೆಂಡ್ಸ್, ಬೇಕರಿಗಳಿಗೆ ನೋಟಿಸ್ ನೀಡಿರುವುದು ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆ. ಇದರಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರವಿಲ್ಲ. ಜಿ. ಎಸ್. ಟಿ‌ ಕೌನ್ಸಿಲ್ ನಲ್ಲಿ ಯಾವುದೇ ತೀರ್ಮಾನ‌ ತಗೆದುಕೊಳ್ಳಲು ಮಹತ್ವದ ಪಾತ್ರ ವಹಿಸಿರುವುದು ರಾಜ್ಯ ಸರ್ಕಾರಗಳು. ಕೇಂದ್ರ ಸರ್ಕಾರಕ್ಕೆ ಕೇವಲ 3 ನೇ ಒಂದು ಭಾಗ ಮಾತ್ರ ಅಧಿಕಾರವಿದೆ. ಉಳಿದ ಅಧಿಕಾರ ರಾಜ್ಯ ಸರ್ಕಾರದ ಕೈಯಲ್ಲಿದೆ. 3ನೇ ಎರಡು ಭಾಗದಷ್ಟು ಅಧಿಕಾರ ಹೊಂದಿರುವ ರಾಜ್ಯ ‌ಸರ್ಕಾರಗಳ ನಿರ್ಣಯವೇ ಅಂತಿಮವಾಗಿರಲಿದೆ.

ಇದೀಗ ಹಣ್ಣು, ಹಾಲು, ತರಕಾರಿ ಸೇರಿದಂತೆ ದಿನನಿತ್ಯದ ಅಗತ್ಯ ಸರಕು ಸೇವಾ ವ್ಯಾಪಾರಿಗಳಿಗೆ ನೋಟಿಸ್ ನೀಡಿ‌, ಅವರಿಗೆ ತೊಂದರೆ ಕೊಡುತ್ತಿದ್ದಾರೆ.ಬೇರೆ ಯಾವುದೇ ರಾಜ್ಯಗಳಲ್ಲಿ ನೀಡದ ನೋಟಿಸ್, ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರ ಸಣ್ಣಪುಟ್ಟ ವ್ಯಾಪಾರಿಗಳಿಗೆ ನೋಟಿಸ್ ನೀಡಿದೆ. ಯುಪಿಐ ಟ್ರಾನ್ಸಾಕ್ಷನ್ ಇದೀಗ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಈ ಮಧ್ಯೆ ರಾಜ್ಯದಲ್ಲಿ ಡಿಜಿಟಲ್ ಟ್ರಾನ್ಸಾಕ್ಷನ್ ಹದಗೆಡಿಸುವ ದುಸಾಹಸಕ್ಕೆ ಕಾಂಗ್ರೆಸ್ ಸರ್ಕಾರ ಕೈಹಾಕಿರುವುದು ನಿಜಕ್ಕೂ ದುರಂತ.

ಇದೀಗ ಸಣ್ಣಪುಟ್ಟ ವ್ಯಾಪಾರಸ್ಥರಿಂದ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸಣ್ಣ ವ್ಯಾಪಾರಿಗಳ ಮೇಲೆ ಬಲವಂತದ ಕ್ರಮ ಸದ್ಯಕ್ಕಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಆದರೆ ಕಾಂಗ್ರೆಸ್ಸಿನ ನಾಯಕರುಗಳು ನೋಟೀಸು ಕೇಂದ್ರ ಸರ್ಕಾರದ ಅಧೀನದಲ್ಲಿರುವ ತೆರಿಗೆ ಇಲಾಖೆ ನೀಡಿದೆ ಎಂದು ತಪ್ಪು ಮತ್ತು ಸುಳ್ಳು ಮಾಹಿತಿ ನೀಡುತಿದ್ದಾರೆ. ಕೇಂದ್ರ ಸರ್ಕಾರ ನೋಟೀಸ್ ನೀಡಿದ್ದರೆ ರಾಜ್ಯ ಸರ್ಕಾರ ಹಿಂಪಡೆಯಲು ಸಾಧ್ಯವೇ ? ಎಂಬ ಸಾಮಾನ್ಯ ಜ್ಞಾನ ಕಾಂಗ್ರೆಸಿನ ನಾಯಕರಿಗಿಲ್ಲವೇ ?ಎಲ್ಲದಕ್ಕೂ ಕೇಂದ್ರದ ಮೇಲೆ ಬೆರಳು ತೋರಿಸುವುದನ್ನು ಬಿಟ್ಟು ವಾಸ್ತವ ವಿಷಯ ಜನರಿಗೆ ತಿಳಿಯಪಡಿಸಿ. ನಿಮ್ಮ ಸುಳ್ಳನ್ನು ನಂಬುವಷ್ಟು ಜನ ದಡ್ಡರಲ್ಲ. ಸಣ್ಣಪುಟ್ಟ ವ್ಯಾಪಾರಿಗಳ ಮೇಲೆ ತೆರಿಗೆಯ ಹೊರೆ ಹಾಕಲು ಹೋಗಿ ಕೈ ಸುಟ್ಟುಕೊಂಡ ಕಾಂಗ್ರೇಸ್ ಸರ್ಕಾರದ ನಡೆಯನ್ನು ಜನತೆಯ ಗಮನಿಸುತ್ತಿದ್ದಾರೆ. ಇನ್ನಾದರೂ ಕಪಟ ನಾಟಕ ಬಿಟ್ಟು ಜನಪರ ಆಡಳಿತದ ಕಡೆ ಗಮನ ನೀಡಿ ಎಂದು ಕಾರ್ಕಳ ಬಿಜೆಪಿ ವಕ್ತಾರರಾದ ರವೀಂದ್ರ ಮೊಯ್ಲಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕಾರ್ಕಳದ ಗೋವಿಂದೂರಿನಲ್ಲಿ ಭೀಕರ ಗಾಳಿ ಮಳೆಗೆ ಅಯ್ಯಪ್ಪ ಶಿಬಿರದ ಮೇಲ್ಚಾವಣಿ ಕುಸಿತ

