
ಕೇರಳದ ತಿರುವನಂತಪುರಂ ಪೆಟ್ಟಾ ರೈಲು ಹಳಿಯಲ್ಲಿ ಇಂಟೆಲಿಜೆನ್ಸ್ ಬ್ಯೂರೋ (IB) ಅಧಿಕಾರಿ ಮೇಘಾ (25) ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಜಯಂತಿ ಜನತಾ ಎಕ್ಸ್ಪ್ರೆಸ್ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತರಾಗಿದ್ದಾರೆ.
ಘಟನೆಯ ವಿವರ:
ಮೇಘಾ, ನಿವೃತ್ತ ಐಟಿಐ ಪ್ರಾಂಶುಪಾಲ ಮಧುಸೂದನನ್ ಮತ್ತು ಪಾಲಕ್ಕಾಡ್ ಕಲೆಕ್ಟರೇಟ್ ಉದ್ಯೋಗಿ ನಿಶಾ ಅವರ ಏಕೈಕ ಪುತ್ರಿಯಾಗಿದ್ದರು. ರಾತ್ರಿ ಕರ್ತವ್ಯ ಮುಗಿಸಿ ವಿಮಾನ ನಿಲ್ದಾಣದಿಂದ ಮನೆಗೆ ಮರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಲೋಕೋ ಪೈಲಟ್ ಮಾಹಿತಿ
ಸ್ಥಳೀಯರಿಂದ ಮಾಹಿತಿ ಪಡೆದ ಪೆಟ್ಟಾ ಪೊಲೀಸರು ಘಟನೆ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದು, ಕೂಲಂಕಷ ತನಿಖೆ ಆರಂಭಿಸಿದ್ದಾರೆ. ಲೋಕೋ ಪೈಲಟ್ ನೀಡಿದ ಮಾಹಿತಿಯಂತೆ, ಮೇಘಾ ಮೊಬೈಲ್‌ನಲ್ಲಿ ಮಾತನಾಡುತ್ತಾ ಹಳಿಯಲ್ಲಿ ನಡೆದು ಹೋಗುತ್ತಿದ್ದರು. ರೈಲು ಬರುತ್ತಿರುವುದನ್ನು ನೋಡಿ ದಿಢೀರ್ ತಲೆ ಇಟ್ಟು ಮಲಗಿದ್ದಾರೆ ಎಂದು ತಿಳಿಸಿದ್ದಾರೆ.
ಪೊಲೀಸರ ತನಿಖೆ:
ಮೇಘಾ ಅವರ ಐಡಿಬಿ ಗುರುತು ಪತ್ತೆಯಾದ ಬಳಿಕ ಆಕೆ ಫೋನ್‌ನಲ್ಲಿ ಕೊನೆಯ ಬಾರಿ ಯಾರೊಂದಿಗೆ ಮಾತನಾಡಿದರು ಎಂಬುದನ್ನು ಪತ್ತೆ ಹಚ್ಚಲು ಸೈಬರ್ ಪೊಲೀಸ್ ಸಹಾಯ ಪಡೆಯಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.