ಐಬಿ ಅಧಿಕಾರಿಯ ದಾರುಣ ಅಂತ್ಯ: ಕೇರಳದಲ್ಲಿ ರೈಲಿಗೆ ಡಿಕ್ಕಿಯಾಗಿ ಸಾವು

Date:

spot_img

ಕೇರಳದ ತಿರುವನಂತಪುರಂ ಪೆಟ್ಟಾ ರೈಲು ಹಳಿಯಲ್ಲಿ ಇಂಟೆಲಿಜೆನ್ಸ್ ಬ್ಯೂರೋ (IB) ಅಧಿಕಾರಿ ಮೇಘಾ (25) ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಜಯಂತಿ ಜನತಾ ಎಕ್ಸ್ಪ್ರೆಸ್ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತರಾಗಿದ್ದಾರೆ.

ಘಟನೆಯ ವಿವರ:
ಮೇಘಾ, ನಿವೃತ್ತ ಐಟಿಐ ಪ್ರಾಂಶುಪಾಲ ಮಧುಸೂದನನ್ ಮತ್ತು ಪಾಲಕ್ಕಾಡ್ ಕಲೆಕ್ಟರೇಟ್ ಉದ್ಯೋಗಿ ನಿಶಾ ಅವರ ಏಕೈಕ ಪುತ್ರಿಯಾಗಿದ್ದರು. ರಾತ್ರಿ ಕರ್ತವ್ಯ ಮುಗಿಸಿ ವಿಮಾನ ನಿಲ್ದಾಣದಿಂದ ಮನೆಗೆ ಮರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಲೋಕೋ ಪೈಲಟ್ ಮಾಹಿತಿ
ಸ್ಥಳೀಯರಿಂದ ಮಾಹಿತಿ ಪಡೆದ ಪೆಟ್ಟಾ ಪೊಲೀಸರು ಘಟನೆ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದು, ಕೂಲಂಕಷ ತನಿಖೆ ಆರಂಭಿಸಿದ್ದಾರೆ. ಲೋಕೋ ಪೈಲಟ್ ನೀಡಿದ ಮಾಹಿತಿಯಂತೆ, ಮೇಘಾ ಮೊಬೈಲ್‌ನಲ್ಲಿ ಮಾತನಾಡುತ್ತಾ ಹಳಿಯಲ್ಲಿ ನಡೆದು ಹೋಗುತ್ತಿದ್ದರು. ರೈಲು ಬರುತ್ತಿರುವುದನ್ನು ನೋಡಿ ದಿಢೀರ್ ತಲೆ ಇಟ್ಟು ಮಲಗಿದ್ದಾರೆ ಎಂದು ತಿಳಿಸಿದ್ದಾರೆ.

ಪೊಲೀಸರ ತನಿಖೆ:
ಮೇಘಾ ಅವರ ಐಡಿಬಿ ಗುರುತು ಪತ್ತೆಯಾದ ಬಳಿಕ ಆಕೆ ಫೋನ್‌ನಲ್ಲಿ ಕೊನೆಯ ಬಾರಿ ಯಾರೊಂದಿಗೆ ಮಾತನಾಡಿದರು ಎಂಬುದನ್ನು ಪತ್ತೆ ಹಚ್ಚಲು ಸೈಬರ್ ಪೊಲೀಸ್ ಸಹಾಯ ಪಡೆಯಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ರಾಹುಲ್ ಗಾಂಧಿ ಬಂಧನ: ಕಾರ್ಕಳ ಕಾಂಗ್ರೆಸ್ ಆಕ್ರೋಶ

ರಾಹುಲ್ ಗಾಂಧಿ ಬಂಧನ ಹಾಗೂ ವಿದ್ಯಾರ್ಥಿಗಳ ಮೇಲಿನ ಬಲಪ್ರಯೋಗ ಖಂಡಿಸಿ ಕಾರ್ಕಳ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಪೆರ್ವಾಜೆ ಸಾಯಿಬಾಬಾ ಮಂದಿರ ಅರ್ಚಕ ಲಕ್ಷ್ಮೀನಾರಾಯಣ ಭಟ್ ನಿಧನ

ಕಾರ್ಕಳದ ಪೆರ್ವಾಜೆ ಸಾಯಿಬಾಬಾ ಮಂದಿರದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಭಟ್ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಭಾರತೀಯ ಗೇಮಿಂಗ್ ಪ್ರಿಯರಿಗೆ ಶುಭಸುದ್ದಿ: ಮಾರುಕಟ್ಟೆಗೆ ಲಗ್ಗೆ ಇಟ್ಟ ಡೆಲ್‌ನ ಶಕ್ತಿಶಾಲಿ ಏಲಿಯನ್‌ವೇರ್ ಲ್ಯಾಪ್‌ಟಾಪ್‌ಗಳು

ಡೆಲ್ ಭಾರತದಲ್ಲಿ ಹೊಸ ಏಲಿಯನ್‌ವೇರ್ ಗೇಮಿಂಗ್ ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿದೆ. ನೂತನ ಬೆಲೆ, ಡಿಸ್ಪ್ಲೇ ಮತ್ತು ಪ್ರೊಸೆಸರ್ ವೈಶಿಷ್ಟ್ಯಗಳ ವಿವರ ಇಲ್ಲಿದೆ.

ದಿನ ವಿಶೇಷ – ರಾಷ್ಟ್ರೀಯ ಧ್ವಜ ದತ್ತು ದಿನ

ಪ್ರತಿ ವರ್ಷ ಜುಲೈ 22 ರಂದು ಭಾರತದ ರಾಷ್ಟ್ರೀಯ ಧ್ವಜ ದತ್ತು ದಿನವನ್ನು ಆಚರಿಸಲಾಗುತ್ತದೆ. ತಿರಂಗಾ ಧ್ವಜದ ಇತಿಹಾಸ, ವಿನ್ಯಾಸ ಮತ್ತು ಮಹತ್ವದ ಸಂಪೂರ್ಣ ವಿವರ ಇಲ್ಲಿದೆ.