ಇಂದು ಮದ್ಯಾಹ್ನ 3:00 ಸುಮಾರಿಗೆ ಬಿರುಸಿನ ಗಾಳಿ ಮಳೆಗೆ ಕಾರ್ಕಳದ ಗೋವಿಂದೂರಿನ ಅಯ್ಯಪ್ಪ ಶಿಬಿರದ ಮೇಲ್ಚಾವಣಿ ಗಾಳಿಯ ರಭಸಕ್ಕೆ ಹಾರಿ ನುಚ್ಚುನೂರಾಗಿದೆ.

40 ದಾಟಿದವರ ಸಂಧು ನೋವಿಗೆ ಆಯುರ್ವೇದದಲ್ಲಿದೆ ಪರಿಣಾಮಕಾರಿ ಪರಿಹಾರ!

ವಯಸ್ಸು 40 ದಾಟಿದಂತೆ ಕಾಣಿಸಿಕೊಳ್ಳುವ ಸಂಧು ನೋವು ಅದೆಷ್ಟೋ ಜನರನ್ನು ಕಾಡುತ್ತದೆ.

ವಾಟ್ಸಾಪ್‌ನಿಂದ ಹೊಸ AI ವೈಶಿಷ್ಟ್ಯ ‘ಕ್ವಿಕ್ ರಿಕ್ಯಾಪ್’: ಇನ್ನು ಮಿಸ್ಡ್ ಮೆಸೇಜ್ ಚಿಂತೆ ಇಲ್ಲ!

ಮೆಟಾ ಕಂಪನಿಯು ಅಭಿವೃದ್ಧಿಪಡಿಸಿರುವ ವಾಟ್ಸಾಪ್ ಕ್ವಿಕ್ ರಿಕ್ಯಾಪ್ AI (WhatsApp Quick Recap AI) ಎಂಬ ನೂತನ ಕೃತಕ ಬುದ್ಧಿಮತ್ತೆ ಆಧಾರಿತ ವೈಶಿಷ್ಟ್ಯವು, ಬಳಕೆದಾರರು ಗ್ರೂಪ್‌ಗಳು ಅಥವಾ ವೈಯಕ್ತಿಕ ಚಾಟ್‌ಗಳಲ್ಲಿ ಮಿಸ್ ಮಾಡಿಕೊಂಡ ಸಂದೇಶಗಳನ್ನು ಸರಳ ಮತ್ತು ಅರ್ಥಪೂರ್ಣವಾಗಿ ಸಂಕ್ಷಿಪ್ತಗೊಳಿಸಲು ನೆರವಾಗಲಿದೆ.

ಜ್ಞಾನಸುಧಾ : ಮೌಲ್ಯಸುಧಾ-38ರಲ್ಲಿ ‘ಕಾರ್ಗಿಲ್ ವಿಜಯ ದಿವಸ’

ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಸಹಯೋಗದಲ್ಲಿ ತಿಂಗಳ ಸರಣಿಯ ಮೌಲಿಕ ಕಾರ್ಯಕ್ರಮ ಮೌಲ್ಯಸುಧಾ ಮಾಲಿಕೆ-38ನ್ನು ಕಾರ್ಗಿಲ್ ವಿಜಯದಿವಸದ ಶುಭಸಂದರ್ಭದಲ್ಲಿ ಆಯೋಜಿಸಲಾಗಿದೆ.