
ಫೆಬ್ರವರಿ. 23: ದುಬೈನಲ್ಲಿ ಭಾನುವಾರ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಹೈ ವೋಲ್ಟೇಜ್ ಪಂದ್ಯದಲ್ಲಿ ಭಾರತ 6 ವಿಕೆಟ್ ಗಳಿಂದ ಪಾಕಿಸ್ತಾನವನ್ನು ಮಣಿಸಿ ಭರ್ಜರಿ ಗೆಲುವು ದಾಖಲಿಸಿದೆ.
ಪಾಕಿಸ್ತಾನ 241ಕ್ಕೆ ಆಲೌಟ್:
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 49.4 ಓವರ್ ಗಳಲ್ಲಿ 241 ರನ್ ಗೆ ಆಲೌಟ್ ಆಯಿತು. ಶಕೀಲ್ 62, ರಿಜ್ವಾನ್ 46 ರನ್ ಗಳಿಸಿ ತಂಡಕ್ಕೆ ಆಧಾರ ಒದಗಿಸಿದರು. ಕುಲೀಪ್ ಯಾದವ್ 3 ವಿಕೆಟ್ ಪಡೆದು ಪಾಕಿಸ್ತಾನವನ್ನು ಕಡಿಮೆ ಮೊತ್ತಕ್ಕೆ ತಗ್ಗಿಸಿದರು.
ಕೊಹ್ಲಿಯ ಶತಕದ ಮಿಂಚು:
ಭಾರತದ ಆರಂಭಿಕರು ಉತ್ತಮ ಆರಂಭ ಪಡೆದರೂ, ನಾಯಕ ರೋಹಿತ್ ಶರ್ಮಾ 20 ರನ್ ಗಳಿಸಿ ಔಟ್ ಆದರು. ನಂತರ ಶುಭ್ಮನ್ ಗಿಲ್ (46) ಮತ್ತು ವಿರಾಟ್ ಕೊಹ್ಲಿ ತಂಡವನ್ನು ಮುಂದಕ್ಕೆ ಕೊಂಡೊಯ್ದರು. ಕೊನೆಗೆ ಕೊಹ್ಲಿ-ಶ್ರೇಯಸ್ ಐಯ್ಯರ್ ಜೋಡಿ ತಂಡವನ್ನು ಗೆಲುವಿನ ದಾರಿಯಲ್ಲಿ ಕೊಂಡೊಯ್ದು, ಕೊಹ್ಲಿ ಶತಕದ ಜೊತೆಗೆ ಗೆಲುವಿನ ರನ್ ಬಾರಿಸಿ ದಾಖಲೆ ನಿರ್ಮಿಸಿದರು.
ಐತಿಹಾಸಿಕ ಜಯ:
ಭಾರತ ಪಾಕಿಸ್ತಾನ ವಿರುದ್ಧ 6 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿ ಅಜೇಯವಾಗಿಯೇ ಮುಂದುವರಿದಿದೆ. ಅಜೇಯ 100 ರನ್ ಗಳಿಸಿದ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.